ಕೋಲಾರ, ಸೆ.26: ಜಿಲ್ಲಾದ್ಯಾಂತ ಜಾನುವಾರುಗಳಿಗೆ ಮಾರಕವಾಗಿರುವ ಚರ್ಮ ಗಂಟು ರೋಗ ನಿಯಂತ್ರಣ ಮಾಡುವಲ್ಲಿ ವಿಪಲವಾಗಿರುವ ಪಶು ಇಲಾಖೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಸಂಘದಿಂದ ಹಾಲಿನೊಂದಿಗೆ ಹೋರಾಟ ಮಾಡಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಹಸುವಿನಿಂದ ಹಾಲು ಕರೆದು ಲಕ್ಷಾಂತರ ರೈತ
ಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮವನ್ನು ರಕ್ಷಣೆ ಮಾಡಿ ಎಂದು ಹಾಲುನೀಡುತ್ತೇವೆ. ಹಸುವನ್ನು ಉಳಿಸಿಕೊಟ್ಟು ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಎಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾನ್ಯರನ್ನು ಒತ್ತಾಯ ಮಾಡಿದರು. ಗ್ರಾಮೀಣ ಪ್ರದೇಶದ ಪಶು ವೈದ್ಯ ಸೇವೆ ಮಾಡಬೇಕಾದ ಪಶು ಇಲಾಖೆಯಲ್ಲಿ ಸಿಬ್ಬಂದು ಕೊರತೆ ಜೊತೆಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ವಿಪಲವಾಗಿರುವುದ್ದಾರೆ ಅವ್ಯವಸ್ಥೆಯ ವಿರುದ್ದ ಆರೋಪ ಮಾಡಿದರು. ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪದಲ್ಲಿ
ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿಯಂತ್ರಣ ಮಾಡುವಲ್ಲಿ ಪಶು ವೈದ್ಯರು ವಿಪಲವಾಗಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಔಷಧಿ ಇಲ್ಲದ ಕಾರಣ ಗುಣಮಟ್ಟದ ಚಿಕಿತ್ಸೆ ದೊರಯದೆ ರೋಗ
ನಿಯಂತ್ರಣಕ್ಕೆ ಬಾರದೆ ಕಣ್ಣುಮುಂದೆಯೇ ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿರುವುದರಿಂದ ಕುಟುಂಬಕ್ಕೆ ಆಸರೆಯಾಗಿದ್ದ ಜೀವ ಕಳೆದುಕೊಂಡ ಕಣ್ಣೀರಿನಲ್ಲಿ ಹೈನುಗಾರಿಕೆ ಇದ್ದರೂ ಸಹಕರಿಸದ ಇಲಾಖೆಯ ವಿರುದ್ದ
ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಗಡಿಭಾಗಗಳಲ್ಲಿ ಕಾಣಿಸಿಕೊಂಡಿರುವ ರೋಗಕ್ಕೆ ಚಿಕಿತ್ಸೆ ನೀಡಬೇಕಾದ ಪಶು ಇಲಾಖೆ ಕಚೇರಿಗಳಲ್ಲಿ ಕುರ್ಚಿಗಳು ಬಿಟ್ಟು ಯಾವುದೇ ಅಧಿಕಾರಿಗಳಿಲ್ಲದೆ ಪಶು ಇಲಾಖೆಗೆ ಬರುವ ರೈತಾಪಿ ವರ್ಗಕ್ಕೆ ಸ್ಪಂದಿಸದ ಪಶು ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದ ಜಾನುವಾರುಗಳನ್ನು ಉಳಿಸಿಕೊಳ್ಳಲು ಖಾಸಗಿ ವೈದ್ಯರು ಇಲ್ಲವೇ ಗರ್ಭಧಾರಣೆ ಮಾಡುವ ಖಾಸಗಿ ವ್ಯಕ್ತಿಗಳನ್ನು ಅವಲಂಭಿಸಿ ಚಿಕಿತ್ಸೆ ಕೊಡಿಸಿದರೂ ರೋಗ ನಿಯಂತ್ರಣಕ್ಕೆ ಬಾರದೆ ರೈತರು ದಿಕ್ಕುತೋಚದೆ ತಲೆ ಮೇಲೆ ಕೈ ಹೊತ್ತು ಪಶು
ಚಿಕಿತ್ಸೆಗಾಗಿ ಕಾತುರದಿಂದ ಕಾಯುತ್ತಿದ್ದಾರೆಂದು ದೂರು ನೀಡಿದರು. ಜಿಲ್ಲಾದ್ಯಾಂತ ಮುಂಗಾರು ಮಳೆ ಆರ್ಭಟಕ್ಕೆ
ತತ್ತರಿಸಿರುವ ರೈತರಿಗೆ ಹಾಗೂ ಜಾನುವಾರುಗಳಿಗೆ ಬಾದಿಸುತ್ತಿರುವ ರೋಗಗಳ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಉಸ್ತುವಾರಿ ಸಚಿವರು ಇದ್ದು ಇಲ್ಲದಂತಾಗಿದ್ದಾರೆ. ನೆಪಮಾತ್ರಕ್ಕೆ ಸಿಡಿಲಿನಂತೆ ಕೆ.ಡಿ.ಪಿ ಸಭೆಯಲ್ಲಿ ಅಬ್ಬರಿಸಿ ನಾಪತ್ತೆಯಾಗುತ್ತಿದ್ದಾರೆಂದು ಉಸ್ತುವಾರಿ ಸಚಿವರ ವಿರುದ್ದ ಕಿಡಿ ಕಾರಿದರು. 24 ಗಂಟೆಯಲ್ಲಿ ಜಿಲ್ಲಾದ್ಯಾಂತ ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗ ನಿಯಂತ್ರಣಕ್ಕೆ ವಿಶೇಷ ವೈದ್ಯರ ತಂಡ ರಚನೆ ಮಾಡಿ ಅಗತ್ಯವಿರುವ ಔಷಧಿಗಳನ್ನು ಪೂರೈಕೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಮನವಿ ನೀಡಿ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ರವರು ಜಾನುವಾರುಗಳಿಗೆ ಬಾಧಿಸುತ್ತಿರುವ ಚರ್ಮಗಂಟು ರೋಗದ ಬಗ್ಗೆ ವರದಿ ತರಿಸಿಕೊಂಡು
ರೋಗ ನಿಯಂತ್ರಣಕ್ಕೆ ಅವಶ್ಯಕತೆಯಿರುವ ಔಷಧಿ ವಿತರಣೆ ಮಾಡುವ ಭರವಸೆಯನ್ನು ನೀಡಿದರು.ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಮುಖಂಡ ಕೋಟೆ ಶ್ರೀನಿವಾಸ್, ತೆರ್ನಹಳ್ಳಿ ಆಂಜಿನಪ್ಪ, ಫಾರೂಖ್ಪಾ ಷ, ಬಂಗಾರಿ ಮಂಜು, ರಾಜೇಶ್, ಸುನೀಲ್ ಕುಮಾರ್, ಗುರುಮೂರ್ತಿ, ಗೀರೀಶ್,ನಳಿನಿ.ವಿ,ಆಧಿಲ್ ಪಾಷ, ಮುಂತಾದವರಿದ್ದರು.