ಮುಳಬಾಗಿಲು ನ-10, ಜಿಲ್ಲಾದ್ಯಂತ ರೈತರಿಗೆ ವಂಚನೆ ಮಾಡಿರುವ ಪಸಲ್ ಭೀಮ ವಿಮೆ ಕಂಪನಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಮುಂಗಾರು ಮಳೆ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ರೈತ ಸಂಘದಿಂದ ವಡ್ಡಹಳ್ಳಿ ರಾಜ್ಯ ಹೆದ್ದಾರಿಯನ್ನು ನಷ್ಟ ಬೆಳೆ ಸಮೇತ ಬಂದ್ ಮಾಡಿ ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ರವಿಕುಮಾರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿ ರೈತರು ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಬೆಳೆ ಕಳೆದುಕೊಂಡ ರೈತನಿಗೆ ವಂಚಿಸಿ ವಿಮಾ ಕಂಪನಿಗಳನ್ನು ಉದ್ದಾರ ಮಾಡುವ ವ್ಯವಹಾರವಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಾ.ಕಾ.ಪಾರುಕ್‍ಪಾಷ, ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕೃಷಿ ಎಂಬ ಯುದ್ದದಲ್ಲಿ ಸೈನಿಕ ಎಂಬ ರೈತ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಎಂಬ ಶತ್ರುವಿನ ವಿರುದ್ದ ಮೂರನೇ ಮಹಾಯುದ್ದ ಮಾಡಬೇಕಾದ ಪರಿಸ್ಥಿತಿ ಇದೆ. ಸರ್ಕಾರಗಳ ರೈತ ವಿರೋಧಿ ನೀತಿಗಳಿಂದ ದಿನೇ ದಿನೇ ಕೃಷಿ ಕ್ಷೇತ್ರ ದುಬಾರಿ ಆಗುವ ಜೊತೆಗೆ ಶ್ರೀಮಂತರ ಪಾಲಾಗುತ್ತಿದೆ. ಕೃಷಿಯನ್ನೇ ನಂಬಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೋಟ್ಯಾಂತರ ರೈತ ಕುಟುಂಬಗಳಿ ಕೃಷಿ ಭೂಮಿಯನ್ನು ಮಾರಾಟ ಮಾಡಿ ಬದುಕಿನ ಬಂಡಿ ಸಾಗಿಸಲು ನಗರಗಳತ್ತ ವಲಸೆ ಹೋಗುವಂತಹ ಪರಿಸ್ಥಿತಿ ಇದ್ದರೂ ರೈತ ಕುಲವನ್ನು ಸಂರಕ್ಷಣೆ ಮಾಡುವ ಯಾವ ಸರ್ಕಾರಗಳು ನಿರ್ಧಾರ ಮಾಡದೆ ಇರುವುದು ದುರದೃಷ್ಟಕರ ಎಂದು ಅಸಮದಾನ ವ್ಯಕ್ತಪಡಿಸಿದರು.
ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಕಳೆದಿವೆ. ಆಡಳಿತರೂಡ ಚುನಾಯಿತ ಪ್ರತಿನಿಧಿಗಳು ವಿಮೆ ಕಂಪನಿಗಳ ವಿರುದ್ದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈ ಹಿಡಿಯಬೇಕಾದ ಪ್ರಧಾನ ಮಂತ್ರಿ ಪಸಲ್ ಭೀಮ ಯೋಜನೆ ಸಂಪೂರ್ಣ ಫೇಲ್ ಆಗಿದೆ ಎಂದು ಆರೋಪ ಮಾಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಳೆದ 4 ವರ್ಷಗಳಿಂದ ಜಿಲ್ಲಾದ್ಯಂತ ಅತಿವೃಷ್ಟಿ ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರವು ಇಲ್ಲ ಕಟ್ಟಿದ ವಿಮೆ ಹಣವು ಇಲ್ಲದೆ ರೈತರು ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್ (ಅಶ್ಯೂರ್ಡ್) ಬದಲಿಗೆ ಕಟ್ಟಿದ ಪ್ರಿಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇಕಡ 50 ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಾಗಿದೆ. ಆದರೆ ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದು ವಿಮಾ ಷರತ್ತುಗಳಲ್ಲಿ ಲೋಪ ವಿರುವುದು ಸೇರುವಂತೆ ವಿವಿಧ ಕಾರಣಗಳಿಂದ ರೈತರು ಸಂತೃಪ್ತಕರಾಗಿದ್ದಾರೆ. ರೈತರೇ ತಮ್ಮ ಎಲ್ಲಾ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪನಿಗಳ ಟೋಲ್ ಪ್ರೀ ಸಂಖ್ಯೆಗಳೆ ಕೆಲಸ ಮಾಡುತ್ತಿಲ್ಲವೆಂದು ಕಿಡಿಕಾರಿದರು.
