ಕುಂದಾಪುರ ಫೆಬ್ರವರಿ 15, 2024 ಕುಂದಾಪುರ ತಾಲೂಕಿನ ಹೊಸಂಗಡಿ,ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.
“ದೇವರೆ ನಮಗೆ ಪ್ರಾರ್ಥಿಸಲು ಕಲಿಸು” ಎಂಬುದು ಹಬ್ಬದ ವಿಷಯವಾಗಿದ್ದು, ತೊಟ್ಟಾಮ್ ಚರ್ಚಿನ ಧರ್ಮಗುರು ಹಾಗೂ ಸಂಪರ್ಕ ಸಾಧನ ಆಯೊಗೀದ ನಿರ್ದೇಶಕರಾರ ವಂ|ಡೆನಿಸ್ ಡೆಸಾ ದೇವರ ವಾಕ್ಯವನ್ನು ಪಠಿಸಿ “ಪ್ರೀತಿ ಒಂದು ಅದ್ಬುತ ಶಕ್ತಿ, ನಿರಂತರವಾಗಿ ಪ್ರೀತಿಸು, ಪ್ರೀತಿಸು ಅಂದರೆ ನಿಮಗೆ ಅದು ಕೇಳಿ ಕೇಳಿ ಬೇಜಾರಾಗಬಹುದು, ಆದರೆ ನಿತ್ಯವೂ ನಾವು ಊಟ ಮಾಡುತ್ತೇವೆ ಆದರೆ ಊಟ ಮಾಡಿ ಸಾಕಗುವುದಿಲ್ಲಾ, ನಮ್ಮ ಶ್ವಾಸ ಪುನಹ ಪುನಹ ತೆಗೆದುಕೊಳ್ಳುತ್ತೇವೆ ಆದರೆ ಸಾಕಾಗುವುದಿಲ್ಲ, ಹಾಗೇಯೆ ಪ್ರೀತಿ ಮಾಡುವುದು, ಪ್ರಾರ್ಥನೆ ಅಂದರೆ ನಮಗೆ ಆಮ್ಲಜನಕ ಇದ್ದಂತೆ. ಪ್ರಾರ್ಥನೆ ಮಾಡಿ ಮೇರಿ ಮಾತೆಗೆ ಸಾಕಾಗಲಿಲ್ಲ, ಯೇಸು ದೇವರ ಪುತ್ರ ಆದರೂ ಆತನು ಪಿತನಲ್ಲಿ ಪ್ರಾರ್ಥಿಸುತ್ತಿದ್ದ “ಪಿತನೇ ನನಗೆ ಸರಿಯಾದ ದಾರಿ ತೋರಿಸು” ಎಂದು. ಪ್ರಾರ್ಥನೆ ಅಂದರೆ ದೇವರೊಡನೆ ನಾವು ಸಂಬಂಧ ಇಟ್ಟುಕೊಳ್ಳುವುದು. ನಮ್ಮ ಮಕ್ಕಳಿಗೆ ಮೊತ್ತ ಮೊದಲು ಶಿಕ್ಷಕರು, ಆಥವ ಧರ್ಮಗುರುಗಳು ಪ್ರಾರ್ಥನೆ ಪ್ರೀತಿಯ ಪಾಠವನ್ನು ಕಲಿಸುವುದಲ್ಲಾ, ಅದು ಮೊತ್ತ ಮೊದಲು ಮನೆಯಲ್ಲಿ ಹೆತ್ತವರು ಕಲಿಸಬೇಕು. ಪ್ರೀತಿ ಇಗರ್ಜಿಯೊಳಗೆ ಮಾತ್ರವಲ್ಲ, ಅದು ಇಗರ್ಜಿಯ ಹೊರಗೆ ತೋರುವುದು ಅತ್ಯಂತ ಮಹತ್ವ, ಇಗರ್ಜಿಯ ಒಳಗೆ ತೊರ್ಪಡಿಸುವುದು ಬಹಳ ಸುಲಭ, ಸಮಾಜದಲ್ಲಿ ಒಂದು ದೇಹಕ್ಕೆ ಬಟ್ಟೆ ಇಲ್ಲದಿದ್ದರೆ ನಮ್ಮ ಪ್ರಾರ್ಥನೆ, ಪ್ರೀತಿ ಸಂಪೂರ್ಣವಾಗುವುದಿಲ್ಲಾ, ಆ ದೇಹಕ್ಕೆ ಬಟ್ಟೆ, ಊಟ ಕೊಡದಿದ್ದಲ್ಲಿ ನೀವು ಚರ್ಚಿನೊಳಗೆ ಅರ್ಪಿಸಿದ ಬಲಿದಾನ ವ್ಯರ್ಥ, ಇದೇ ಕಾರ್ಯರೂಪಕ್ಕೆ ತರುವ ಪ್ರಾರ್ಥನೆ ಪ್ರೀತಿಯ ನೀಜವಾದ ವಿಧಾನ. ನಮ್ಮ ರಾಷ್ಟ್ರಪತಿ ಎ.ಪ್.