ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ-ಮ-17, ಅಕಾಲಿಕ ಮಳೆಗೆ ತತ್ತರಿಸಿರುವ ಜಿಲ್ಲೆಯ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸದೇ ನಾಪತ್ತೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸಬೇಕೆಂದು ರೈತ ಸಂಘದಿಂದ ಮಾನ್ಯ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ತಹಸೀಲ್ದಾರ್ ಮುಖಾಂತರ ಮನವಿ ನೀಡಿ ಆಗ್ರಹಿಸಲಾಯಿತು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜಾ ಸೇವಕರಾಗಿ ಕೆಲಸ ಮಾಡಬೇಕಾದ ಜನ ಪ್ರತನಿಧಿಗಳು ಜನ ವಿರೋಧಿ ನೀತಿಗಳಿಂದ ಇಲಾಖೆಗಳಲ್ಲಿ ಭ್ರಷ್ಟಾಚಾರ ಹಾಗೂ ದೇಶದಲ್ಲಿ ಬಡತನ ಹೆಚ್ಚಾಗುವ ಜೊತೆಗೆ ಸಿನಿಮ ನಿರ್ಮಾಣ ಮಾಡಿ ಬಣ್ಣದ ಲೋಕ ಕಂಡಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ರವರು ಜಿಲ್ಲೆಯ ಜನರ ವಿಶ್ವಾಸಗೊಳಿಸುವಲ್ಲಿ ವಿಫಲವಾಗಿದ್ದಾರೆ. ಇವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಟ್ಟು ಜಿಲ್ಲೆಯ ಜನರ ಕಷ್ಟಕ್ಕೆ ಸ್ಪಂಧಿಸುವ ಸಚಿವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರವನ್ನು ಆಗ್ರಹಿಸಿದರು.
ಮನವಿ ನೀಡಿ ಮಾತನಾಡಿದ ರವರು ಅತಿವೃಷ್ಟಿ ಅನಾವೃಷ್ಟಿ ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ಜಿಲ್ಲೆಯ ಜನ ಸಾಮಾನ್ಯರ ಸಮಸ್ಯೆಗಳನ್ನು ಕೇಂದ್ರ ಸ್ಥಾನದಲ್ಲಿದ್ದು, ಬಗೆ ಹರಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಮಕವ್ಯಸ್ಥೆ ಸಚಿವರಾಗಿ ಬದಲಾಗಿದ್ದಾರೆ. ಜಿಲ್ಲೆಯ ಗಂಧಗಾಳಿ ಗೊತ್ತಿಲ್ಲದ ಜನ ಪ್ರತಿನಿಧಿಗಳಿಗೆ ಉಸ್ತುವಾಗಿ ಪಟ್ಟ ಕಟ್ಟಿದರೆ ಅದರ ನೋವು ಜಿಲ್ಲೆಯ ಜನರು ಪಡಬೇಕಾಗುತ್ತದೆ ಎಂಬುದು ಕೋಲಾರ ಜಿಲ್ಲೆಯ ಜನತೆಗೆ ಹತ್ತಾರು ವರ್ಷಗಳಿಂದ ಜಿಲ್ಲೆಯ ಜನರ ಕಣ್ಣೀರಿಗೆ ಉಸ್ತುವಾರಿ ಸಚಿವರು ಸ್ಪಂಧಿಸುತ್ತಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಜಿಲ್ಲಾದ್ಯಂತ ಮುಂಗಾರು ಮಳೆ ಆರ್ಭಟಕ್ಕೆ ಕೆರೆಗಳು ತುಂಬಿ ತುಳುಕುತ್ತಿದ್ದು, ಕೆರೆಗಳಿಗೆ ಭಾಗಿಣಿ ಅರ್ಪಿಸುವ ಹಾಗೂ ಮತ್ತಿತರ ಸರ್ಕಾರಿ ಕಛೇರಿಗಳ ಉದ್ಘಾಟನೆ ಮತ್ತು ಕಾರ್ಯಕರ್ತರ ಸಮಾವೇಶಗಳಿಗೆ ಮಾತ್ರ ಸೀಮಿತವಾಗಿರುವ ಉಸ್ತುವಾರು ಸಚಿವರು ಜಿಲ್ಲೆಯ ರೈತರು ಅಕಾಲಿಕ ಮಳೆಗೆ ನಷ್ಟವಾಗಿರುವ ಹೂ ತೋಟಗಾರಿಕಾ ಬೆಳೆಗಳು ಕೈಗೆ ಸಿಗದೆ ಸಂಕಷ್ಟದಲ್ಲಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಸಭೆ ಕರೆಯದೆ ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದಾರೆ.
