PHOTOS;VARNA STUDIO GANGOLLI
ಕುಂದಾಪುರ, ಅ.13: ಗಂಗೊಳ್ಳಿಯ ಪೀಟರ್ ಮತ್ತು ಜೂಡಿತ್ ರೆಬೆಲ್ಲೊ ಇವರ ಮಗನಾದ ಅಶ್ವಿನ್ ರೆಬೆಲ್ಲೊ ದಿನಾಂಕ 8 ರಂದು ಮಂಗಳೂರು 15 ವರ್ಷಗಳ ಶಿಕ್ಷಣ, ಧಾರ್ಮಿಕ ಶಿಕ್ಷಣ ಪಡೆದು, ಧರ್ಮಗುರುಗಳಾಗುವ ಯೋಗ್ಯತೆ ಸಂಪಾದಿಸಿ ಜೆಪ್ಪುವಿನ ಫಾತಿಮಾ ರೆಟ್ರೀಟ್ ಹೌಸ್ ನಲ್ಲಿ 6 ಜನ ದಿಯೋಕೆÇನಗಳೊಂದಿಗೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ದಿವ್ಯ ಹಸ್ತಗಳಿಂದ ಗುರು ದೀಕ್ಷೆ ಪಡೆದರು,
ದಿನಾಂಕ 11 ರಂದು ಗಂಗೊಳ್ಳಿಯ ಕೊಸೆಸಾಂವ್ ಅಮ್ಮನ ಇಗರ್ಜಿಯಲ್ಲಿ ಧರ್ಮಗುರು ವಂ| ಅಶ್ವಿನ್ ರೆಬೆಲ್ಲೊ ತಮ್ಮ ಪ್ರಥಮ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಗಂಗೊಳ್ಳಿಯ ಧರ್ಮಗುರು ವಂ|ರೋಶನ್ ತೋಮಸ್ ಡಿಸೋಜಾ ಮತ್ತು ಕುಂದಾಪುರ ವಲಯದ, ಉಡುಪಿ ಧರ್ಮಪ್ರಾಂತ್ಯದ ಹಾಗೂ ಜೆಸುವೀಟ್ ಧರ್ಮಗುರುಗಳು, ಹಾಗೂ ವಂ| ಅಶ್ವಿನ್ ರೆಬೆಲ್ಲೊ ಜೊತೆ ದೀಕ್ಷೆ ಪಡೆದ ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು. ಜೊತೆಗೆ ವಂ| ಅಶ್ವಿನ್ ರೆಬೆಲ್ಲೊರ ಕುಟುಂಬಿಕರು, ನೆಂಟರಿಷ್ಟರು, ಗಂಗೊಳ್ಳಿ ಚರ್ಚಿನ ಭಕ್ತಾಧಿಗಳು ಉಪಸ್ಥಿತರಿದ್ದರು.
ಅಭಿನಂದನ ಕಾರ್ಯಕ್ರಮದಲ್ಲಿ ವಂ|ಧರ್ಮಗುರು ನೀತಿನ್ ಮಚಾದೊ ವಂ| ಅಶ್ವಿನ್ ರೆಬೆಲ್ಲೊರ ಪರಿಚಯ ನೀಡಿ, ಅವರ ವೀಶೆಷತೆಯ ಬಗ್ಗೆ ಮಾತನಾಡಿ ಧರ್ಮಗುರುಗಳ ಮುಂದಿನ ಜೀವನಕ್ಕೆ ಶುಭಕೋರಿ ಅಭಿನಂದಿಸಿದರು. ಜೆಸುವೀಟ್ ಮಂಗಳೂರು ಪ್ರಾಂತ್ಯದ ಪೆÇ್ರವಿನ್ಸಿಯಲರ ಪ್ರತಿನಿಧಿಯಾದ ವಂ|ಧರ್ಮಗುರು ಮೆಲ್ವಿನ್ ಲೋಬೊ, ಪ್ರಸ್ತುತ ವಂ| ಅಶ್ವಿನ್ ಸೇವೆ ನೀಡುತ್ತಿರುವ ಮೈನರ್ ಬಾಸಿಲಿಕಾ ಅತ್ತೂರು ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಆಅಲ್ಬನ್ ಡಿಸೋಜಾ, ಶುಭ ಕೋರಿದರು. ಕುಟುಂಬದ, ಚರ್ಚ್, ಐ.ಸಿ.ವೈ.ಎಮ್. ಪರವಾಗಿ ವಂ|ಅಶ್ವಿನರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ಥಳೀಯ ಕಾನ್ವೆಂಟಿನ್ ಮುಖ್ಯಸ್ಥೆ ಸಿಸ್ಟರ್ ಡಾಯ್ನಾ, ಚರ್ಚ್ ಉಪಾಧ್ಯಕ್ಷರಾದ ವಿವಿಯನ್ ಕ್ರಾಸ್ತಾ ಉಪಸ್ಥಿತರಿದ್ದರು.
ವಂ| ಅಶ್ವಿನ್ ತನ್ನ ತಂದೆ ತಾಯಿಯವರನ್ನು, ವಡಹುಟ್ಟಿದವರನ್ನು. ಸನ್ಮಾನಿಸಿದರು. ತಾನು ಧರ್ಮಗುರುಗಳಾಗಲು ಸಹಕರಿಸಿದ ಕಲಿಸಿದ ಧರ್ಮಗುರುಗಳನ್ನು ನೆನೆದು ಕ್ರತ್ಜನತೆ ಸಲ್ಲಿಸಿದರು. ತಾನು ಧರ್ಮಗುರುಗಳಾಗಲು ಸಹಕರಿಸಿದವರನ್ನು ಗೌರವಿಸಿದರು.
ಅಶ್ವಿನ್ ಸಹೋದರ ಒವಿನ್ ರೆಬೆಲ್ಲೊ ಸ್ವಾಗತಿಸಿದರು. ಲೆಸ್ಲಿ ಆರೋಜಾ ನಿರೂಪಿಸಿದರು.