ಬಂಗಾರಪೇಟೆ, ಅ.06: ಕಸಬಾ ಹೊಬಳಿ ಕಾರಹಳ್ಳಿ ಕಂದಾಯ ವೃತ್ತದ ಸರ್ವೇ ನಂ.197 ರಲ್ಲಿ ಆಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವ ದಂದೆ ಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಒತ್ತುವರಿ ತೆರೆವುಗೊಳಿಸಬೇಕೆಂದು ರೈತ ಸಂಘದಿಂದ ತಹಶೀಲ್ದಾರ್ ದಯಾನಂದ್‍ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜನರ ತೆರಿಗೆ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆದು ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ ಅಧಿಕಾರಿಗಳು ಆಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಭೂ ಮಾಪೀಯರವರಿಗೆ ಕೆರೆ, ರಾಜಕಾಲುವೆ, ಗುಂಡುತೋಪು ಗೋಮಾಳವನ್ನು ಮಾರಾಟ ಮಾಡುತ್ತಿರುವುದು ತನ್ನ ವೃತ್ತಿಗೆ ದ್ರೋಹ ಬಗೆದಂತೆ ಎಂದು ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಕಂದಾಯ ಇಲಾಖೆಯ ಅವ್ಯಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಭೂಮಿಗೆ ಬಂಗಾರದ ಬೆಲೆ ಬಂದಿದ್ದೇ ತಡ ರಾತ್ರೋ ರಾತ್ರಿ ಆಕ್ರಮವಾಗಿ ಕಾಂಪೌಂಡ್ ನಿರ್ಮಿಸುತ್ತಿರುವ ದಂದೆಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ತಾಲ್ಲೂಕು ಆಡಳಿತಕ್ಕೆ ಕೂಗಳತೆ ದೂರದಲ್ಲಿರುವ ಕಾರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂ.197 ರಲ್ಲಿ 4 ಎಕರೆಗೆ ಆಕ್ರಮವಾಗಿ ಸುಬ್ಬಣ್ಣ ಎಂಬುವವರು ಕಾಂಪೌಂಡ್ ನಿರ್ಮಿಸಿದ್ದರೂ ಆ ವ್ಯಾಪ್ತಿಗೆ ಬರುವ ಕಂದಾಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಅಭಿವೃದ್ದಿ ಹಾಗೂ ಬಡವರಿಗೆ ನೀವೇಶನ ಮತ್ತು ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೀಸಲಿಡಲು ತಿಂಗಳಾನುಗಟ್ಟಲೆ ಅಲೆದಾಡಿದರು ಕಂದಾಯ ಅಧಿಕಾರಿಗಳಿಗೆ ಅಂಗೈ ಅಗಲ ಸರ್ಕಾರಿ ಭೂಮಿ ಸಿಗುವುದಿಲ್ಲ, ಮೇಲಾಧಿಕಾರಿಗಳೇ ಸರ್ಕಾರಿ ಭೂಮಿಯೇ ಇಲ್ಲ ಎಂದು ವರದಿ ನೀಡಿ ಕೈ ತೊಳೆದುಕೊಳ್ಳುತ್ತಿರುವ ಕಂದಾಯ ಅದಿಕಾರಿಗಳೇ ಆಕ್ರಮ ಕಾಂಪೌಂಡ್ ನಿರ್ಮಿಸುತ್ತಿರುವ ನಿಮ್ಮ ಭೂಮಿ ಅಲ್ಲವೇ ಎಲ್ಲಿಯೋ ಹುಟ್ಟಿ ರಾತ್ರೋ ರಾತ್ರಿ ಕಾರಹಳ್ಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಕಾಂಪೌಂಡ್ ನಿರ್ಮಿಸಲು ಆಕಾಶದಿಂದ ಉದುರಿಬಿಳುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
24 ಗಂಟೆಯಲ್ಲಿ ಆಕ್ರಮ ಕಾಂಪೌಂಡ್ ತೆರೆವುಗೊಳಿಸಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದು ನಿವೇಶನ ರಹಿತ ಬಡ ಕೂಲಿಕಾರ್ಮಿಕರಿಗೆ ಮಂಜೂರು ಮಾಡಿ ಇಲ್ಲವೇ ಕಾರಹಳ್ಳಿ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಮೀಸಲಿಡಬೇಕು ಇಲ್ಲವಾದರೆ ಗುಡಿಸಲುಗಳನ್ನು ಹಾಕುವ ಮುಖಾಂತರ ನಿರಂತರ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ದಯಾನಂದ್‍ರವರು ಸರ್ವೇ ನಂ.197 ರಲ್ಲಿ ಆಕ್ರಮ ಕಾಂಪೌಂಡ್ ತೆರೆವುಗೊಳಿಸಿ ತಾಲ್ಲೂಕು ಆಡಳಿತದ ವಶಕ್ಕೆ ಪಡೆಯುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಹಸಿರುಸೇನೆ ಜಿಲ್ಲಾದ್ಯಕ್ಷ ಪುತ್ತೇರಿ ರಾಜು, ಜಿಲ್ಲಾ ಉಪಾದ್ಯಕ್ಷ ಚಾಂದ್‍ಪಾಷ, ತಾಲ್ಲೂಕಾದ್ಯಕ್ಷ ಐತಾಂಡಹಳ್ಳಿ ಮುನ್ನಾ, ಬಾಬಜಾನ್, ಮೊಹಮದ್ ಷೊಹಿಬ್, ಆರೀಪ್, ಜಾವೇದ್, ಗೌಸ್, ಮುನಿಕೃಷ್ಣ, ವಕ್ರಕುಂಟೆ ಆಂಜಿನಪ್ಪ, ಹರೀಶ್, ನಾಗಯ್ಯ, ಮುನಿರಾಜು, ವಿಶ್ವ, ಯಾರಂಘಟ್ಟ ಗೀರೀಶ್, ಮಂಗಸಂದ್ರ ತಿಮ್ಮಣ್ಣ, ಮುಂತಾದವರಿದ್ದರು,