ಕುಂದಾಪುರದಲ್ಲಿ ಲೂರ್ದ ಮಾತೆಯ ಹಬ್ಬ : ಭಕ್ತಿಭಾವದ ಜಪಮಾಲೆ


ಕುಂದಾಪುರ, ಫೆ.12: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಸಂಜೆ ಅತ್ಯಂತ ಪ್ರಾಚೀನ ದೇವಾಲಯವಾದ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊದ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.
“ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬ ಊರಿನಲ್ಲಿ, ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ಲೌರ್ಡೆಸ್ ಉರಿನಲ್ಲಿ ದರ್ಶನ ನೀಡಿದಕ್ಕೆ ರೋಜರಿ ಮಾತೆಗೆ ಅಲ್ಲಿ ಲೂರ್ದ ಮಾತೆಯೆಂದು ಕರೆಯಲ್ಪಟ್ಟರು. ಮುಂದೆ ಅದು ಪ್ರಸಿದ್ದ ಪವಾಡ ನಗರವಾಗಿ ಪರಿವರ್ತನೆಯ್ತು. ಇಂದು ಅಲ್ಲಿ ಮಿಲಿಯಾಕಟ್ಟಲೆ ಜನರು ಭೇಟಿ ನೀಡಿ ತಮ್ಮ ಕೋರಿಕೆ, ರೋಗ ಋಜಿನಾಗಳಗಳನ್ನು ಗುಣ ಪಡಿಸಿಕೊಳ್ಳುತ್ತಾರೆ. ಇಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚಿನ ವಠಾರದಲ್ಲಿ ಹಲವಾರು ವರ್ಷಗಳಿಂದ ಲೂರ್ದ ಮಾತೆಯ ಗ್ರೊಟ್ಟೊವಿದೆ, ಇಲ್ಲಿಯು ಕೂಡ ಜಾತಿ ಭೇದವಿಲ್ಲದೆ ಜನರು ಬಂದು ಮೌನವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ, ಇತರ ಧರ್ಮಿಯರಿಗೆ ದೇವರ ಮೇಲೆ ಇರುವ ನಂಬಿಕೆ ವಿಶೇಷವಾದದ್ದು, ಅವರು ತಮ್ಮ ಚಪ್ಪಲಿಗಳನ್ನು ತೆಗೆದಿಟ್ಟು ಭಕ್ತಿಭಾವದ, ಶ್ರದ್ದೆಯ ಪ್ರಾರ್ಥನೆ ನೋಡುವಾಗ ಹೆಮ್ಮೆಯೆನ್ನಿಸುತ್ತದೆ, ಅವರ ಭಕ್ತಿಯನ್ನು ನೋಡಿದಾಗ ಅವರಿಗೆ ರೋಜರಿ ಮಾತೆಯಿಂದ ಅವರ ಕೋರಿಕೆ ಇಡೇರಿರಬಹುದೆಂದು ನನ್ನ ನಂಬಿಕೆ, ಅವರ ಭಕ್ತಿ ನಮಗೆ ಆದರ್ಶವಾಗಲಿ. ದುಖ ಕಶ್ಟಗಳನ್ನು ಅನುಭವಿಸದೆ ನಮಗೆ ಆನಂದ ಸಿಗಲಾರದು. ನಮ್ಮ ಕಶ್ಟ ದುಖದಲ್ಲಿ ನಾವು ದೇವರ ಮಾತೆ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಪರಿಹಾರ ಪಡೆದುಕೊಳ್ಳಣ’ ಎಂದು ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ತಮ್ಮ ಪ್ರವಚನದಲ್ಲಿ ತಿಳಿಸಿದರು.
ರೋಜರಿ ಚರ್ಚಿನ ಭಕ್ತರು ಜಪಮಾಲೆಯ ಪ್ರಾರ್ಥನ ವಿಧಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು ಜಪಮಾಲ ಭಕ್ತಿಯ ನಂತರ ಲೂರ್ದ್ ಮಾತೆಯನ್ನು ಬಣ್ಣ ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಲಾಯಿತು. ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜಿನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಶಿರದ ಮೆಲೆ ಕೈಯಿಟ್ಟು ಆಶಿರ್ವದಿಸಿದರು.
ಜಪಮಾಲ ಭಕ್ತಿಯ ಕಾರ್ಯಕ್ರಮವನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಲೂರ್ದ್ ವಾಳೆಯ ಪ್ರತಿನಿಧಿ ಫಾತಿಮಾ ವಾಜ್ ಉಪಸ್ಥಿತರಿದ್ದು. ಲೂರ್ದ್ ವಾಳೆಯ ಗುರಿಕಾರ ವಾಲ್ಟರ್ ಡಿಸೋಜಾ ವಂದಿಸಿದರು.