ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 14 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಫಾ| ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ, ಕುಂದಾಪುರದವರೇ ಆದ ವಂ| ಫಾ| ಮನೋಜ್ ಬ್ರಗಾಂಜ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್ ಮಾತೆಯ ಮಹತ್ವವನ್ನು ವಿವರಿಸಿ “ದೇವರ ಇಚ್ಚೆ ತಿಳಿಯಲು ಮತ್ತು ಅದನ್ನು ಪಾಲಿಸಲು ಪ್ರಾರ್ಥನೇಯ ಅಗತ್ಯ ಇದೆ ಎಂದು ತಿಳಿಸಿ, ನಾವು ಪ್ರಾರ್ಥನ ಭರಿತರಾಗಬೇಕು, ಕ್ಷಮೆಯುಳ್ಳವರಾಗಬೇಕು, ಕೋರಿಕೆಯನ್ನು ಕೋರುವಂತರಾಗಬೇಕು, ಸತ್ಯದ ಮಾರ್ಗದಲ್ಲಿ ನಡೆಯಬೇಕು” ಎಂದು ಸಂದೇಶ ನೀಡಿದರು. ಕಾರ್ಮೆಲ್ ಮಾತೆ ಬೆಂತಿಣ್ ಗಳನ್ನು ಆಶಿರ್ವದಿಸಿದರು. ಬೆಂತಿಣ್ ಗಳನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು. ಅಂದಿನ ದಿವ್ಯ ಬಲಿದಾನದ ಪ್ರಾರ್ಥನ ವಿಧಿಯನ್ನು ಕಾರ್ಮೆಲ್ ಮೇಳದ ಧರ್ಮಭಗಿನಿಯರು ಮತ್ತು ಅವರಿಗೆ ಸಹಕಾರ ನೀಡುವ ಬ್ಲೊಸಮ್ ಪಂಗಡವರು ನೆಡೆಸಿಕೊಟ್ಟರು. ಅ|ವಂ| ಪಾವ್ಲ್ ರೇಗೊ ಆವರು ಕಾರ್ಮೆಲ್ ಪಂಗಡದ ಧರ್ಮಭಗಿನಿಯರಿಗೆ ಪುಷ್ಪ ನೀಡಿ ಹಬ್ಬದ ಶುಭಾಷಯಗಳ ಜೊತೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಮೆಲ್ ಭಗಿನಿಯವರ ಉಪಸ್ಥಿತರಿದ್ದರು.
ಕಾರ್ಮೆಲ್ ಮಾತೆಯ ಹಬ್ಬದಂದು ಕಾರ್ಮೆಲ್ ಭಗಿನಿಯರು, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ತಾರೀಕಿಗೆ ಸರಿಯಾಗಿ ಜುಲಾಯ್ 16 ರಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನ ಅರ್ಪಿಸಿ, ಸಂದೇಶ ನೀಡಿದರು. ವಂ| ಫಾ|ಮನೋಜ್ ಬ್ರಗಾಂಜ ಸಹ ಬಲಿದಾನವನ್ನು ಅರ್ಪಿಸಿದರು. ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಭಗಿನಿಯರು ಹಾಗೂ ಕಾರ್ಮೆಲ್ ಭಗಿನಿಯರ ಸಹಾಯಕರ ಬ್ಲೊಸಮ್ ಪಂಗಡದವರು ಹಾಜರಿದ್ದು, ಹಲವಾರು ಭಕ್ತರು ಹಾಜರಿದ್ದರು.