ಫಾದರ್ ಮುಲ್ಲರ್ ಹೋಮಿಯೋಪಥಿ :38 ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್ ಉದ್ಘಾಟನಾ ಸಮಾರಂಭ


ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 38ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್‍ನ್ನು ದಿನಾಂಕ10.03.2023ರಂದು ಬೆಳಿಗ್ಗೆ 10.30ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾರದಕೃಷ್ಣ ಹೋಮಿಯೋಪಥಿ ಮೆಡಿಕಲ್ ಕಾಲೇಜ್, ಕುಲಸೇಕರ, ಕನ್ಯಕುಮಾರಿ ಇಲ್ಲಿನ ಮೆಟಿರಿಯಾ ಮೆಡಿಕಾ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ನಾತಕೋತ್ತರ ಕೋರ್ಸ್‍ಗಳ ಸಂಯೋಜಕರಾದ ಡಾ. ವಿನ್‍ಸ್ಟನ್ ವರ್ಗೀಸ್ ವಿ.,ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂ ದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್‍ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗಿರೀಶ್ ನಾವಡಯು.ಕೆ, ಯು.ಜಿ.ಶೈಕ್ಷಣಿಕ ಉಸ್ತುವಾರಿ ಡಾ.ಜಸಿಂತಾ ಮೊಂತೆರೋ ಹಾಗೂ ಹೊಸ ಬ್ಯಾಚ್‍ನ ವಿದ್ಯಾರ್ಥಿ ಪ್ರತಿನಿದಿ üಉದ್ಘಾಟನಾ ಸಮಾರಂಭದಲ್ಲಿಭಾಗವಹಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿ’ಸೋಜರವರು ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಡಾ.ವಿನ್‍ಸ್ಟನ್ ವರ್ಗೀ¸ ಸಂದೇಶದಲ್ಲಿ ಮಾನವರ ದು:ಖವನ್ನು ನಿವಾರಿಸುವ ಗುರಿಯನ್ನು ಹೊಂದಿರುವ ಸುರಕ್ಷಿತ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತುಕಡಿಮೆ ವೆಚ್ಚದಾಯಕವಾದ ಸಮಗ್ರ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿರುವುದು ವಿದ್ಯಾರ್ಥಿಗಳ ಅದ್ರಷ್ಟವೆಂದು ಹೇಳಿದರು. ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಹಾಗೂ ವೈಯುಕ್ತಿಕ ಬೆಳವಣಿಗೆಗೆ ಫಾದರ್ ಮುಲ್ಲರ್ ಹೋಮಿಯೋಪಥಿ ಸಂಸ್ಥೆಯಿಂದ ದೊರೆತ ಪೆÇ್ರೀತ್ಸಾಹವನ್ನು ವಿವರಿಸುತ್ತಾ ಫಾದರ್ ಅಗಸ್ಟಸ್ ಮುಲ್ಲರ್, ಡಾ. ಸ್ಯಾಮುವೆಲ್ ಹಾನ್ನಿಮನ್ ಮತ್ತು ಹೋಮಿಯೋಪಥಿಯ ಇತರ ದಿಗ್ಗಜರೊಂದಿಗೆ ಸಂಬಂಧ ಹೊಂದಿದ್ದು ಮಹತ್ವದ ಇತಿಹಾಸ ಮತ್ತು ಪರಂಪರೆ ಇರುವ ಫಾದರ್ ಮುಲ್ಲರ್ ಸಂಸ್ಥೆಯನ್ನು ತಮ್ಮ ವೈದ್ಯಕೀಯ ಶಿಕ್ಷಣಕ್ಕೆ ಆರಿಸಿಕೊಂಡಿದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಆಡಳಿತಾದಿಕಾರಿಯಾದ ವಂದನೀಯ ರೋಶನ್‍ಕ್ರಾಸ್ತಾರವರು ಗುಣಮಟ್ಟದ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಪ್ರವರ್ತಕ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ಸಂಸ್ಥೆಯನ್ನು ಆಯ್ಕೆ ಮಾಡಿರುವವಿದ್ಯಾರ್ಥಿಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳು ನಿರಂತರವಾಗಿ ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ಹೊಂದಿಕೆಯಾಗಬೇಕು, ಜ್ಞಾನದಿಂದ ನವೀಕರಿಸಬೇಕು ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಕ್ಲಿನಿಕಲ್ ಅನುಭವದ ಮೂಲಕ ಸಮರ್ಥ ಹೋಮಿಯೋಪಥಿಗಳಾಗಬೇಕೆಂದು ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೊಸ ವಿದ್ಯಾರ್ಥಿಗಳನ್ನು ಫಾದರ್ ಮುಲ್ಲರ್ ಸಂಸ್ಥೆಗೆ ಸ್ವಾಗತಿಸಿ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಸ್ವಯಂ ಶಿಸ್ತಿನ ಮೂಲಕ ಯಶಸ್ವಿ ಹೋಮಿಯೋಪಥಿ ವೈದ್ಯರಾಗಬೇಕೆಂದು ಒತ್ತಾಯಿಸಿದರು.
ಶೈಕ್ಷಣಿಕ ಉಸ್ತುವಾರಿ ಡಾ.ಜಸಿಂತಾ ಮೊಂತೆರೋರವರು ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.ಡಾ. ಅನುಷ ಜಿ. ಸನಿಲ್ ಕಾರ್ಯಕ್ರಮವನ್ನು ನಿರೂಪಿಸಿದರು
.