ಕೋಲಾರ,ಮಾ.16: ಕಾಳ್ಗಿಚ್ಚು ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಕರಪತ್ರದ ಮುಖಾಂತರ ಜನ ಜಾಗೃತಿ ಮೂಡಿಸಿ ಕಾಳ್ಗಿಚ್ಚು ಹಂಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸುವಂತೆ ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲಯ್ಯರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅರಣ್ಯಕ್ಕೆ ಬೆಂಕಿಯ ಅಪಾಯವೂ ಬರುತ್ತದೆ ಎಂಬ ಮುಂಜಾಗ್ರತೆ ಇದ್ದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಯಾವುದೇ ಮುಂಜಾಗ್ರತ ಕ್ರಮ ವಹಿಸದೆ ಮೂಕ ಪ್ರಾಣಿಗಳ ಜೀವ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಂಪತ್ತಿನ ವನ್ಯ ಜೀವಿಗಳ ಮಾರಣ ಹೋಮ ಅಷ್ಟೇ ಅಲ್ಲ ಹಠಾತ್ ನೆರೆ ಹಾವಳಿಯ ಪ್ರಮಾಣವೂ ಹೆಚ್ಚುತ್ತದೆ ಏಕೆಂದರೆ ನೀರನ್ನು ಹೀರಿಕೊಳ್ಳುವ ಸೂಕ್ಷ್ಮ ರಂದ್ರಗಳೆಲ್ಲವೂ ಬೂದಿಯಲ್ಲಿ ಮುಚ್ಚಿ ಹೋಗುತ್ತದೆ. ಕಾಡಿನ ಬೆಂಕಿಗೆ ಕಾರಣಗಳು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗುವ ಜೊತೆಗೆ ಅರಣ್ಯ ಅತಿಕ್ರಮಣ, ಕಳ್ಳ ಕೃಷಿ, ಬೇಟೆಗಾರರ ಹಾವಳಿ , ಕೃಷಿ ತ್ಯಾಜ್ಯಗಳ ನಿರ್ಲಕ್ಷದ ವಿಲೇವಾರಿ ಹಾಗೂ ಮೋಜಿಗೆಂದೆ ಕಡ್ಡಿ ಗೀರುವವರ ಕೃತ್ಯದಿಂದಾಗಿ ಬೆಂಕಿ ಹಬ್ಬುತ್ತದೆ ಮಾನವೀಯತೆ ಇಲ್ಲದ ಮನುಷ್ಯನ ಒಂದು ನಿಮಿಷದ ಚೆಲ್ಲಾಟ ಮೂಖ ಪ್ರಾಣಿಗಳ ಆಕ್ರಂದನ ಶಾಪವಾಗಿ ಪರಿಣಮಿಸುತ್ತದೆ ಎಂದು ಆರೋಪ ಮಾಡಿದರು.
ಅರಣ್ಯಕ್ಕೆ ಬೆಂಕಿ ಬಿದ್ದಾಗ ಹತೋಟಿಗೆ ತರಲು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತ ಜೊತೆಗೆ ಯಾವುದೇ ಗುಣಮಟ್ಟದ ಉಪಕರಣಗಳಿಲ್ಲ ಸಾವಿರಾರು ಹೆಕ್ಟೆರ್ ಅರಣ್ಯದಲ್ಲಿ ಬೆಂಕಿ ನಂದಿಸಲು ಅಷ್ಟೇ ಸಾಮಥ್ರ್ಯವುಳ್ಳ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅರಣ್ಯ ಸಿಬ್ಬಂದಿಯ ಪ್ರಾಣ ಹಾಗೂ ಅರಣ್ಯ ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಸಲಹೆ ನಿಡಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬೇಸಿಗೆಯಲ್ಲಿ ಬೆಂಕಿ ಎಂಬುದು ಅರಣ್ಯಕ್ಕೆ ಸೀಮಿತವಾಗದೆ ಕೃಷಿ ಕ್ಷೇತ್ರದ ಬಿಡು ಬಿದ್ದಿರುವ ಕಡೆ ಬೆಂಕಿ ಕಡ್ಡಿ ಗೀಚುವ ಕಿಡಿಗೇಡಿಗಳಿಂದ ರೈತರು ಕೃಷಿ ಭೂಮಿಗೆ ಬೆಂಕಿ ತಗುಲಿ ಡ್ರಿಪ್ , ಮಲ್ಚಿಂಗ್ ಪೇಪರ್ ಜೊತೆಗೆ ಕೈಗೆ ಬಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರಿಗೂ ಲಕ್ಷಾಂತರ ರೂ ನಷ್ಟ ಉಂಟಾಗುತ್ತಿದೆ ಎಂಧು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕಾಳ್ಗಿಚ್ಚು ಬಗ್ಗೆ ಅರಣ್ಯ ಇಲಾಖೆ ಕರಪತ್ರದ ಮೂಲಕ ಜನ ಜಾಗೃತಿ ಮೂಡಿಸಿ ಅರದಲ್ಲೂ ಅರಣ್ಯ ಪಕ್ಕದಲ್ಲಿರುವ ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಬೇಕು, ಮತ್ತು ಬೇಸಿಗೆ ಕಳೆಯುವವರೆಗೂ ಜಿಲ್ಲಾದ್ಯಂತ ಅರಣ್ಯ ಗಸ್ತು ಸಮಿತಿ ತಂಡ ರಚನೆ ಮಾಡಿ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಅರಣ್ಯ ಹಾಗೂ ಮೂಕ ಪ್ರಾಣಿಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು
ಮನವಿ ಸ್ವೀಕರಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಧ ಏಡುಕೊಂಡಲಯ್ಯರವರು ಬೆಂಕಿ ನಿಯಂತ್ರಣಕ್ಕೆ ಸಿಬ್ಬಂದಿ ಹಗಲಿರಳು ಕೆಲಸ ನಿರ್ವಹಿಸುತ್ತಿದ್ದಾರೆ ಕರಪತ್ರದ ಮುಖಾಂತರ ಜನಜಾಗೃತಿ ಮೂಡಿಸಿ ಅರಣ್ಯ ಉಳಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾ.ಅ ಯಲುವಳ್ಳಿ ಪ್ರಬಾಕರ್, ಮಂಗಸಂದ್ರ ತಿಮ್ಮಣ್ಣ, ಮಾಸ್ತಿ ಹರೀಶ್, ಪೆಮ್ಮದೊಡ್ಡಿ ಯಲ್ಲಪ್ಪ, ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯಪಾಲ್, ವೆಂಕಟೇಶ್, ಸಂದೀಪ್‍ರೆಡ್ಡಿ, ರಾಮಸಾಗರ ವೇಣು, ವೆಂಕಟೇಶಪ್ಪ,ಭಾಸ್ಕರ್, ಚಲ, ಸುನಿಲ್‍ಕುಮಾರ್, ಶೈಲ, ನಾಗರತ್ನ, ಚೌಡಮ್ಮ, ಗೀರಿಶ್ ಮುಂತಾದವರಿದ್ದರು.