ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ರೈತರು ಟಮೋಟೋ ಬೆಳೆ ಬೆಳದಿದ್ದಾರೆಂದು ಕಂದಾಯ ಇಲಾಖೆಯ ಅದಿಕಾರಿಗಳು ಬೆಳದು ಇನ್ನೇನು 15 ದಿನಗಳಲ್ಲಿ ಫಸಲು ಸಿಗಬೇಕಾಗಿದ್ದ ಬೆಳೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ಬೆಳೆ ನಾಶ ಮಾಡಿದ್ದಾರೆ.
ತಾಲೂಕಿನ ಸೋಮಯಾಜಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ನೆರ್ನಹಳ್ಳಿ ಗ್ರಾಮದ ಶಾಂತಮ್ಮ ಎಂಬುವವರ ಬೆಳೆ ಕಂದಾಯ ಅದಿಕಾರಿಗಳು ನಾಶಗೊಳಿಸಿದ್ದಾರೆ. ನೆರ್ನಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಗ್ರಾಮದ ಬಹುತೇಕ ರೈತರು ಸುಮಾರು 25 ಎಕರೆ ಪ್ರದೇಶದಲ್ಲಿ ಟಮೋಟೋ ಬೆಳೆ ಬೆಳೆದಿದ್ದಾರೆ. ಆದರೆ ಶಾಂತಮ್ಮ ಎಂಬುವವರು ಅರ್ದ ಎಕರೆ ಸ್ವಂತ ಜಮೀನು ಮತ್ತು ಪಕ್ಕದ ಕೆರೆ ಆಂಗಳದಲ್ಲಿ 10 ಗುಂಟೆ ಜಮೀನನಲ್ಲಿ ಮಾತ್ರ ಟಮೋಟೋ ನಾಟಿ ಮಾಡಿದ್ದರು.
ಐಮೋಟೋ ಬೆಳೆ ಇನ್ನೇನು ಕೇವಲ 15 ದಿನಗಳಲ್ಲಿ ಮಾರುಕಟ್ಟೆಗೆ ತಲುಪಲಿದ್ದು ಮಾರುಕಟ್ಟೆಯಲ್ಲಿಯೂ ಟಮೋಟೋಗೂ ಉತ್ತಮ ಬೆಲೆ ಇದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳದಿದ್ದು ಉತ್ತಮ ಲಾಭದ ನಿರೀಕ್ಷಯಲ್ಲಿದ್ದ ರೈತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಶಾಂತಮ್