ತುಂಬೆಯ ಫಾದರ್ ಮುಲ್ಲರ್ : ದಶಮನೋತ್ಸವ ಸಂಭ್ರಮದ ಪತ್ರಿಕಾಗೋಷ್ಟಿ

ಮಂಗಳೂರಿನ ಹೃದಯ ಭಾಗದಲ್ಲಿರುವ ಎಲ್ಲರಿಗೂ ಚಿರ ಪರಿಚಿತವಾದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‍ಷ್ಟಿಟ್ಯೂಷನ್ ಪೂಜನೀಯ ಫಾದರ್ ಆಗಸ್ಟಸ್ ಮುಲ್ಲರ್‍ರವರಿಂದ 1880ನೇ ಇಸವಿಯಲ್ಲಿ ಕಂಕನಾಡಿಯಲ್ಲಿ ಸ್ಥಾಪನೆಯಾಗಿ ಇಂದು ಬೃಹದಾಕಾರವಾಗಿ ಬೆಳೆದು, ಅತ್ತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ.

ಈ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಒಂದು ಸಹ ಸಂಸ್ಥೆಯಾಗಿರುವ ಬಂಟ್ವಾಳ ತಾಲೂಕಿನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯನ್ನು 01.05.2013 ರಂದು ತುಂಬೆಯ ಬಿ.ಎ. ಸಮೂಹ ಸಂಸ್ಥೆಯಿಂದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ಖರೀದಿಸಿತು ಮತ್ತು ಈ ಆಸ್ಪತ್ರೆಯು 02.06.2013 ರಂದು ಉದ್ಘಾಟನೆಗೊಂಡಿತು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯು ಈ ವರ್ಷ ದಶಮನೋತ್ಸವ ಆಚರಿಸುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಆಸ್ಪತ್ರೆಯು 50 ಹಾಸಿಗೆಗಳಿಂದ ಈಗ 100 ಹಾಸಿಗೆಗಳನ್ನು ಹೊಂದಿದೆ. ಮಲ್ಟಿ ಸ್ಪೆಷಾಲಿಟಿಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಸೇವೆಗಳು ಲಭ್ಯವಿದೆ. ಓಂಃಊ ಪ್ರವೇಶ ಪೂರ್ವ ಮಾನ್ಯತೆ ಪಡೆದು ಈ ಆಸ್ಪತ್ರೆಯು ಉನ್ನತ ದರ್ಜೆಗೇರಿದೆ.
ಈ ಆಸ್ಪತ್ರೆಯು 24 ತಾಸುಗಳ ತುರ್ತು ಮತ್ತು ಅಪಘಾತ ಚಿಕಿತ್ಸೆ, 16 ಸ್ಲೈಸ್ ಸಿಟಿ ಸ್ಕ್ಯಾನ್, 24×7 ಪ್ರಯೋಗಾಲಯದ ಸೇವೆಗಳು, ಔಷಧಾಲಯ, ಪ್ರಸೂತಿ/ಹೆರಿಗೆ ವಿಭಾಗ, ಸುಸರ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ದಾದಿಯರ ಸೇವೆಗಳಿಗೆ ಹೆಸರುವಾಸಿಯಾಗಿದೆ. ಕಳೆದ 10 ವರ್ಷಗಳಿಂದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ ಹಾಗೂ ನೆರೆರಾಜ್ಯ ಕೇರಳದಿಂದ ಆರೋಗ್ಯ ಸೇವೆಯನ್ನು ಪಡೆಯಲು ರೋಗಿಗಳು ಬರುತ್ತಾರೆ. ಈ ಗ್ರಾಮೀಣ ಪ್ರದೇಶದ ಜನರಿಗೆ ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕಳೆದ ವರ್ಷ ದಶಮಾನೋತ್ಸವದ ಕೊಡುಗೆಯಾಗಿ ಬಂಟ್ವಾಳ ತಾಲೂಕಿನ ಪ್ರಥಮ ಃ.Sಛಿ ನರ್ಸಿಂಗ್ ಕಾಲೇಜನ್ನು (40 ಸೀಟುಗಳು) ಆರಂಭಿಸಿದೆ ಹಾಗೂ ಕಾಲೇಜಿನ ಹೊಸ ಕಟ್ಟಡದ ಕೆಲಸವು ಭರದಿಂದ ಸಾಗುತ್ತಿದೆ.
ಆಸ್ಪತ್ರೆಯು ದಶಮನೋತ್ಸವ ಪೂರೈಸುವ ಸಂದರ್ಭದಲ್ಲಿ ಮೇ 1, 2023 ರಂದು ಎಲ್ಲಾ ವಿಭಾಗಗಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಶಿಬಿರದ ಸೌಲಭ್ಯವನ್ನು ಒಂದು ತಿಂಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ.