ರೈತರ ಉತ್ಪಾದಕರ ಸಂಸ್ಥೆಗಳು , ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸಿ ಬೇರೆಡೆಗೆ ರವಾನಿಸುತ್ತವೆ . ಇದರಿಂದ ಹೆಚ್ಚಿನ ಪ್ರಯೋಜವಾಗುತ್ತದೆ


ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ರೈತರ ಉತ್ಪಾದಕರ ಸಂಸ್ಥೆಗಳು , ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸಿ ಬೇರೆಡೆಗೆ ರವಾನಿಸುತ್ತವೆ . ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜವಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಎಂದು ಹೇಳಿದರು . ತಾಲ್ಲೂಕಿನ ಶ್ಯಾಗತ್ತೂರು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ಸೇವಾ ಮಾಸಾಚರಣೆ , ಸ್ವಚ್ಛತಾ ಆಂದೋಲನ ಮತ್ತು ಶ್ರಮದಾನ ಶಿಬಿರ ಹಾಗೂ ಆಶಾ ರೈತ ಉತ್ಪಾದಕ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು , ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿಲ್ಲ . ಬದಲಿಗೆ ರೈತ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಪಾರಾಗಲು ಸಾಧ್ಯವಾಗಿದೆ ಎಂದು ಹೇಳಿದರು . ರೈತರ ಉತ್ಪನ್ನಕ್ಕೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು ೧೦ ಸಾವಿರ ಎಫ್‌ಪಿಒಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ . ಕೇಂದ್ರ ಸರ್ಕಾರದ ಹಣಕಾಸು ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ .೧೫ ಲಕ್ಷದಿಂದ ರೂ .೧ ಕೋಟಿ ವರೆಗೆ ನೀಡಲಾಗುವುದು ಎಂದು ಹೇಳಿದರು . ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ . ಕೆ.ಎನ್.ವೇಣುಗೋಪಾಲ್ ಮಾತನಾಡಿ , ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಸಕಾಲಿಕ ಕ್ರಮಗಳಿಂದಾಗಿ ದೇಶದಲ್ಲಿ ಕೂವಿಡ್ ನಿಯಂತ್ರಣ ಸಾಧ್ಯವಾಯಿತು , ಕೋವಿಡ್ ನಿರೋಧಕ ಲಸಿಕೆ ಸಂಶೋಧನೆ , ಉತ್ಪಾದನೆ ಹಾಗೂ ನೀಡುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯಿತು . ಅದರ ಪರಿಣಾಮವಾಗಿ ಅಸಂಖ್ಯಾತ ಜನರ ಜೀವ ಉಳಿಯಿತು ಎಂದು ಹೇಳಿದರು . ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ , ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು . ಮುಖಂಡರಾದ ಜಯರಾಮರಡ್ಡಿ , ಎಸ್.ಬಿ.ಮುನಿವೆಂಕಟಪ್ಪ , ನಾಗರಾಜ್ , ಡಾ . ಆರ್.ನಾರಾಯಣ ಸ್ವಾಮಿ , ಎ.ಅಶೋಕ್ ರೆಡ್ಡಿ , ಕೋಟಿಗುಳಿ ನಾರಾಯಣಸ್ವಾಮಿ , ಪದ್ಮನಾಭ , ಚಲಪತಿ , ಇ.ಶಿವಣ್ಣ , ರವಿಕುಮಾರ್ , ರಾಮಾಂಜಿ , ವಿನೋದ್ ಕುಮಾರ್ , ರಮೇಶ್ ಹಾಜರಿದ್ದರು .