ಕುಂದಾಪುರ, ಮಾ.19 : ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕುಂದಾಪುರ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬದ ಪ್ರಯುಕ್ತ ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿ ‘ಪವಿತ್ರ ಸಭೆಯಲ್ಲಿ ಸಂತ ಜೋಸೆಫರಿಗೆ ಅತ್ಯುತ್ತಮ ಸ್ಥಾನ ಇದೆ. ಆತ ತನ್ನ ಪತ್ನಿ ಮೇರಿ ಮಾತೆ ಮತ್ತು ಪುತ್ರನನ್ನು ಹಲವ ಅಪಾಯಗಳಿಂದ ರಕ್ಷಿಸಿದಾತ, ಆತ ದೇವರ ಪುತ್ರನ ರಕ್ಷಕನಾಗಿದ್ದ, ಸಂತ ಜೋಸೆಫರು ಅತ್ಯಂತ ಶಾಂತ ಸ್ವಭಾವದರು, ಯಾವುದೇ ಸಮಸ್ಯೆ ಬಂದರೆ ಶಾಂತ ಚಿತ್ತದಲ್ಲಿ ದೇವರು ಆಜ್ಞೆಯ ಮೇರೆಯಂತೆ ನಡೆದವನು, ಅವನೊಬ್ಬ ನೀತಿವಂತನೆಂದು ಬೈಬಲ್ ಓತ್ತಿ ಹೇಳುತ್ತದೆ, ಆತನು ಜೀವಿತಾವಧಿಯಲ್ಲಿ ಸನ್ಮಾರ್ಗದಲ್ಲಿ ನಡೆದವನು, ದೇವರು ಆತನ ಸ್ವಪ್ಣದಲ್ಲಿ ಬಂದು ಮಾರ್ಗದರ್ಶನ ನೀಡುತಿದ್ದರು, ಅದರಂತೆ ದೇವರ ಮೇಲೆ ಭರವಸೆ ಇಟ್ಟು ಜಗಕ್ಕೆ ಮುಕ್ತಿ ನೀಡುವ ಯೋಜನೆಗೆ ಪುತ್ರನಿಗೆ ಸಹಕಾರ ನೀಡಿದ ಮಹಾತ್ಮ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಸಹಬಲಿದಾನವನ್ನು ಅರ್ಪಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ಅತಿಥಿ ಧರ್ಮಭಗಿನಿಯರು, ಕಾರ್ಮೆಲ್ ಭಗಿನಿಯರ ಸಹಾಯಕ್ಕಾಗಿರುವ ಬ್ಲೊಸಮ್ ಪಂಗಡದವರು ಮತ್ತು ಭಕ್ತಾಧಿಗಳು ಹಬ್ಬದ ಬಲಿದಾನದಲ್ಲಿ ಭಾಗಿಯಾಗಿದ್ದರು. ಕಾನ್ವೆಂಟ್ ಮುಖ್ಯಸ್ಥೆ ಧರ್ಮಭಗಿನಿ ಸುಪ್ರಿಯ ವಂದಿಸಿದರು.ಆಗಮಿಸಿದ್ದ ಭಕ್ತಾಧಿಗಳಿಗೆ ಫಲಹಾರ ನೀಡಲಾಯಿತು.