ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆಬ್ರವರಿ 14ನೇ ಮಂಗಳವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 12 ಭಾನುವಾರ ಸಂಜೆ 4ಕ್ಕೆ ಕೋಂಪ್ರಿ ಫೆಸ್ತ್ ಅಂಗವಾಗಿ ಇರ್ಗಜಿ ವಠಾರದಿಂದ ಯಡ್ತರೆ ತನಕ ಪುರಮೆರವಣಿಗೆ,13ರಂದು ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 19ರಂದು ಸಂಜೆ4.45ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡದ ಮೇಲೆ ನೂತನವಾಗಿ ನಿರ್ಮಿಸಿದ ಕಲ್ವಾರಿ ಬೆಟ್ಟದ ಪ್ರತಿರೂಪದ ಯೋಜನೆಯ ಉದ್ಘಾಟನೆ ಮತ್ತು ಆಶಿರ್ವಚನದ ಜೊತೆಗೆ ಗುಡ್ಡೆ ಫೆಸ್ತ್ ಜರುಗಲಿರುವುದು.