

ಶ್ರೀನಿವಾಸಪುರ: ಭಾರತೀಯ ಸಂಸ್ಕøತಿಯಲ್ಲಿ ಹಬ್ಬ ಹರಿದಿನಗಳಿಗೆ ಮಹತ್ವ ನೀಡಲಾಗಿದೆ ಎಂದು ಸುಧೀರ ಚೈತನ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವೈಆರ್‍ಎಸ್ ಸಭಾಂಗಣದಲ್ಲಿ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ದೀಪಾವಳಿ ಹಾಗೂ ಕಾರ್ತೀಕ ಮಾಸದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ದೀಪೋತ್ಸವ ಹಾಗೂ ಜ್ಯೋತಿರ್ಬಿಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌರಾಣಿಕ ಹಾಗೂ ಸಾಂಸ್ಕøತಿಕ ಮಹತ್ವ ಹೊಂದಿರುವ ಹಬ್ಬಗಳು ಸಮಾಜದ ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸುತ್ತವೆ ಎಂದು ಹೇಳಿದರು.
ಯಾವುದೇ ಆಚಾರ ಹಾಗೂ ವಿಚಾರದ ನಡುವೆ ಸಮನ್ವಯ ಇರಬೇಕು. ದೀಪ ಜ್ಞಾನದ ಸಂಕೇತ. ಆತ್ಮಜ್ಞಾನದ ಬೆಳಕು ಎಲ್ಲೆಲ್ಲೂ ಹರಡಬೇಕು. ಆತ್ಮಶಕ್ತಿಗಿಂತ ಮಿಗಿಲಾದ ಆಯುಧವಿಲ್ಲ. ಆತ್ಮಶಕ್ತಿಗೆ ಎಲ್ಲವನ್ನೂ ಗೆಲ್ಲುವ ಸಾಮಥ್ರ್ಯ ಇದೆ. ಅದು ಧ್ಯಾನದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಯೋಗ ಶಿಕ್ಷಕ ನರಸಿಂಹರೆಡ್ಡಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಮಾಡುವಲ್ಲಿ ಯೋಗ ಮತ್ತು ಪ್ರಾಣಾಯಾಮ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಅರ್ಹ ವ್ಯಕ್ತಿಗಳು ಯೋಗಾಭ್ಯಾಸ ಮಾಡಬೇಕು. ಅದರ ಮಹತ್ವ ಅರಿಯಲು ಪೂರಕವಾಗಿ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಮುಖ್ಯ ಯೋಗ ಶಿಕ್ಷಕ ವೆಂಕಟೇಶ್ ಯೋಗ ಪಟುಗಳಿಗೆ ಜ್ಯೋತಿರ್ಬಿಂಬ ಧ್ಯಾನ ತರಬೇತಿ ನೀಡಿದರು. ದೀಪಾವಳಿ ಆಚರಣೆ ಮಹತ್ವ ಕುರಿತು ಮಾತನಾಡಿದರು.
ಶಿಕ್ಷಕಿಯರಾದರ ಮಂಜುಳ, ತಿಲೋತ್ತಮೆ, ಶಿಕ್ಷಕ ಕೆ.ಸಿ.ಶ್ರೀನಿವಾಸ್, ಉಪನ್ಯಾಸಕ ಎನ್.ಶಂಕರೇಗೌಡ ಇದ್ದರು.