ಸರ್ಕಾರಿ ಕಛೇರಿಗಳು ದಲ್ಲಾಳಿಗಳ ಕಛೇರಿಯಾಗಿ ಮಾರ್ಪಟ್ಟಿವೆ. ಪಿನಂಬರ್ ದುರಸ್ತಿ ಹೆಸರಿನಲ್ಲಿ ತಾಲ್ಲೂಕು ಕಂದಾಯ ಸರ್ವೆ ಇಲಾಖೆ ಲಕ್ಷ ಲಕ್ಷ ಲಂಚ ಪಡೆದು ತಿಗಣಿಗಳಂತೆ ರೈತರ ರಕ್ತವನ್ನು ಹೀರುತ್ತಿರುವ ಜೊತೆಗೆ 32 ಕಛೇರಿ ಭ್ರಷ್ಟಾಚಾರ ಕಛೇರಿಗಳಾಗಿ ಮಾರ್ಪಟ್ಟು ಹಣ ಕೊಟ್ಟರೆ ಮಾತ್ರ ಜನ ಸಾಮಾನ್ಯರ ಕೆಲಸಗಳಾಗುವ ಮಟ್ಟಕ್ಕೆ ಜಿಲ್ಲಾಡಳಿತ ಹದಗೆಟ್ಟಿದ್ದರೂ ಇದರ ಬಗ್ಗೆ ದ್ವನಿ ಗೂಡಬೇಕಾದ ಉಸ್ತುವಾರಿ ಸಚಿವರ ದ್ವನಿ ಬೆಂಗಳೂರು ಐಷಾರಾಮಿ ಜೀವನಕ್ಕೆ ಹೊಂದಿಕೊಂಡು ಚಲನ ಚಿತ್ರ ನಿರ್ಮಾಣ ಮಾಡಿದ ಹಾಗೆ ಕೋಲಾರ ಜಿಲ್ಲೆಯ ಜನರ ಚಿತ್ರಣವಾಗಿ ಮಾರ್ಪಟ್ಟಿದೆ ಎಂದು ಉಸ್ತುವಾರಿ ಸಚಿವರ ವಿರುದ್ದ ವೆಂಗ್ಯವಾಡಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಜಿಲ್ಲೆಯ ಜ್ವಲಂತ ಸಮಸ್ಯಗಳಿಗೆ ಸ್ಪಂಧಿಸದೆ ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಆದೇಶ ಮಾಡಿ ಇಲ್ಲವೆ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸಬೇಕೆಂದು ಮಾನ್ಯರನ್ನು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ವಿಲಯಂ ರವರು ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರಸವೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳನಿಗೌಡ ನಗರ ಸಂಚಾಲಕ ಮಂಗಸಂದ್ರ ನಾಗೇಶ್, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ವೆಂಕಟೇಶಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾಲೂರು ತಾಲ್ಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮಾಸ್ತಿ ಹರೀಶ್, ಮುನಿರಾಜು, ಚಂದ್ರಪ್ಪ, ಮಂಗಸಂದ್ರ ಪಿ.ಮುನಿಯಪ್ಪ, ಅಶ್ವಥಪ್ಪ, ಮರಗಲ್ ಮುನಿಯಪ್ಪ, ಮುಂತಾದವರಿದ್ದರು.