

ಕೋಲಾರ,ಪೆ.19: ಪ್ರತಿ ಲೀಟರ್ ಹಾಲಿಗೆ 50 ರೂ ಬೆಲೆ ನಿಗಧಿ ಮಾಡಿ 6 ತಿಂಗಳಿಂದ ಬಿಡುಗಡೆಯಾಗದ ಪೆÇೀತ್ಸಾಹದನವನ್ನು ಬಿಡುಗಡೆ ಮಾಡಿ ಬೇಸಿಗೆ ಮುಗಿಯುವವರೆಗೂ ಒಕ್ಕೂಟದಿಂದ ಹಸಿ ಮೇವು ಹಾಗೂ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತ-ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಒಕ್ಕೂಟದ ಮುಂದೆ ಹೋರಾಟ ಮಾಡಿ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
2800 ಟನ್ ಹಾಲಿನ ಪುಡಿ 800 ಟನ್ ಬೆಣ್ಣೆ ಸಮರ್ಪಕವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡದೆ ಒಕ್ಕೂಟದ ಆಡಳಿತ ಮಂಡಳಿಯ ಬೇಜವಬ್ದಾರಿಯಿಂದ ಗೋದಾಮುಗಳಲ್ಲಿ ಕೊಳೆಯುತ್ತಿರುವ ಕೋಟ್ಯಾಂತರ ರೂಪಾಯಿ ಹಾಲಿನ ಪುಡಿಯ ಅವ್ಯವಸ್ಥೆಗೆ ಕಾರಣ ಯಾರು ಖಾಸಗಿ ಡೈರಿಗಳಾ ಜೊತೆ ಹಾಲು ಒಕ್ಕೂಟ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂದು ಒಕ್ಕೂಟ ಮೇಲೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅನುಮಾನ ವ್ಯಕ್ತಪಡಿಸಿದರು
ಪಶು ಆಹಾರ ಬೆಲೆ ಏರಿಕೆಗೆ ಕಡಿವಾಣವಿರಲಿ:
ಪ್ರತಿ ವರ್ಷ ಹಾಲು ಒಕ್ಕೂಟ ಹಾಲಿನ ಬೆಲೆ ಕಡಿತ ಮಾಡುವುದು ಏರಿಕೆ ಮಾಡುವುದು ಸರ್ವೇ ಸಾಮಾನ್ಯ ಆದರೆ ಏರಿಕೆಯಾದಾಗ ಪಶು ಆಹಾರದ ಬೆಲೆಯನ್ನು ಖಾಸಗಿ ಅಂಗಡಿ ಮಾಲೀಕರು ತಮಗಿಷ್ಟ ಬಂದ ರೀತಿ ಬೆಲೆ ಏರಿಕೆ ಮಾಡುತ್ತಿರುತ್ತಾರೆ. ಇದರಿಂದ ರೈತರಿಗೆ ನಷ್ಟದ ಜೊತೆಗೆ ಒಕ್ಕೂಟದಿಂದ ನೀಡುವ ಪಶು ಆಹಾರ ಗುಣಮಟ್ಟದ ಕೊರತೆಯಿಂದ ರೈತರು ಪಶು ಆಹಾರ ಕೊಳ್ಳಲು ಮುಂದೆ ಬರುತ್ತಿಲ್ಲ. ಒಕ್ಕೂಟದ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಸರ್ಕಾರದ ಮೇಲೆ ಒತ್ತಡ ಹಾಕಿ ಖಾಸಗಿ ಪಶು ಆಹಾರ ಬೆಲೆ ನಿಯಂತ್ರಣಕ್ಕೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಪ್ರತಿ ಲೀಟರ್ ಹಾಲಿಗೆ 50 ರೂ ನಿಗಧಿ ಮಾಡಲಿ
ಬೇಸಿಗೆ ಪ್ರಾರಂಭದಲ್ಲಿ ಸಮರ್ಪಕವಾದ ಮೇವು ಸಿಗದೆ ಖಾಸಗಿ ವ್ಯಕ್ತಿಗಳು ಬೆಳೆದಿರುವ ಮೇವನ್ನು ಖರೀದಿ ಮಾಡುವುದರಿಂದ ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ಕನಿಷ್ಠ 28ರೂ ಖರ್ಚು ಬರುತ್ತದೆ. ಒಕ್ಕೂಟ ನೀಡುವ ಬೆಲೆ ಸಾಕಾಗುತ್ತಿಲ್ಲ. ಗ್ರಾಹಕರಿಗೆ ಮಾರಾಟ ಮಾಡುವ ಹಾಲು ಉತ್ಪನ್ನಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಒಕ್ಕೂಟ ರೈತರಿಗೆ ಕನಿಷ್ಠಪಕ್ಷ 50 ರೂ ನಿಗಧಿ ಮಾಡುವ ಮೂಲಕ ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕರ ಸಂಘಗಳಲ್ಲಿನ ಭ್ರಷ್ಟಾಚಾರತೆಗೆ ಕಡಿವಾಣ ಬೀಳಲಿ:
