ದೇರಳಕಟ್ಟೆ: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನವಂಬರ್ 4 ಮತ್ತು 5ರಂದು “ಪ್ರೇರಣಾ-23”, ದಕ್ಷಿಣ ಭಾರತದ ಹೋಮಿಯೋಪಥಿ ಫೆಸ್ಟ್ ಮತ್ತು 26ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ಆಯೋಜಿಸಿದೆ. ಇದರ ಉದ್ಘಾಟನಾ ಸಮಾರಂಭವು ನವಂಬರ್ 4ರಂದು ಬೆಳಿಗ್ಗೆ 9.00 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ನೆರವೇರಲಿರುವುದು.
ಪಶ್ಚಿಮ ಬಂಗಾಳದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಸದ್ದಮ್ ನವಾಸ್ IಂS ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಕಂಕನಾಡಿ, ಮಂಗಳೂರು ಇದರ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಯೊ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ನವಂಬರ್ 4 ರಂದು ನಡೆಯುವ “ಪ್ರೇರಣಾ 23”, ದಕ್ಷಿಣ ಭಾರತದ ಹೋಮಿಯೋಪಥಿ ಫೆಸ್ಟ್‍ನಲ್ಲಿ ಒಟ್ಟು 10 ಸ್ಪರ್ದೆಗಳು ನಡೆಯುತ್ತಿದ್ದು ದಕ್ಷಿಣ ಭಾರತದ 16 ಕಾಲೇಜುಗಳಿಂದ ಸುಮಾರು 525 ಹೋಮಿಯೋಪಥಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿರುವರು ಹಾಗೂ ವಿಜೇತರಿಗೆ ಸುಮಾರು ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಘೋಷಿಸಲಾಗಿದೆ. ‘ಪ್ರೇರಣಾ’ – ಹೋಮಿಯೋಫೆಸ್ಟ್ ವಿವಿಧ ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಪಠ್ಯ ಮತ್ತು ಪಠ್ಯೇತರ ಪ್ರತಿಭೆಗಳನ್ನು ಬಿಂಬಿಸಲು ಒಂದು ವೇದಿಕೆಯಾಗಿದ್ದು, ಹೋಮಿಯೋಪಥಿ ಭ್ರಾತತ್ವದ ಸಾಂಸ್ಕ್ರತಿಕ ಶಕ್ತಿಯನ್ನು ಪ್ರದರ್ಶಿಸುವ ದಿನವಾಗಿದೆ.
26ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವು ನವಂಬರ್ 5ರಂದು ನಡೆಯಲಿದ್ದು ದೇಶದ ವಿವಿಧ ಭಾಗಗಳಿಂದ ಸುಮಾರು 720 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ವೈಜ್ಞಾನಿಕ ಅವಧಿಯಲ್ಲಿ ಡಾ. ಮನು’ಸ್ ಹೋಮಿಯೋಪಥಿಯ ಸಂಸ್ಥಾಪಕರು, ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ. ಶ್ರೀಕರ್ ಮನು ರವರು ‘ಹೆರಿಂಗ್ಸ್ ಲಾ ಆಫ್ ಕ್ಯೂರ್’ ಅನ್ನು ಪ್ರಸ್ತುತಪಡಿ ಸಲಿರುವರು. ಕಲ್ಕತ್ತಾ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳಾದ ಡಾ. ರಜತ್ ಚಟ್ಟೋಪಾದ್ಯಾಯರು ಸಾಕ್ಷ್ಯ ಆಧಾರಿತ ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಲಿರುವರು. ಹೋಮಿಯೋಪಥಿ ಅಧ್ಯಾಪಕರು ಮತ್ತು ವೈದ್ಯರಿಗೆ ತಮ್ಮ ಸಂಶೋಧನಾ ಆಧಾರಿತ ವೈದ್ಯಕೀಯ ಚಿಕಿತ್ಸೆಯನ್ನು ಪ್ರಸ್ತುತ ಪಡಿಸಲು ಈ ಸಮ್ಮೇಳನದಲ್ಲಿ ಮುಕ್ತ ವೇದಿಕೆಯನ್ನು ಕಲ್ಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಜಿûನ್ ಬಿಡುಗಡೆ ಮಾಡಿ ಕವರ್ ಡಿಸೈನ್ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಗುವುದು ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಸ್ಯೂಟಿಕಲ್ ವಿಭಾಗದಲ್ಲಿ ತಯಾರಾದ ಹೊಸ ಹೋಮಿಯೋಪಥಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಪೆÇ್ರಫೆಸರ್ ಡಾ. ಶ್ರೀನಾಥ್ ರಾವ್ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಕಾರ್ಯಕ್ರಮವು ನವಂಬರ್ 5ರಂದು ಸಂಜೆ 4 ಗಂಟೆಗೆ ನಡೆಯಲಿದ್ದು ಶಾಸ್ತ್ರೀಯ ಕರ್ನಾಟಕ ಸಂಗೀತಗಾರ ಮತ್ತು ಹಿನ್ನೆಲೆ ಗಾಯಕರಾಗಿರುವ ಪ್ರತಿಷ್ಟಿತ ಹಳೆಯ ವಿದ್ಯಾರ್ಥಿ ಡಾ. ನಾರಾಯಣನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮ್ಮೇಳನದ ಸ್ಮರಣಿಕೆ ಬಿಡುಗಡೆ ಮಾಡಲಿರುವರು. ಇದೇ ಸಂದರ್ಭದಲ್ಲಿ ‘ಹೋಮಿಯೋ ಫೆಸ್ಟ್’ ಹಾಗೂ ಪೆÇೀಸ್ಟರ್ ಪ್ರೆಸೆಂಟೇಶನ್‍ನ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸದಸ್ಯರು :
ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ.
