ಅಗಲಿದ ಮಾವುತನಿಗೆ ಗಜ ರಾಜನಿಂದ ಅಂತಿಮ ನಮನದ ವಿದಾಯ; ಕೇರಳದಲ್ಲಿ ನಡೆದ ಮನಕಲಕುವ ಘಟನೆ

JANANUDI.COM NETWORK

        (ಮಾನವರಲ್ಲಿ ಕೆಲವರಿಗೆ ನಮಗೆ ಸಾಕಿ ತರಬೇತಿ ನೀಡಿದವರಿಗೆ ಗೌರವ ಕೊಡುವ ಒಳ್ಳೆಯ ಗುಣಗಳು ಇರುವುದಿಲ್ಲಾ, ಆದರೆ ನಾವು ಸಾಕಿದ ಸಾಕು ಪ್ರಾಣಿಗಳಿಗೆ, ತಮ್ಮನ್ನು ಸಾಕಿದ, ಪೋಷಿಸಿದ, ಪ್ರೀತಿ ತೊರೀಸಿದ ಮಾನವನಿಗೆ ಅವುಗಳು ಅಪಾರ ಪ್ರೀತಿ ತೋರಿಸುತ್ತವೆ. ಅದಕ್ಕೆ ಪೂರಾವೆಯಂಬಂತ್ತೆ, ಕೇರಳದಲ್ಲಿ ಹ್ರದಯ ತುಂಬಿ ಬರುವ ಒಂದು ಘಟನೆ ನಡೆಯಿತು. ಹಲವಾರು ವರ್ಷಗಳ ಕಾಲ ತನಗೆ ಮಾವುತನಾಗಿ, ಸಾಕಿದ, ಪ್ರೀತಿ ತೋರಿಸಿದ ಮಾವುತ ಓಮನಚೆಟ್ಟನ್ (74) ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾಗ ತನ್ನ ಮಾವುತನಿಗೆ ನಮನ ಮಾಡಿ ವಿದಾಯ ಹೇಳಲು, ಬ್ರಹ್ಮದಾತನ್ ಎಂಬ ಬ್ರಹತ್ ಆನೆ ಬಂದು ತನ್ನ ಮಾವುತನಿಗೆ ತನ್ನ ಸೊಂಡಿಲಿನಿಂದ ನಮಿಸಿದ, ದುಖಿಸಿದ ಘಟನೆ ಅಲ್ಲಿ ಸೇರಿದ ಎಲ್ಲರ ಹ್ರದಯಗಳು ಕರಗಿ ನೀರಾದವು)

JANANUDI.COM NETWORK

ಕೊಟ್ಟಾಯಮ್,ಜೂ.3; ಸುಮಾರು ಕಾಲು ಶತಮಾತಗಳವರೆಗೆ , ತನ್ನನ್ನು ಅಕ್ಕರೆಯಿಂದ ನೋಡಿಕೊಂಡ ಗುರುವಿಗೆ ವಿದಾಯ ಹೇಳಲು ಪಲ್ಲಟ್ ಬ್ರಹ್ಮದಾತನ್ ಬಂದಾಗ, ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳು ತುಂಬಿ ಬಂದವು. ಬ್ರಹ್ಮದಾತನ್ ಒಂದು ಆನೆ ಮತ್ತು ಓಮನಚೆಟ್ಟನ್ ಅದರ ಮಾವುತ. ಓಮನಚೆಟ್ಟನ್ ಎಂದು ಪ್ರೀತಿಯಂದ ಕರೆಯಲ್ಪಡುವ , ಕೊಟ್ಟಾಯಮ್ ಸಮೀಪದ ಲಕ್ಕತ್ತೂರಿನ ನಿವಾಸಿ, ಕುಞಕ್ಕಾಡ್ ದಾಮೋದರನ್ ನಾಯರ್, ಬ್ರಹ್ಮದಾತನ್‍ನ ಪಾಲಿಗೆ ಆತ ಕೇವಲ ಒಬ್ಬ ಮಾವುತ ಮಾತ್ರವಲ್ಲ, ಆಟದ ಸಂಗಾತಿಯೂ ಕೂಡ ಆಗಿದ್ದರು.  ಅಂತಹ ಅಪರೂಪದ ಸ್ನೇಹದಲ್ಲಿ ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಸ್ನೇಹವೂ ಒಂದು. ಕೇರಳ ರಾಜ್ಯದ ದೇವಾಲಯಗಳ ಯಾವುದೇ ಉತ್ಸವ ಇರಲಿ, ಬ್ರಹ್ಮದಾತನ್ ಮತ್ತು ಓಮನಚೆಟ್ಟನ್ ಇರಲೇಬೇಕಿತ್ತು. ಆ ಆನೆ ಮತ್ತು ಅದರ ಮಾವುತನ ಜೋಡಿ ಎಲ್ಲಾ ಗಜ ಪ್ರೇಮಿಗಳಿಗೂ ಅಚ್ಚುಮೆಚ್ಚು.

