ಶ್ರೀನಿವಾಸಪುರ: ರೈತರು ಹಾಗೂ ವಿವಿಧ ಯೋಜನೆಗಳ ಪಿಂಚಣಿದಾರರು ಕಂದಾಯ ಹಾಗೂ ಪಿಂಚಣಿ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ರೋಣೂರಿನ ನಾಡ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ಗೆ ಚಾಲನೆ ನೀಡಿ ಮಾತನಾಡಿ, ಕೃಷಿಕರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ತಾಲ್ಲೂಕು ಕಚೇರಿಗೆ ಬರುವುದನ್ನು ತಪ್ಪಿಸಲು ಹೋಬಳಿ ಕೇಂದ್ರದಲ್ಲಿ ಅದಾಲತ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಅದಾಲತ್ನಲ್ಲಿ ಪಹಣಿ ಕಾಲಂ ನಂಬರ್ 3 ಮತ್ತು 9 ತಿದ್ದುಪಡಿಗೆ ಸಂಬಂಧಿಸಿದಂತೆ 9 ಪ್ರಕರಣಗಳು, 11ಇ ತಿದ್ದುಪಡಿಗೆ ಸಂಬಂಧಿಸಿದಂತೆ 24 ಪ್ರಕರಣಗಳ ಪೈಕಿ ಪಣಣಿಗೆ ಸಂಬಂಧಿಸಿದ 10, 3 ಮತ್ತು 9 ತಿದ್ದುಪಡಿಗೆ ಸಂಬಂಧಿಸಿದ 8 ಪ್ರಕರಣ ಸೇರಿದಂತೆ ಒಟ್ಟು 51 ಕಡತ ವಿಲೇವಾರಿ ಮಾಡಲಾಯಿತು.
ಉಪ ತಹಶೀಲ್ದಾರ್ ಕೆ.ಎಲ್.ಜಯರಾಮ್, ಕಂದಾಯ ನಿರೀಕ್ಷಕ ವಿನೋದ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.