

ಕುಂದಾಪುರ ಫೆಬ್ರವರಿ 15, 2025 ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಯೇಸು ಕ್ರಿಸ್ತರ 2025 ರ ಜುಬಿಲಿ ವರ್ಷದಲ್ಲಿ, ವಿಶೇಷ ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಇವರು ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿ “ನಾವು ಯೇಸುಕ್ರಿಸ್ತರ 2025 ರ ಜುಬಿಲಿ ವರ್ಷದಲ್ಲಿ ಇದ್ದೇವೆ, ಯೇಸು ಕ್ರಿಸ್ತರ ಹುಟ್ಟಿದ ನಾಡಿನಲ್ಲಿ ವಾರದ 7 ನೇ ದಿನ ವಿರಾಮದ ದಿನ (ಸಾಬತ್) ಅದರಂತೆ 7 ನೇ ವರ್ಷ ಸರ್ವೇಶರನನ್ನು ಗೌರವಿಸುವ ವಿರಾಮದ ವರ್ಷವಾಗಿತ್ತು, 7 ವರ್ಷಗಳಿಗೊಮ್ಮೆ ನೆಡೆಯುವ ವಿರಾಮ 7 ಭಾರಿಯಲ್ಲಿ ಬರುವುದೇ 50 ನೇ ವರ್ಷ ಅದುವೆ ಜಯಂತ್ಸೋವ. ಅದು ಪವಿತ್ರ ಮಹೋತ್ಸವವಾಗಿತ್ತು. ಕನ್ನಡದಲ್ಲಿ ಹೇಳುದಾದರೆ ಪಂಚಸಾಗರ ಸುಮಧುರ ಸಮ್ಮೀಲನವೇ ಉತ್ಸವದ ಸಂಭ್ರಮ. ಅದುವೆ ”ಸ್ಮರಣೆ” “ಸಂತಾಪ” “ಸಂಧಾನ” “ಸನ್ಮಾರ್ಗ” “ಸಂಭ್ರಮ”
”ಸ್ಮರಣೆ” ಅಂದರೆ ಲೇವಿ ಶಾಸ್ತ್ರದ ಪ್ರಕಾರ ದೇವರು ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಿ, ದೇವರಿಗೆ ಕ್ರತ್ಙತೆ ಸಲ್ಲಿಸುವ ಉತ್ಸವ. ನಾವೂ ಕೂಡ ನಮ್ಮ ಜೀವನದ್ಲಲ್ಲಿ ದೇವರು ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಿ ಕ್ರತ್ಙತೆ ಸಲ್ಲಿಸಬೇಕು. ಎರಡನೇದು “ಸಂತಾಪ” ನಾವು ಮಾಡಿದ ಪಾಪ ಕಾರ್ಯಗಳಿಗೆ ಸಂತಾಪ ಪಟ್ಟು ಪರಿರ್ತನೆ ಆಗಬೇಕು .ಯೇಸುಕ್ರಿಸ್ತರ ಜುಬಿಲಿ ವರ್ಷದಲ್ಲಿ ಇದನ್ನು ಕಾರ್ಯಗತ ಮಾಡೋಣ. ಮೂರನೇದು “ಸಂಧಾನ” ದೇವರ ಹತ್ತಿರ ಮತ್ತು ಎಲ್ಲರಲ್ಲಿ ರಾಜಿಯಾಗಿ ದೇವರಲ್ಲಿ ಮರಳಬೇಕು, ಕೊಟ್ಟ ಸಾಲಗಳನ್ನು ಮನ್ನಿಸುವುದು, ಕಸಿದನ್ನು ಹಿಂತಿರುಗಿಸುವುದು, ಮಾಡಿದ ನಶ್ಟವನ್ನು ತುಂಬಿ ಕೊಡುವುದು, ಜಗಳ ವೈಮನಸ್ಸು ಬಿಟ್ಟು ದೇವರಲ್ಲಿ ಮತ್ತು ಇತರಲ್ಲಿ ರಾಜಿಸಂಧಾನವನ್ನು ಮಾಡಿಕೊಳ್ಳಬೇಕು ಯೇಸು ಕ್ರಿಸ್ತರು ಇದನ್ನೇ ಹೇಳಿದ್ದು. ನಾಲ್ಕನೇದು “ಸನ್ಮಾರ್ಗ” ಯಾರು ದೇವರ ನಿಯಮದಂತೆ ಜೀವಿಸದಲ್ಲಿ ನೀವು ಸುರಕ್ಷಿತವಾಗಿರುತ್ತೀರಿ ಎಂದು ದೇವರು ಹೇಳುತ್ತಾರೆ. ಯಾರು ದೇವರ ಉಪದೇಶಗಳನ್ನು ಪಾಲಿಸುತ್ತಾರೋ, ನಿತ್ಯಜೀವನದಲ್ಲಿ ಸನ್ಮಾರ್ಗದಲ್ಲಿ ನೆಡೆಯುತ್ತಾರೊ, ಅವರಿಗೆ ದೇವರ ಆಶಿರ್ವಾದಗಳು ಸಿಗುತ್ತವೆ. ಐದನೇದು “ಸಂಭ್ರಮ” ಜುಬಿಲಿಯ ವರ್ಷವು ಸಂತಸದ ವರ್ಷ, ಸಂಭ್ರಮದ ವರ್ಷ. ಶುಭವಾರ್ತೆಯ ಪ್ರಕಾರ ಜುಬಿಲಿ ವರ್ಷಗಳು ದೇವರು ನಮ್ಮ ಮೇಲೆ ದಯೆ ಮಮತೆ ತೋರುವ ವರ್ಷ. ಇದು ಪವಿತ್ರ ವರ್ಷ ಹಾಗೇ ದೇವರು ಕ್ರಪಾಟಕ್ಷಗಳನ್ನು ಕೊಡುವ ವರ್ಷ. ಈ ಜುಬಿಲಿ ವರ್ಷವು ದೇವರ ಅಪರಿಮಿತ ಕ್ರಪಾಟಕ್ಷಗಳಿಗಾಗಿ ಕ್ರತ್ಙತೆ ಸಲ್ಲಿಸುವ ವರ್ಷ. ನಾವು ಪಾಪರಹಿತ ಜೀವನವನ್ನು ನಡೆಸಿದಲ್ಲಿ ನಾವೆಲ್ಲ ದೇವರ ವಾಗ್ದಾನಕ್ಕೆ ಭಾಜನರಾಗುತ್ತೇವೆ. ವಾಗ್ದಾನದ ಪ್ರಕಾರ, ನಿಮಗೆ ಸುರಕ್ಷೆ ನೀಡುತ್ತೇನೆ, ನಿಮ್ಮ ಮತ್ತು ನಿಮ್ಮ ಕುಟುಂಬಗಳಲ್ಲಿ ಶಾಂತಿ ಸಮಾಧಾನ ಲಭಿಸುತ್ತೇನೆ’ ಎಂದು ದೇವರು ಹೇಳಿದ್ದಾರೆ. ದೇವರ ಈ ಕ್ರಪಾಟಾಕ್ಷೆ ಪ್ರಾಪ್ತಿಯಾಗಲು ಜುಬಿಲಿ ವರ್ಷದಲ್ಲಿ ನಾವು ಹೊಸ ಮನುಜರಾಗೋಣ ಹೊಸ ಸ್ರಷ್ಠಿಯಾಗೋಣ’ ಎಂದು ಸಂದೇಶ ನೀಡಿ ಜುಬಿಲಿ ವರ್ಷದ ಶುಭಾಶಯಗಳನ್ನು ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ
ಈ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿ ಹೆಸರಿನಲ್ಲಿ ಸಿದ್ದಗೊಳ್ಳುವ ಅನಾಥಶ್ರಮಕ್ಕೆ ದಾನಿಗಳ ಸಹಕಾರ ಬೇಕಿದೆ, ಸಂತ ಅಂತೋನಿಯವರು ಅನಾಥರಲ್ಲಿ ಬಹಳ ಕಾಳಜಿ ಇದ್ದವರು, ಹಾಗಾಗಿ ಈ ಆಶ್ರಮದಲ್ಲಿ ಅನಾಥರಿಗೆ ಬಡವರಿಗೆ ದರ್ಮಾರ್ಥವಾಗಿ ಆಶ್ರಯ ನೀಡಲು ಯೋಜಿಸಿದ್ದೇವೆ ಅದಕ್ಕಾಗಿ ಸಹಕಾರವಿರಲಿ’ ಎಂದು ವಿನಂತಿಸಿಕೊಂಡರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಹಬ್ಬಕ್ಕೆ ಶುಭ ಕೋರಿದರು.
ಪುಣ್ಯ ಕ್ಷೇತ್ರಕ್ಕೆ ದಾನ ನೀಡಿದವರಿಗೆ ಮತ್ತು ಪೋಷಕತ್ವ ವಹಿಸಿಕೊಂಡವರಿಗೆ , ಸಹಕರಿಸಿದವರಿಗೆ ಮೇಣದ ಬತ್ತಿಗಳನ್ನು ನೀಡಿ ಗೌರವಿಸಲಾಯಿತು.
ಹಬ್ಬದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಇತರ ಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ತಲ್ಲೂರು ಚರ್ಚಿನ ಗಾಯನ ಮಂಡಳಿಯ ಮಕ್ಕಳು ಹಬ್ಬದ ಗಾಯನಗಳನ್ನು ಹಾಡಿ ಬಲಿದಾನಕ್ಕೆ ಸಹಕರಿಸಿದರು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

































































































