    ಓಮನಚೆಟ್ಟನ್ ಆನೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಅಕ್ಕರೆಯಿಂದ ಅವುಗಳ ಲಾಲನೆ-ಪಾಲನೆ ಮಾಡುತ್ತಿದ್ದ ಅಪರೂಪದ ಮಾವುತರಲ್ಲಿ ಅವರು ಕೂಡ ಒಬ್ಬರಾಗಿದ್ದರು. ಕೇರಳ ರಾಜ್ಯದ ಗಜಪ್ರೇಮಿಗಳ ಪ್ರಕಾರ, ಓಮನಚೆಟ್ಟನ್ ಯಾವುದೇ ಆನೆಗೆ, ಅದು ಎಷ್ಟು ಅವಿಧೇಯ ಆನೆಯೇ ಆಗಿರಲಿ ಯಾವತ್ತೂ ಏಟು ಹೊಡೆದಿಲ್ಲವಂತೆ.

     ಓಮನಚೆಟ್ಟನ್ ಜೂನ್ 3 ರಂದು ಗುರುವಾರ ಬೆಳಗ್ಗೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದಾಗ, ಬ್ರಹ್ಮದಾತನ್‍ನ ಒಡೆಯರಾದ ಪಲ್ಲಾಡ್ ರಾಜೇಶ್ ಮತ್ತು ಮನೋಜ್, ಮೆಲಂಪಾರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಓಮನಚೆಟ್ಟನ್ ಅವರ ಮನೆಗೆ ಬ್ರಹ್ಮದಾತನ್‍ನನ್ನು ಕರೆದೊಯ್ದರು, 

   ಆಗ ಬ್ರಹ್ಮದಾತನ್‍ ತನ್ನ ಮಾವುತನ ಮನೆ ಮುಂದಿರುವ ಮ್ರತ ಶರೀರವನ್ನು ನೋಡಿ  ದುಖದಿಂದ ಘೀಳಿಡುತ್ತಾ, ಸೊಂಡಿಲಿನಿಂದ ನಮನ ಮಾಡಿ ವಿದಾಯ ಹೇಳಿತು. ಅಷ್ಟು ಮಾತ್ರವಲ್ಲ, ಮಾವುತನ ಮಗ ಬಂದು ಆನೆಯನ್ನು ತಬ್ಬಿ ಅತ್ತಾಗ, ಬ್ರಹ್ಮದಾತನ್‍ ನ ಕಣ್ಣಾಲಿಗಳಲ್ಲಿ ನೀರು ಜಿನಿಗಿತು, ಸುಮಾರು 5 ನಿಮೀಷಗಳಷ್ಟುಕಾಲ ಅಲಿದ್ದು ದುಖದಿಂದ ಘೀಳಿಡುತ್ತಾ ಹಿಂದಕ್ಕೆ ತೆರಳಿತು. ಇದೊಂದು ಅಪರೂಪದ ಹ್ರದಯ ವಿದ್ರಾವಕ  ವಿದಾಯವಾಗಿದ್ದು. ಆ ಭಾವುಕ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಣ್ಣೀರನ್ನು ತಡೆದುಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು.