ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಸ್ನಾತಕೋತ್ತರ ಕೋರ್ಸ್ನ 25 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಇದರ ಅಂಗವಾಗಿ ‘ರಜತೋತ್ಸವ’ – ರಾಷ್ಟ್ರೀಯ ಹೋಮಿಯೋಪಥಿ ಸ್ನಾತಕೋತ್ತರ ಸಮ್ಮೇಳನವನ್ನು ದಿನಾಂಕ 18.05.2024 ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ರಜತೋತ್ಸವ ಸಮಾರಂಭದ ಪ್ರಯುಕ್ತ 7 ಸ್ನಾತಕೋತ್ತರ ವಿಭಾಗಗಳಿಂದ ವರ್ಷವಿಡೀ ವಿವಿಧ ಸೆಮಿನಾರ್, ಕಲಿಕಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ನಡೆಸಲಾಯಿತು.
ಈ ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಹೋಮಿಯೋಪಥಿ ರಾಷ್ಟ್ರೀಯ ಆಯೋಗ, ಭಾರತ ಸರಕಾರ, ನವದೆಹಲಿ ಇದರ ಕಾರ್ಯದರ್ಶಿಯಾದ ಡಾ. ಸಂಜಯ್ ಗುಪ್ತಾ, ಬಿ.ಎಚ್.ಎಂ.ಎಸ್., ಎಂ.ಡಿ (ಹೋಮಿಯೋಪಥಿ) ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಸ್ನಾತಕೋತ್ತರ ಕಾರ್ಯಕ್ರಮದ 25 ವರ್ಷಗಳನ್ನು ಸಂಕಲಿಸುವ ಸಮ್ಮೇಳನದ ಸ್ಮರಣಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.
ಡಾ. ಜಸ್ವಂತ್ ಪಾಟೀಲ್, ಎಂ.ಬಿ.ಬಿ.ಎಸ್., ಎಂ.ಡಿ., ಬಿ.ಎಚ್.ಎಂ.ಎಸ್., ಎಂ. ಎ. (ಆಲ್ಟ್ ಥೆರಪಿ), ಫೆಲೋಶಿಪ್ ಇನ್ ಮೆಡಿಕಲ್ ಯೋಗ ಇವರು ಸಮ್ಮೇಳನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, “ಸಾಕ್ಷ್ಯಾಧಾರಿತ ಹೋಮಿಯೋಪಥಿ ವಿಧಾನಗಳ ಮೂಲಕ ಕಷ್ಟಕರ ಪ್ರಕರಣಗಳನ್ನು ಪರಿಹರಿಸುವುದು” ಇದರ ಕುರಿತು ವಿವರಿಸಲಿದ್ದಾರೆ. ರಾಷ್ಟ್ರೀಯ ಸ್ನಾತಕೋತ್ತರ ಸಮ್ಮೇಳನವು ದೇಶದ ವಿವಿಧ ಭಾಗಗಳಿಂದ 250 ಪ್ರತಿನಿಧಿಗಳನ್ನು ನಿರೀಕ್ಷಿಸುತ್ತಿದೆ.
ಭಾರತದಾದ್ಯಂತ ಹೋಮಿಯೋಪಥಿ ಸ್ನಾತಕೋತ್ತರ ವಿದ್ವಾಂಸರು ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಹಳೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪೇಪರ್ ಮತ್ತು ಪೆÇೀಸ್ಟರ್ ಪ್ರಸ್ತುತಿ ಹಾಗೂ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಹಾಗೂ ವಿಜೇತರಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ.
‘ಮುಲ್ಲರ್ ಕಾಂಪ್ಲೆಕ್ಸ್’ ಶಂಕು ಸ್ಥಾಪನೆ :
ಈ ಸಂದರ್ಭದಲ್ಲಿ ‘ಮುಲ್ಲರ್ ಕಾಂಪ್ಲೆಕ್ಸ್’ಗೆ ಶಂಕು ಸ್ಥಾಪನೆ ಮಾಡುವುದರ ಮೂಲಕ ಫಾದರ್ ಮುಲ್ಲರ್ ಸಂಸ್ಥೆಯ ಇತಿಹಾಸಕ್ಕೆ ಮತ್ತೊಂದು ಪ್ರಗತಿಯನ್ನು ಸೇರ್ಪಡಿಸಲಾಗುವುದು. ಇದರಲ್ಲಿ ಸರಿಸುಮಾರು 10,000 ಚದರ ಅಡಿ ಜಾಗ ಲಭ್ಯವಿದ್ದು, ವಿವಿಧ ಮಳಿಗೆ ಹಾಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿರುವುದು.
