

ಕುಂದಾಪುರ, ಮಾ.24; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 2025 ಜುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಕುಟುಂಬ ಆಯೋಗದ ಮುಂದಾಳತ್ವದಲ್ಲಿ ಮಾ. 23 ರಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು. ‘ಕುಟುಂಬಕ್ಕೆ ತಂದೆ ಆಧಾರ ಸ್ಥಂಭವಾಗಿದ್ದಾನೆ. ಮಮತೆ, ಪ್ರೀತಿ ಸದ್ಗುಣದ ಜೊತೆ ಮಕ್ಕಳನ್ನು ಬೆಳಸಬೇಕು, ಸಂತ ಜೋಸೆಫನು ಹೇಗೆ ಆದರ್ಶ ತಂದೆಯಾಗಿದ್ದನೋ, ಹಾಗೆ ಅಪ್ಪಂದಿರು, ಮಕ್ಕಳಿಗೆ ಆದರ್ಶ ತಂದೆಯಾಗಿರಬೇಕು” ಎಂದು ಆಚರಣೆಯ ಪ್ರಯುಕ್ತ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಗುರು ಅ।ವಂ।ಪೌಲ್ ರೇಗೊ ಸಂದೇಶ ನೀಡಿದರು. ಬಲಿದಾನದ ಪ್ರಾರ್ಥನಾ ವಿಧಿಯನ್ನು ಚರ್ಚಿನ ಅಪ್ಪಂದಿರು ನೆಡೆಸಿಕೊಟ್ಟರು.
ಆಯ್ದ ಕೆಲವು ಅಪ್ಪಂದಿರು ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡರು. ಕುಟುಂಬ ಆಯೋಗದ ಸಂಚಾಲಕಿ ಮತ್ತು ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.






