ಸಾಲದಲ್ಲಿ ಕಂತುಕಡಿತ ಬ್ಯಾಂಕ್ ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತಿದೆ. ಕಡ್ಡಾಯ ವ್ಯವಸ್ಥೆ ಯಂತಾಗಿರುವ ಈ ವಿಮಾ ಕಂತು ಬಹುತೇಕ ವಿಮಾ ಕಂಪನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ ಉಳಿದ ಬಹುತೇಕ ರೈತರು ವಿಮಾ ಯೋಜನೆಯ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ಡಿ.ಸಿ.ಗಳ ಗಮನಕ್ಕೆ ವಿಮೆ ಕಂಪನಿಗಳ ವಂಚನೆಯನ್ನು ತಿಳಿಸದ ಕೃಷಿ ತೋಟಗಾರಿಕೆ ಅಧಿಕಾರಿಗಳು ಜಿಲ್ಲಾದ್ಯಂತ ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನಷ್ಟವಾಗಿರುವ ರೈತರ ಬೆಳೆಗಳಿಗೆ ಕಟ್ಟಿರುವ ವಿಮೆ ಹಣವನ್ನು ನೀಡುವಲ್ಲಿ ವಿಫಲವಾಗಿರುವ ಕಂಪನಿಗಳ ವಿರುದ್ದ ಜಿಲ್ಲಾಧಿಕಾರಿಗಳ ಗಮನಕ್ಕೆ ಅಂಕಿ ಅಂಶಗಳ ವರದಿ ನೀಡುತ್ತಿಲ್ಲ. ದೂರು ನೀಡಿದರೆ ಪರಿಶೀಲನೆ ಮಾಡುತ್ತೇವೆಂಬ ಬೇಜವಾಬ್ದಾರಿಯಿಂದ ಅಧಿಕಾರಿಗಳು ವರ್ತಿಸುತ್ತಾರೆ. ಇದು ಸಹ ವಿಮಾ ಕಂಪನಿಗಳಿಗೆ ವರದಾನವಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ರೈತರು ದೂರು ನೀಡಿದರೆ ವಿಮಾ ಪಾವತಿಯಲ್ಲಿ ವ್ಯತ್ಯಾಸವಾಗಿದ್ದು, ಸರಿಪಡಿಸುವಂತೆ ವಿಮೆ ಕಂಪನಿಗಳಿಗೆ ನೋಟೀಸ್ ನೀಡಿದ್ದೇವೆಂದು ಕೈ ತೊಳೆದುಕೊಳ್ಳುವ ಮೂಲಕ ನೇರವಾಗಿ ವಿಮಾ ಕಂಪನಿಗಳ ಜೊತೆ ಕೃಷಿ ಕಂದಾಯ ತೋಟಗಾರಿಕೆ ಅದಿಕಾರಿಗಳು ಸಮಪಾಲು ಪಡೆದು ರೈತರ ಬೆವರ ಹನಿಯನ್ನು ಕಸಿಯುತ್ತಿದ್ದಾರೆ ಎಂದು ದೂರು ನೀಡಿದರು.
ಮಾನ್ಯರು 24 ಗಂಟೆಯಲ್ಲಿ ರೈತರಿಗೆ ವಂಚನೆ ಮಾಡಿರುವ ವಿಮಾ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ನಷ್ಟ ರೈತರಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುಂದೆ ಆಹೋ ರಾತ್ರಿ ದರಣಿಯನ್ನು ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಮಾ ಕಂಪನಿ ವಂಚನೆ ಬಗ್ಗೆ ರೈತರ ದೂರುಗಳು ಹೆಚ್ಚಾಗಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ರಾಜ್ಯ ಪ್ರಾ.ಕಾ.ಪಾರುಕ್‍ಪಾಷ, ರಾಜ್ಯ ಕಾ.ಬಂಗಾರಿ ಮಂಜು, ಜಿಲ್ಲಾ ಉ.ಸುನಿಲ್‍ಕುಮಾರ್, ವಿಶ್ವನಾಥ್, ತಾಲ್ಲೂಕು ಪ್ರಾ.ಕಾ.ರಾಜೇಶ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ಜುಬೇರ್‍ಪಾಷ, ಹಾದಿಲ್‍ಪಾಷ, ಪದ್ಮಘಟ್ಟ ಧರ್ಮ ನಂಗಲಿ ನಾಗೇಶ್, ಹೆಬ್ಬಣಿ ರಾಮಮೂರ್ತಿ, ಶ್ರೀಕಾಂತ್, ಪುತ್ತೇರಿರಾಜು, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಅಣ್ಣೆಹಳ್ಳಿ ನಾಗರಾಜ್, ಮೇಲಾಗಾಣಿ ದೇವರಾಜ್, ಮೇಲಾಗಣಿ ವಿಜಯ್‍ಪಾಲ್, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ಸುರೇಶ್‍ಬಾಬು, ಮುಂತಾದವರು ಇದ್ದರು.