ಶ್ರವಣ ಶಾಸ್ತ್ರ ಹಾಗೂ ವಾಕ್ ಚಿಕಿತ್ಸಾ ಸೇವೆಗಳು :
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶ್ರವಣ ಶಾಸ್ತ್ರ ಹಾಗೂ ವಾಕ್ ಚಿಕಿತ್ಸೆ (ಆಡಿಯೋಲಜಿ ಮತ್ತು ಸ್ಪೀಚ್ ಥೆರಪಿ) ಹೊರರೋಗಿ ವಿಭಾಗವನ್ನು ಈ ದಿನ ಉದ್ಘಾಟಿಸಲಾಗುವುದು. ಮಕ್ಕಳಿಗೆ ಮತ್ತು ವಯಸ್ಕರಿಗೆ ನುರಿತ ತಜ್ಞರಿಂದ ಸೇವೆ ಲಭ್ಯವಿದೆ.
ಲಭ್ಯವಿರುವ ಸೇವೆಗಳು :
• ನವಜಾತ ಶಿಶುವಿನ ಶ್ರವಣ ಪರೀಕ್ಷೆ
• ಮಕ್ಕಳಲ್ಲಿ ವಯಸ್ಕರಲ್ಲಿ ಹಾಗೂ ವಯೋವೃದ್ದರಲ್ಲಿ ಕಂಡುಬರುವಂತಹ ಶ್ರವಣ ಶಕ್ತಿಯ ನ್ಯೂನ್ಯತೆಯ ಬಗ್ಗೆ ತಪಾಸಣೆ
• ಶ್ರವಣ ಯಂತ್ರದ ಪರೀಕ್ಷಣೆ
• ಶ್ರವಣ ಸಾಧನೆಯ ತಪಾಸಣೆ
• ಮಕ್ಕಳಲ್ಲಿ ಮತ್ತು ವಯೋವೃದ್ದರಲ್ಲಿ ಕಂಡುಬರುವಂತಹ ವಾಕ್ ದೋಷಗಳಾದಂತಹ ಉಚ್ಚಾರದೋಷ, ಉಗ್ಗುವಿಕೆ, ಸ್ವರದೋಷ, ಕಲಿಕಾ ನ್ಯೂನ್ಯತೆ ಇತ್ಯಾದಿಗಳ ಬಗ್ಗೆ ಸಮಗ್ರ ತಪಾಸಣೆ ಮತ್ತು ಮಾಹಿತಿ.
ವೈದ್ಯರು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.00 ರಿಂದ 12.30 ರ ವರೆಗೆ ಲಭ್ಯವಿರುತ್ತಾರೆ.
ಆಡಿಯಾಲಜಿ ಸ್ಪೀಚ್ ಥೆರಪಿ ತಜ್ಞರನ್ನು ಸಂಪರ್ಕಿಸಲು ಕರೆ ಮಾಡಿ : 9459456633/ 0824 2203901
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿರುವರು :
• ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಕಂಕನಾಡಿ.
• ವಂದನೀಯ ರೋಶನ್ ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
• ವಂದನೀಯ ಅಶ್ವಿನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
• ಡಾ. ದೀಪಾ ಪಾಯ್ಸ್, ಉಪ ವೈದ್ಯಕೀಯ ಅಧೀಕ್ಷಕರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ.
• ಡಾ. ಜೋಶ್ನಾ ಶಿವಪ್ರಸಾದ್, ಸಂಯೋಜಕರು, ರಜತೋತ್ಸವ, ರಾಷ್ಟ್ರೀಯ ಸ್ನಾತಕೋತ್ತರ ಹೋಮಿಯೋಪಥಿ ಸಮ್ಮೇಳನ.
