ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು.
ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಅ|ವಂ|ಸ್ಟ್ಯಾನಿ ತಾವ್ರೊ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್ ಮಾತೆಯ ಮಹತ್ವವನ್ನು ವಿವರಿಸಿ “ದೇವರ ವಾಕ್ಯಗಳು ಮುತ್ತಿನಂತೆ, ಅವಗಳನ್ನು ಕಳೆದುಕೊಳ್ಳದೆ ಸಂಪಾದಿಸಿಕೊಳ್ಳಬೇಕು. ಕಾರ್ಮೆಲ್ ಮಾತೆ ನಮ್ಮ ರಕ್ಷಕಿ, ಅವಳು ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಪೋಷಾಕನ್ನು ನೀಡಿ ಇದು ನಿಮಗೆ ರಕ್ಷಾ ಕವಚಾ, ಇದನ್ನು ಧರಿಸಿದರೆ ನಿಮಗೆ ಮತ್ತು ನಿಮ್ಮ ಆತ್ಮಕ್ಕೆ ರಕ್ಷೆ ಸಿಗುವುದು ಎಂದು ತಿಳಿಸಿ” ಕಾರ್ಮೆಲ್ ಮಾತೆ ಬೆಂತಿಣ್ ಗಳನ್ನು ಆಶಿರ್ವದಿಸಿದರು. ಕಾರ್ಮೆಲ್ ಮೇಳದ ಧರ್ಮಭಗಿನಿಯರು ಬೆಂತಿಣ್ ಗಳನ್ನು ಭಕ್ತಾಧಿಗಳಿಗೆ ವಿತರಿಸಿದರು. ಅಂದಿನ ದಿವ್ಯ ಬಲಿದಾನದ ಪ್ರಾರ್ಥನ ವಿಧಿಯಲ್ಲಿ ಕಾರ್ಮೆಲ್ ಮೇಳದ ಧರ್ಮಭಗಿನಿಯರು ಭಾಗಿಯಾದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಅರಾನ್ನಾ ಸಹಕರಿಸಿದರು.
ಕಾನ್ವೆಂಟಿನ ನೂತನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಆಶಾ, ಇತರ ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಭಗಿನಿಯರು ಹಾಗೂ ಕಾರ್ಮೆಲ್ ಭಗಿನಿಯರ ಸಹಾಯಕರ ಬ್ಲೊಸಮ್ ಪಂಗಡದವರು ಹಾಜರಿದ್ದು, ಈ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಹಲವಾರು ಭಕ್ತರು ಹಾಜರಿದ್ದರು.