ಜೆ. ಅಬ್ದುಲ್ ಕಲಾಮ್ ತುಂಬ ಬಡವರು, ಪೇಪರ್ ಮಾರಾಟ ಮಾಡಿ 10 ನೇ ತರಗತಿ ಒದಿದರು, ಮುಂದೆ ಪಿ.ಯು.ಸಿ. ಮಾಡಲು ಬಯಸಿದರು, ಅದಕ್ಕೆ ಮದ್ರಾಸಿನ ತ್ರಿಚಿಯ ಜೆಸುವೀಟ್ ಧರ್ಮಗುರುಗಳ ಸೈಂಟ್ ಜೋಸೆಫ್ ಕಾಲೇಜಿಗೆ ತೆರಳಿ, ನನಗೆ ಪಿ.ಯು.ಸಿ ಓದಬೇಕು ಅಂತಾ ಕೇಳಿಕೊಂಡರು, ಫೀಸು ಕಟ್ಟಲು ಹಣ ಇಲದಕ್ಕ್ಲೆ ಅವರನ್ನು ಭರ್ತಿ ಮಾಡಿಕೊಳ್ಳಲಿಲ್ಲ, ಆದರೆ ಅಬ್ದುಲ್ ಕಲಾಂ ಸಂಜೆ ವರೆಗೆ ಆ ಕಾಲೇಜಿನ ಆವರಣದಲ್ಲೆ ಚಿಂತೆಯಿಂದ ಒಡಾಡಿದರು, ಸಂಜೆ ಪ್ರಾರ್ಥನೆ ಮುಗಿಸಿ ಮೈದಾನಕ್ಕೆ ಬಂದ ಕಾಲೇಜಿನ ಪ್ರಾಂಶುಪಾಲರಾದ ಫಾ| ತೋಮಸ್ ಸಿಕ್ವೇರಾ (ನಮ್ಮ ಮಂಗಳೂರಿನವರು) ಹುಡುಗ ಅಬ್ದುಲ್ ಕಲಾಮ್ ನನ್ನು ನೋಡಿ ವಿಚಾರಿಸಿ, ತಮ್ಮ ಪರಿಸ್ಥಿತಿಯನ್ನು ತಿಳಿಸಿದರು, ಅದನ್ನು ಕೇಳಿ ನೀನು ನಾಳೆ ಬಾ, ಎಂದು ಮರು ದಿನ ಬಂದಾಗ, ಅಬ್ದುಲ್ ಕಲಾಮ್ ಹತ್ತಿರ ಚೀಟಿ ಕೊಟ್ಟು ಆಫಿಸಿಗೆ ಕಳುಹಿಸುತ್ತಾರೆ, ಅದರಲ್ಲಿ ಈ ಹುಡುಗನನ್ನು ಕಾಲೇಜಿಗೆ ಸೇರಿಸಿಕೊಳ್ಳಿ, ಹಾಗೇ ಸೇರಿಸಿಕೊಳ್ಳುತ್ತಾರೆ, ಅಷ್ಟು ಮಾತ್ರವಲ್ಲ, ಅವನಿಗೆ ಹೋಸ್ಟೆಲನಲ್ಲಿ ಅವಕಾಶ ನೀಡಿ, ಇಷ್ಟೇ ಅಲ್ಲ, ತಿಂಗಳಿಗೊಂದು ಸಲ ಈ ಅಬ್ದುಲ್ ಕಮಾಮನನ್ನು ಭೇಟಿ ಮಾಡಿ ಪೆÇೀಸ್ಟ್ ಕವರ್ ಕೊಟ್ಟು ನಿನ್ನ ತಂದೆ ತಾಯಿಗೆ ಪತ್ರ ಬರೆ, ನೀನು ನಿನ್ನ ತಂದೆ ತಾಯಿ ಸಂಬಂಧ ಇಟ್ಟುಕೊಳ್ಳಬೇಕು ಎಂದು ತಿಳಿಸುತಿದ್ದರು. ಆಮೇಲೆ ಅವರು ಅಲ್ಲಿ ಪದವಿ ಮುಗಿಸಿದರು, ಬೇರೆ ಬೇರೆ ಪದವಿ ಪಡೆದರು, ವಿಜ್ಞಾನಿ ಆದರು, ನಂತರ ರಾಷ್ಟ್ರಪತಿ ಆದರು, ಅವರು ಈ ರಾಷ್ಟ್ರಪತಿ ಪದವಿ ಸ್ವಿಕಾರ ಮಾಡುವಾಗ ಜೆಸುವೀಟ್ ಧರ್ಮಗುರುಗಳಿಗೆ ಆ ಸಂಭ್ರಮದಲ್ಲಿ ಪಾಲ್ಗೊಳಲ್ಲು ಕರೆಯೋಲೆ, ವಿಶೇಷವಾಗಿ ಫಾ|ಸಿಕ್ವೇರಾರವರಿಗೆ ನೀಡುತ್ತಾರೆ ರಾಷ್ಟ್ರಪತಿ ಪದವಿ ಗ್ರಹಣ ಮಾಡುವಾಗ ಫಾ|ಸಿಕ್ವೇರಾರವರವರನ್ನು ಕಾಣದೆ, ಅವರನ್ನು ಕೇಳಿದಾಗ ಅವರು ದೈವಾಧಿನರಾಗಿದ್ದಾರೆ ಎಂದು