ವಂದನೀಯ ರೋಶನ್ ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
ವಂದನೀಯ ಅಶ್ವಿನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ.
ಡಾ. ಇ.ಎಸ್.ಜೆ. ಪ್ರಭು ಕಿರಣ್, ಪ್ರಾಂಶುಪಾಲರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ವಿಲ್ಮಾ ಮೀರಾ ಡಿ’ಸೋಜ, ಉಪಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ಗಿರೀಶ್ ನಾವಡ ಯು. ಕೆ., ವೈದ್ಯಕೀಯ ಅಧೀಕ್ಷಕರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ.
ಡಾ. ಅಮಿತಾ ಬಾಳಿಗ, ಸಂಘಟನಾ ಕಾರ್ಯದರ್ಶಿ, ಹೋಮಿಯೋಪಥಿ ಸಮ್ಮೇಳನ – 2023
ಡಾ. ರಖಾಲ್ ಪಿ. ಸಂಯೋಜಕರು, ‘ಪ್ರೇರಣಾ 2023’
ಡಾ. ಅನುಷ ಜಿ. ಎಸ್. ಸಂಯೋಜಕರು, ಮಾದ್ಯಮ ಸಮಿತಿ, ‘ಪ್ರೇರಣಾ’, ‘ಹೋಮಿಯೋಪಥಿ ಸಮ್ಮೇಳನ 2023’
Father Muller Homoeopathic Medical College to host Prerana-23 & 26th Annual National Homoeopathic Conference
Deralkatte: PRERANA-23, the South Indian Homoeo Fest & 26th Annual National Homoeopathic Conference will be held on the 04th and 5th of November 2023 at Father Muller Auditorium, Deralakatte. The inauguration will be held on 04.11.2023 at 9.00am. Dr Saddam Navas, IAS, Additional District Magistrate, South 24 Parganas, West Bengal will be gracing the occasion as the Chief Guest, and the event will be presided over by Rev, Fr Richard Aloysius Coelho, Director of FMCI,
Prerana- 23, South Indian Homoeo Fest, will be held on 4th November 2023, comprising of total 10 on-stage and offstage events, with a total of 525 participants from over 16 Homoeopathic Medical Colleges from the Southern Part of India and the winners will be rewarded with a cash prizes worth ONE LAKH RUPEES. The Homoeo Fest will be a platform for portraying the curricular and extracurricular talents amongst the Undergraduates from various Homoeopathic Medical Colleges and will be a day to showcase the Cultural strengths of the Homoeopathic fraternity.
The 26th Annual National Homoeopathic Conference will be held on 5th November 2023, with an expected 720 delegates from different parts of the country. Dr Sreekar Manu, Chairman, Managing Director & Founder of Dr Manu’s Homoeopathy will be presenting on the topic “Demonstrating Hering’s Law of Cure” and Dr Rajat Chattopadhyay, Principal & Administrator, The Calcutta Homoeopathic Medical College & Hospital on the topic “Evidence-based clinical cures”. The session will comprise Open Forum for faculty and Homoeopathic Practitioners.
On this occasion the Annual College Magazine ‘PIONEER 2023’ will be released and winners of the cover design competition will be felicitated. There will be a launch of New Homoeopathic products manufactured in the Father Muller Homoeopathic Pharmaceutical Division and Dr Srinath Rao, Professor will be felicitated for his 35 years of dedicated service for the institution.
The Valedictory programme will be held on 05.11.2023 at 4.00pm. Distinguished Alumnus, Classical Carnatic Musician & Playback Singer Dr Narayanan will be the Chief Guest. On this occasion, the prizes for the winners of South Indian Homoeo Fest and Poster presentation will be distributed along with the release of Souvenir 2023.
Members present during the Press Meet:
- Rev Fr Richard Aloysius Coelho, Director, FMCI
- Rev Fr Roshan Crasta, Administrator, FMHMCH & HPD
- Rev Fr Ashwin Crasta, Asst. Administrator, FMHMCH & HPD
- Dr ESJ Prabhu Kiran, Principal, FMHMC
- Dr Vilma Meera D’souza, Vice Principal, FMHMC
- Dr Girish Navada U K, Medical Superintendent, FMHMCH
- Dr Amitha P Baliga, Organizing Secretary, 26th Annual National Homoeopathic Conference
- Dr Rakhal P, Coordinator, Prerana-23
- Dr Anusha G , Media Committee incharge.