ಬಿಸಿಲು ಮಳೆ ಎನ್ನದೇ ತನ್ನ ಸ್ವಾಭಿಮಾನದ ಜೀವನಕ್ಕಾಗಿ ಹೈನೋದ್ಯಮವನ್ನು ನಂಬಿರುವ ಲಕ್ಷಾಂತರ ಕುಟುಂಬಗಳಿಗೆ ಹಾಲು ಒಕ್ಕೂಟ ನೆರವಾಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿನ ಸಹಕಾರ ಸಂಘಗಳು ದಿನೇದಿನೇ ಭ್ರμÁ್ಟಚಾರದ ಸಮಸ್ಯೆಗಳಾಗಿ ಮಾರ್ಪಡುತ್ತಿವೆ. ರೈತರು ಹಾಕುವ ಹಾಲಿಗೆ ಗುಣಮಟ್ಟದ ಬೆಲೆ ನೀಡದೆ ಎಲ್ಎಲ್ಆರ್ ನೋ ಪೇಮೆಂಟ್ ಹೆಸರಿನಲ್ಲಿ ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಸಹಕಾರ ಸಂಘಗಳ ವಿರುದ್ಧ ಕ್ರಮಕೈಗೊಂಡು ಅವ್ಯವಸ್ಥೆಗೆ ಕಡಿವಾಣ ಹಾಕಬೇಕು. ಎಂದು ಆಗ್ರಹಿಸಿದರು.
ಒಕ್ಕೂಟದ ನಷ್ಟ ಹಾಗೂ ಬಿಎಂಸಿಗಳ ಕಲಬೆರಕೆಗೆ ಕಡಿವಾಣ ಹಾಕಬೇಕು:
ಹಾಲು ಒಕ್ಕೂಟ ದಿನೇ ದಿನೇ ನಷ್ಟದ ಹಾದಿ ಹಿಡಿಯುತ್ತಿದೆ. ಇದಕ್ಕೆ ಕಾರಣ ಒಕ್ಕೂಟದಲ್ಲಿನ ದುಂದು ವೆಚ್ಚ ಹಾಗೂ ಕೆಲವು ನಿರ್ಧಾರಗಳು ಮುಂದಿನ ದಿನಗಳಲ್ಲಿ ಒಕ್ಕೂಟದ ಸಂಪೂರ್ಣ ನಷ್ಟಕ್ಕೆ ಕಾರಣವಾಗುತ್ತವೆ. ರೈತರು ಹಾಗೂ ಕಾರ್ಮಿಕರ ಹಿತದೃಷ್ಠಿಯಿಂದ ನಷ್ಟವನ್ನು ತಪ್ಪಿಸಿ ಲಾಭದತ್ತ ಒಕ್ಕೂಟವನ್ನು ಮುನ್ನಡೆಸಬೇಕು. ಹಾಗೂ ಬಿಎಂಸಿಗಳಲ್ಲಿ ಗುಣಮಟ್ಟದ ಹಾಲಿಗೆ ನೀರು ಕಲಬೆರಕೆ ಮಾಡುವ ದಂಧೆ ತಪ್ಪಿಸಲು ವಿಶೇಷ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹಾಲು ಒಕ್ಕೂಟದ ಅವ್ಯವಸ್ಥೆ ಸರಿಪಡಿಸಿ ಪ್ರತಿ ಲೀಟರ್ ಹಾಲಿಗೆ 50 ರೂಪಾಯಿ ನಿಗಧಿಪಡಿಸಿ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ರೈತರ ಪರ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರು ಆಡಳಿತಾಧಿಕಾರಿಗಳ ಗಮನಕ್ಕೆ ತಂದು ರೈತರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಸುಪ್ರೀಂಚಲ, ಹೆಬ್ಬಣಿ ಆನಂದ್ರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಕದರಿನತ್ತ ಅಪ್ಪೋಜಿ ರಾವ್, ಪೆಮ್ಮದೊಡ್ಡಿ ಯಲ್ಲಪ್ಪ ಪುತ್ತೇರಿ ರಾಜು. ಯಾರಂಘಟ್ಟ ಗಿರೀಶ್, ಶೈಲಜ, ರಾಧ, ರತ್ನಮ್ಮ, ಚೌಡಮ್ಮ, ಸುಗುಣ ಮುಂತಾದವರಿದ್ದರು.
