ನವದೆಹಲಿ: ವಿಮಾನದ ಮೂಲಕ ಸ್ವಿಟ್ಜರ್ಲೆಂಡ್ ನ ಮ್ಯೂನಿಚ್ ನಿಂದ ಬ್ಯಾಂಕಾಕ್ ಗೆ ಹೊರಟಿದ್ದ ದಂಪತಿಗಳ ನಡುವೆ ಜಗಳ ನಡೆದ ನಂತರ ವಿಮಾನದಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೆ ಹೋಗಿ ವಿಮಾನದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅದಕ್ಕಾಗಿ ದಾರಿ ಮಧ್ಯೆ ವಿಮಾನ ಪಾಕಿಸ್ಥಾನದಲ್ಲಿ ತುರ್ತು ಭೂಸ್ಪರ್ಶ ಮಾಡಲು ಚಿಂತಿಸಿದೆ. ಪಾಕಿಸ್ಥಾನದಲ್ಲಿ ಅನುಮತಿ ಸಿಗದ ಕಾರಣ್, ಪೈಲೆಟ್ ವಿಮಾನವನ್ನು ವಿಮಾನ ದೆಹಲಿಯಲ್ಲಿ ಲ್ಯಾಂಡ್ ಮಾಡಲಾಯಿತು.
ಲುಫ್ಥಾನ್ಸ (LH772) ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಗಂಡ ಹೆಂಡತಿ ಜಗಳಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ವೈಮಾನಿಕ ಭದ್ರತಾ ಸಿಬ್ಬಂದಿ ಎಎನ್ ಐಗೆ ತಿಳಿಸಿದ್ದಾರೆ, ಇಬ್ಬರ ನಡುವಿನ ಜಗಳದ ನಂತರ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು.
ಹೆಂಡತಿ ಗಲಾಟೆಯ ಸಂದರ್ಭದಲ್ಲಿ ಗಂಡ ತನಗೆ ಬೆದರಿಕೆ ಹಾಕಿದ್ದಾನೆಂದು,ಪೈಲೆಟ್ ಬಳಿ ಹೇಳಿ ಸಹಾಯ ಕೇಳಿದ್ದಾಳೆ. ವಿಮಾನ ಲ್ಯಾಂಡ್ ಆದ ಬಳಿಕ ಗಂಡ ಮತ್ತು ಹೆಂಡತಿಯನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