ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಮಾ-15, ಮಾವಿನ ಹೂವಿಗೆ ಬಾದಿಸುತ್ತಿರುವ ಅಂಟುರೋಗ (ಜಿಗಿ ಹುಳು) ನಿಯಂತ್ರಣಕ್ಕೆ ಉಚಿತ ಔಷದಿಯನ್ನು ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ತೋಟಗಾರಿಕ ಸಹಾಯಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಜಿಲ್ಲೆಯ ರೈತರನ್ನು ನಿದ್ದೆ ಗೆಡಿಸುತ್ತಿರುವ ಟೆಮೋಟೋಗೆ ಊಜಿಕಾಟ ಕ್ಯಾಪ್ಸಿಕಂಗೆ ನುಸಿರೋಗ ಕಾಟ ಹೂ ಮತ್ತು ಆಲುಗಡ್ಡೆಗೆ ಅಂಗಮಾರಿ ಕಾಟ ಈಗ ಮಾವು ಬೆಳೆಗಾರರಿಗೆ ಜಿಗಣಿ ಹುಳ ಕಾಟದಿಂದ ಮುಕ್ತಿಯಾಗಲು ಗುಣಮಟ್ಟದ ಔಷಧಿ ದೊರೆಯದೆ ಕಂಗಾಲಾಗಿರುವ ರೈತರು ಮುಂದಿನ ದಿನಗಳಲ್ಲಿ ಕೃಷಿಯನ್ನೇ ತೊರೆದು ಕೂಲಿ ಮಾಡುವ ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ರೈತರ ಮುಂದಿನ ಭವಿಷ್ಯ ನುಡಿದರು.
ಜಿಲ್ಲಾದ್ಯಂತ ಮಾವಿನ ಮರಗಳು ಸಮೃದ್ದವಾದ ಹೂಗಳಿಂದ ಕಂಗಳಿಸುತ್ತಿದ್ದು, ಜೇನು ದುಂಬಿಗಳ ಪರಾಗಸ್ಪರ್ಶ ದಿಂದ ಈಗಾಗಲೆ ಬಹುತೇಕ ಮಾವಿನ ಪಿಂದೆಗಳು ಆರಂಭವಾಗಿರುವ ಕೃಷಿಯಲ್ಲಿರುವ ರೈತರಿಗೆ ಹೂ ಮತ್ತು ಪಿಂದೆಗಳನ್ನು ಕಾಡುತ್ತಿರುವ ಕ್ವಾಟರ್ ಪಿಲ್ಲರ್ಮ ಮತ್ತು ಅಪರ್ಸ್ ಹುಳುಗಳ ದಾಳಿಯಿಂದ ಕೈಗೆ ಬಂದಿರುವ ಪಸಲು ಸಂಪೂರ್ಣವಾಗಿ ನಾಶವಾಗು ಬೀತಿಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದರು ಅಧಿಕಾರಿಗಳು ರೈತರಿಗೆ ಸ್ಪಂಧಿಸುತ್ತಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಜನವರಿ ಸಮಯದಲ್ಲಿ ಗಿಡದಲ್ಲಿ ಹೂ ಅರಳಿ ಈ ಭಾರಿ ಉತ್ತಮವಾದ ಅಧಿಕ ಪ್ರಮಾಣದ ಪಸಲು ಬರುವ ನಿರೀಕ್ಷೆಯಲ್ಲಿ ರೈತರು ಹೆಚ್ಚಿನ ಆದಾಯದ ಮೂಲಕ ಸಾಲ
ತೀರಿಸಿಕೊಳ್ಳುವ ಆಸೆಯಲ್ಲಿದ್ದ ರೈತರಿಗೆ ಆಕಾಶವೇ ಕಳಚಿಬಿದ್ದಂತೆ ಮಾವುಗೆ ಕಾಡುತ್ತಿರುವ ಅಂಟುರೋಗ ನಿಯಂತ್ರಣಕ್ಕೆ ದಿಕ್ಕುತೋಚದಂತಾಗಿದೆ. ಜಿಲ್ಲಾದ್ಯಂತ ಪ್ರತಿಷ್ಠಿತ ಔಷದಿ ಕಂಪನಿಗಳಲ್ಲಿ ಸಾವಿರಾರು ರೂಪಾಯಿ ಹಣ ನೀಡಿ ಔಷದಿ ಸಿಂಪರಣೆ ಮಾಡುತ್ತಿದ್ದರು ಹತೋಟಿಗೆ ಬರುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರೈತರ
ಕೈಗೆ ಸಿಗುತ್ತಿಲ್ಲವೆಂದು ಆರೋಪ ಮಾಡಿದರು. ಉತ್ತಮ ಪಸಲಿನ ನಿರೀಕ್ಷೆಯಿಂದ ಸಸ್ಯ ಸಂರಕ್ಷಣ ಕ್ರಮಗಳನ್ನು
ಕೈಗೊಂಡು ಖರ್ಚು ಮಾಡಿದ್ದ ಹಣವು ಬಾರದ ಸ್ಥಿತಿಯಲ್ಲಿ ಮಾವು ಬೆಳೆ ಇದೆ. ತೋಟ ಗುತ್ತಿಗೆ ಪಡೆಯುತ್ತಿದ್ದ, ವ್ಯಾಪಾರಸ್ಥರು ಬೆಳೆಯ ಸ್ಥಿತಿಗತಿ ಕಂಡು ವಾಪಸ್ಸಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕಷ್ಟಾಪಟ್ಟು ಮಾವು ತೋಟ ನಿರ್ಮಿಸಿ ಮಾವು ಬೆಳೆದು ಇದನ್ನೇ ನಚ್ಚಿಕೊಂಡ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ ಎಂದು ಅಧಿಕಾರಿಗಳಿಗೆ ವಿವರಣೆ ಮಾಡಿದರು. ಹಿಂದೆಂದು ಈ ಪ್ರಮಾಣದಲ್ಲಿ ಅಂಟುರೋಗ ಕಂಡುಬಂದಿಲ್ಲ. ಪ್ರತಿಯೊಂದು ಗಿಡ ಅಂಟು ಕಟ್ಟಿಕೊಂಡಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆ ಸಂಬಂಧಪಟ್ಟ ವಿಜ್ಞಾನಿಗಳನ್ನು ಕರೆಯಿಸಿ ಅಂಟುರೋಗಕ್ಕೆ ಗುಣಮಟ್ಟದ ಔಷಧಿಯನ್ನು ಉಚಿತವಾಗಿ ನೀಡುವ ಮುಖಾಂತರ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ರಕ್ಷಣೆಗೆ ಸರ್ಕಾರದ ತೋಟಗಾರಿಕಾ ಸಚಿವರು ನಿಲ್ಲಬೇಕು ಇಲ್ಲವಾದರೆ ಮಾವಿನ ಅಂಟು ರೋಗದ ಹೂ ಸಮೇತ ಶಾಸಕರ
ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕ ಸಹಾಯಕ ನಿರ್ದೇಶಕರಾದ ಹರೀಶ್ ಕುಮಾರ್ ಮಾವು ಹೂ ಮತ್ತು ಪಿಂದಿಗೆ ಬಾದಿಸುತ್ತಿರುವ ಅಂಟು ರೋಗದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗುಣಮಟ್ಟದ ಔಷಧಿ ವಿತರಣೆದ ಮಾಡಿ ರೈತರ ರಕ್ಷಣೆ ಮಾಡುವ ಭರವಸೆಯನ್ನು ನೀಡಿದರು. ಈ ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ
ಐತಂಡಹಳ್ಳಿ ಮಂಜುನಾಥ, ಹಸಿರು ಸೇನೆ ತಾ.ಅಧ್ಯಕ್ಷ ಆಚಂಪಲ್ಲಿ ಗಂಗಾದರ್, ಆಲವಾಟಿ ಶಿವ, ದ್ಯಾವಂಡಹಳ್ಳಿ ರಾಜಣ್ಣ, ಸಹದೇವಪ್ಪ, ಶೇಕ್‍ಷಪಿವುಲ್ಲಾ, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ಜಿಲ್ಲಾ
ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ, ರಾಯಲ್ಪಾಡು ಹರೀಶ್, ತೆರ್ನಹಳ್ಳಿ ವೆಂಕಿ, ವೆಂಕಟಸ್ವಾಮಿಗೌಡ, ರಮೇಶ್. ಮುಂತಾದವರಿದ್ದರು.