ಶ್ರೀನಿವಾಸಪುರ : ಕಾಲು ಮತ್ತು ಬಾಯಿ ರೋಗ ಬಂದಾಗ ಚಿಕಿತ್ಸೆ ಬದಲಾಗಿ ಲಸಿಕೆಯೇ ಮುಖ್ಯವಾಗಿದೆ ಎಂಬುದನ್ನು ರೈತರು ಅರಿಯಬೇಕು ಎಂದರು. ಪಶು ವೈದ್ಯರು ಮನೆಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ಮರೆಯದೇ ಲಸಿಕೆ ಕೊಡಿಸಬೇಕು ಎಂದು ಕೋಲಾರದ ಪಶು ಸಂಗೋಪನ ಇಲಾಖೆ ಉಪನಿದೇಶಕ ಡಾ|| ಸುಬಾನ್ ಮನವಿ ಮಾಡಿದರು.
ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಂಘದ ಬಳಿ ಸೋಮವಾರ ಪಶು ಸಂಗೋಪನ ಇಲಾಖೆ ವತಿಯಿಂದ ಕಾಲು ಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು 6 ತಿಂಗಳಿಗೊಮ್ಮೆ ರೋಗ ವಿರುದ್ಧ ಲಸಿಕೆ ಹಾಕಿಸುವುದೊಂದೆ ಪರಿಹಾರ ಮಾರ್ಗವಾಗಿದೆ.
ಕಾಲುಬಾಯಿ ರೋಗದ ವಿರುದ್ಧ ಎಲ್ಲಾ ದನ , ಎಮ್ಮೆ, ಕರುಗಳಿಗೆ ಉಚಿತವಾಗಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಯದಲ್ಲಿ ಪಶು ವೈದ್ಯರಾದ ವಿಶ್ವನಾಥ್, ಮಂಜುನಾಥ್, ಲೋಕೇಶ್, ನಿವೃತ್ತ ವೈದ್ಯ ವೆಂಕಟೇಶ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.