• ಡಾ. ಶ್ರೇಯಾಂಕ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ, ರಜತೋತ್ಸವ, ರಾಷ್ಟ್ರೀಯ ಸ್ನಾತಕೋತ್ತರ ಹೋಮಿಯೋಪಥಿ ಸಮ್ಮೇಳನ.
• ಡಾ. ಅನುಷ ಜಿ.ಎಸ್, ಸಂಯೋಜಕರು, ಮಾದ್ಯಮ ಸಮಿತಿ.
Father Muller Homoeopathic Medical College to host RAJATHOTHSAVA – National Homoeopathic Post-Graduate Conference
Father Muller Homeopathic Medical College is completing 25 years of PG course in Homoeopathy. As a part of this Silver Jubilee Celebrations, Programmes such as CME’s, Seminars, competitions wereconducted in the college by all 7 PG departments throughout the year,2023-24.
Culminating this Silver jubilee celebrations,RAJATHOTHSAVA-24,National Homoeopathic Post Graduate Conference will be held on 18th May 2024 at Father Muller Auditorium, Deralakatte. Dr Sanjay Gupta, BHMS, MD(Hom),Secretary, National Commission for Homoeopathy, Government Of India, New Delhiwill be gracing the occasion as the Chief Guest.The event will be presidedby Rev.Fr Richard Aloysius Coelho, Director, Father Muller Charitable Institutions. The Conference Souvenir compilingthe 25 years of the PG programme will be released on this occasion.
The National Postgraduate conference is expecting250 delegates from different parts of the country. Dr JaswantPatil, M.B.B.S, M.D(Chest), BHMS,MA(Alt Therapy), Fellowship in Medical Yoga, will be the resource person for the conference and will be speaking to the gathering on ‘Addressing Clinical challenges through evidence-based solutions”.
Open forum Paper and Poster presentation for Post graduate scholars of Homoeopathy from all over India and Post graduate Alumni of Father Muller Homoeopathic Medical College and National Level Quiz for Interns and Post graduate students will be held on the same day. Cash prizes will be awarded to all the winners.
In April and May, activities included a souvenir cover design competition, an essay writing competition, and the Rajathothsava Online Quiz Marathon, where over 300 teams participated. The top five teams from the quiz marathon advanced to the national quiz competition.
The Valedictory programme with prize distributionfor the competitions will be held at4.30pmfollowed by Banquet at 6.30pm
‘MULLER COMPLEX’ – Laying of Foundation Stone :
New Commercial complex named “Muller Complex” will be launched by laying Foundation Stone on 18.05.2024. Around 10000 sq.ft.space will be available for all the commercial and business purpose.
Inauguration of ‘AUDIOLOGY& SPEECH THERAPY’ OPD :
‘Audiology & Speech Therapy’OPD, for Children and Adults of all ages, will be inaugurated on the same day.
The services available under this unit :
- New born hearing screening
- Hearing testing for Senior Citizen, Adult & Children.
- Hearing aid trial
- Trouble shooting of Hearing Aids
- Evaluation and Management of the various speech and Language disorders (Misarticulation, Stuttering, Voice, Autism, ADHD, Learning Disability, Intellectual Disability, Swallowing problems)
Doctors will be available from Monday to Saturday from 9.00 a.m. to 12.30 p.m.
To consult our Audiology Speech Therapist, please contact : 9459456633/ 0824 2203901
Members present during the Press Meet:
- Rev Fr Richard Aloysius Coelho, Director, FMCI
- Rev FrRoshanCrasta, Administrator, FMHMCH&HPD
- Rev FrAshwinCrasta, Asst. Administrator, FMHMCH&HPD
- Dr DeepaPais, Deputy Medical Superintendent, FMHMCH
- Dr JyoshnaShivaprasad, Convenor /PG Co-ordinator
- Dr ShreyankKotian, Organizing Secretary, RAJATHOTHSAVA National Post- Graduate Homoeopathic Conference
- Dr AnushaG , Media Committee incharge.