ನರಸಾಪುರ,ಮಾ.18: ಮಹೇಂದ್ರ ಏರೋ ಸ್ಟೈಸ್ ಕಂಪನಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಖಾಸಗಿ ವ್ಯಕ್ತಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವ ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಕಾರ್ಮಿಕ ಸಚಿವರು ಹಾಗೂ ಜಿಲ್ಲಾಡಳಿತವನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯ ಮಾಡಿದ್ದಾರೆ.
ರೈತರ ಕೃಷಿ ಭೂಮಿ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಸ್ಥಳಿಯ ಕಾರ್ಮಿಕರಿಗೆ ಉದ್ಯೋಗ ನೀಡದೆ ಹೊರ ರಾಜ್ಯದ ಕಾರ್ಮಿಕರಿಗೆ ಲಕ್ಷ ಲಕ್ಷ ಉದ್ಯೋಗವನ್ನು ಮಾರಾಟ ಮಾಡಿ ನ್ಯಾಯಯುತ ಕಾರ್ಮಿಕರ ಬೆವರಹನಿಗೆ ತಕ್ಕ ವೇತನ ಮೂಲಭೂತ ಸೌಕರ್ಯ ಕೇಳುವ ಕಾರ್ಮಿಕರ ಮೇಲೆ ಕಂಪನಿ ಆಡಳಿತ ಮಂಡಳಿಯೇ ಖಾಸಗಿ ರೌಡಿಗಳಿಂದ ಹಲ್ಲೆ ಮಾಡಿದರೆ ಇನ್ನೂ ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿರುವ ನಾವುಗಳು ನಮ್ಮ ಹಕ್ಕನ್ನು ಕೇಳಿದರೆ ಕಾರ್ಮಿಕ ವಿರೋದಿ ನೀತಿಯೇ ಜೊತೆಗೆ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಜೀವಂತವಾಗಿದ್ದಾರೆಯೇ ಇಲ್ಲವೇ? ಕಂಪನಿಗಳ ಗುಲಾಮರಾಗಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆಯೇ ಎಂದು ನಾಪತ್ತೆ ಆಗಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ದ ಅಸಮಾದಾನ ವ್ಯಕ್ತಪಡಿಸಿದರು.
ನ್ಯಾಯಯುತ ಬೇಡಿಕೆ ಈಡೇರಿಸಬೇಕಾದ ಜವಬ್ದಾರಿ ಕಂಪನಿಯ ಮಾಲೀಕರ ಹಾಗೂ ಆಡಳಿತ ಮಂಡಳಿಯ ಜವಬ್ದಾರಿ ಕಾರ್ಮಿಕ ಹಗಲು ರಾತ್ರಿ ಬೆವರು ಸುರಿಸಿ ಕಷ್ಟಪಟ್ಟರೆ ಮಾತ್ರ ಮಾಲೀಕನು ಎ.ಸಿ ಕಾರಿನಲ್ಲಿ ಭವ್ಯ ಬಂಗಲೆಯಲ್ಲಿ ಶ್ರೀಮಂತ ಜೀವನ ಸಾಗಿಸಲು ಕಾರ್ಮಿಕರ ಪರಿಶ್ರಮವೇ ಹೊರತು ಗುಂಡಾಗಳ ದೌರ್ಜನ್ಯವಲ್ಲ ಜೊತೆಗೆ ಹಲ್ಲೆ ನಡೆದ ದಿನ ಸಿ.ಸಿ ಕ್ಯಾಮಾರ ಕೆಲಸ ಮಾಡದಂತೆ ಸ್ಥಗಿತ ಮಾಡಿರುವ ಉದ್ದೇಶ ಏನೂ? ಕಾರ್ಮಿಕರ ಮೇಲೆ ಹಲ್ಲೇ ಮಾಡಬೇಕೆಂಬ ಉದ್ದೇಶದಿಂದಲೇ ಎಲ್ಲಾ ವ್ಯವಸ್ಥಿತ ಪಿತೂರಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಮೂಲಕ ಕಾರ್ಮಿಕ ವಿರೋದಿ ನೀತಿ ಅನುಸರಿಸುತ್ತಿರುವ ಹಾಗೂ ಹಲ್ಲೇ ಪ್ರಕರಣವನ್ನು ಗಂಬೀರವಾಗಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಪರಿಗಣಿಸದೇ ಇದ್ದರೆ ಕಾರ್ಮಿಕರ ನ್ಯಾಯಕ್ಕಾಗಿ ಕಂಪನಿ ಮುಂದೆ ಕಾರ್ಮಿಕರ ಜೊತೆ ಅಹೋರಾತ್ರಿ ದರಣಿ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಸಂಬಂದಪಟ್ಟ ಇಲಾಖೆಗಳಿಗೆ ಪತ್ರಿಕಾ ಹೇಳಿಕೆ ಮುಖಾಂತರ ಎಚ್ಚರಿಸಿದರು.