JANANUDI.COM NETWORK
ಕುಂದಾಪುರ, ಫೆ.12: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಸಂಜೆ ಅತ್ಯಂತ ಪ್ರಾಚೀನ ದೇವಾಲಯವಾದ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊದ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.
ರೋಜರಿ ಚರ್ಚಿನ ಭಕ್ತರು ಜಪಮಾಲಾ ಭಕ್ತಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು. “ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ರೋಜರಿ ಮಾತೆ ದರ್ಶನ ನೀಡಿದಾಗ, ಬಿಳಿ ಮುಸುಕು, ನೀಲಿ ಬಟ್ಟೆ ಧರಿಸಿದ ಅವಳ ಪಾದಗಳಲ್ಲಿ ಚಿನ್ನದ ಗುಲಾಬಿಗಳು ಮತ್ತು ಮುತ್ತುಗಳಿಂದ ಕೂಡಿದ ಜಪಮಾಲೆ ಇತ್ತೆಂದು ಬರ್ನಾಡೇಟ್ ಹೇಳುತ್ತಾಳೆ. ಇಲ್ಲಿ ನನಗಾಗಿ ದೊಡ್ಡ ಇಗರ್ಜಿ ಕಟ್ಟಬೇಕು, ಜಪಮಾಲೆಯ ಭಕ್ತಿ ಹೆಚ್ಚಬೇಕು ಎಂದು ಬರ್ನಾಡೇಟ್ ಗೆ ಹೇಳುತ್ತಾಳೆ. ಮುಂದೆ ಅದರಂತೆ ಆಗುತ್ತದೆ, ಲೌರ್ಡೆಸ್ ಉರಿನಲ್ಲಿ ದರ್ಶನ ನೀಡಿದಕ್ಕೆ ಮೇರಿ ಮಾತೆ ಅಲ್ಲಿ ಲೂರ್ದ್ ಮಾತೆಯೆಂದು ಕರೆಯಲ್ಪಟ್ಟರು. ಮುಂದೆ ಬರ್ನಾಡೇಟ್ ಇವಳಿಗೆ ಸೈಂಟ್ ಎಂದು ಘೋಶಿಸಲಾಗುತ್ತದೆ ಈಗ ಅಲ್ಲಿ ಮಿಲಿಯಾ ಕಟ್ಟಲೆ ಜನ ತಮ್ಮ ಆರೋಗ್ಯಕ್ಕಾಗಿ ಆರಾಧನೆಗೆಗಾಗಿ, ಉತ್ತಮ ಆರೋಗ್ಯಕ್ಕಾಗಿ, ರೋಗ ಋಜೀನಗಳನ್ನು ಗುಣ ಪಡಿಸಿಕೊಳ್ಳಲು ಆರಾಧಿಸಲು ಸೇರುತ್ತಾರೆ, ಅಲ್ಲಿ ಆರಾಧಿಸಿದ ಪ್ರತಿ ನೂರರಲ್ಲಿ ಇಬ್ಬರು ಗುಣ ಮುಖರಾಗುತ್ತಾರೆ, ನಮ್ಮಲ್ಲಿ ಕೆಲವರಿಗೆ ಅಷ್ಟು ದೂರ ಹೋಗಲು ಅಸಾಧ್ಯ, ಹಾಗಾಗಿ ಇಲ್ಲಿಯೆ ಅವಳ ಹೆಸರಿನಿಂದ ಪ್ರಾರ್ಥಿಸೋಣ’ ಎಂದು ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ತಮ್ಮ ಪ್ರವಚನದಲ್ಲಿ ತಿಳಿಸಿದರು.
ಲೂರ್ದ್ ಮಾತೆಯನ್ನು ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಿ, ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜೀನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಆಶಿರ್ವದಿಸಿದರು.
ಜಪಮಾಲ ಭಕ್ತಿಯನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ಉಪಾಧ್ಯಕ್ಷರಾದ ಎಲ್.ಜೆ. ಫೆರ್ನಾಂಡಿಸ್ ವಂದಿಸಿದರು.