ತಿಳಿಸುತ್ತಾರೆ, ಮುಂದೆ ಮದ್ರಾಸಿಗೆ ಬಂದಾಗ, ಅವರ ಸಮಾಧಿಯ ಬಳಿ ತೆರಳಿ “ಫಾದರ್ ಎದ್ದೇಳಿ ನಿಮ್ಮ ಅಬ್ದುಲ್ ಕಲಾಮ್ ಬಂದಿದ್ದಾನೆ” ಎಂದು ಮರುಗುತ್ತಾರೆ, ಇದೇ ನೀಜವಾದ ಪ್ರಾರ್ಥನೆ ಮತ್ತು ಪ್ರೀತಿ, ಅದಕ್ಕೆ ಯೇಸು ಕ್ರಿಸ್ತರ 2025 ನೇ ವರ್ಷದ ಉತ್ಸವಕ್ಕೆ ಪ್ರಾರ್ಥನೆಯ ವರ್ಷ ಎಂದು ನಮಗೆ ಪ್ರಾರ್ಥನೆಯನ್ನು ಕಾರ್ಯರೂಪಕ್ಕೆ ತರಲು ಪೆÇೀಪ್ ಫ್ರಾನ್ಸಿಸ್ ಕರೆ ಕೊಟ್ಟಿದ್ದಾರೆ. ಗುಂಡಿಟ್ಟು ಕೊಲ್ಲಬೇಕೆಂದಿಲ್ಲ, ನಾಲಿಗೆಯಿಂದ ಕೊಲ್ಲ ಬಹುದು, ಆದರೆ ಸಂತ ಅಂತೋನಿಯವರ ನಾಲಿಗೆ ಪವಿತ್ರವಾದದ್ದು, ಅವರು ಹೇಗೆ ನುಡಿಯುತಿದ್ದರೊ, ಅದರಂತೆ ಅವರು ನೆಡದರು ಅವರಂತೆ ನಾವು ಜೀವಿಸೋಣ ” ಎಂದು ಅವರು ಪ್ರವಚನ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ”ಇದು ನಮಗೆ ಪ್ರಾರ್ಥನೇಯ ವರ್ಷ, ನಾವು ನಮ್ಮ ದಿನ ನಿತ್ಯದ ಪ್ರಾರ್ಥನೆ ಜಪಗಳನ್ನು ಮಾಡುವ, ಪವಿತ್ರ ಪುಸ್ತಕವನ್ನು ಓದಿ ಅಧ್ಯಾತ್ಮಿಕೆಯನ್ನು ಹೆಚ್ಚಿಸೋಣ, ನಮ್ಮಲ್ಲಿನ ಮನಸ್ಥಾಪ ನಿಲ್ಲಿಸೋಣ, ರಾಜಿ ಸಂಧಾನ ಮಾಡಿಕೊಳ್ಳೋಣ, ಎರಡನೇ ವೆಟೀಕನ್ ವಿಶ್ವಸಭೆಯ ದಸ್ತಾವೇಜುಗಳನ್ನು ಒದಬೇಕು ಎಂದು ಸಂದೇಶ ನೀಡುತಾ, ಇಲ್ಲಿ ಅನಾಥರಿಗಾಗಿ ನಿರ್ಗತಿಕರಿಗೆ ಆಶ್ರಮವನ್ನು ಕಟ್ಟಲು ಆರಂಭಿಸೇದ್ದೆವೆ, ಅದಕ್ಕೆ ಸಹಾಕಾರ ನೀಡಬೇಕು, ಸಂತ ಅಂತೋನಿ ಬಡವರ ನಿರ್ಗತಿಕರ ಸಂತನಾಗಿದ್ದ, ಅವರ ಕೆಲಸ ನಾವು ಮುಂದುವರಿಸೋಣ” ಎಂದು ತಿಳಿಸಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ಹಬ್ಬಕ್ಕೆ ಶುಭ ಕೋರಿದರು.
ಪುಣ್ಯ ಕ್ಷೇತ್ರಕ್ಕೆ ದಾನ ಮತ್ತು ಪೆÇೀಷಕತ್ವ, ಸಹಕರಿಸಿದವರಿಗೆ ಮೇಣದ ಬತ್ತಿಗಳನ್ನು ನೀಡಿ ಗೌರವಿಸಲಾಯಿತು. ಹಬ್ಬದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಇತರ ಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.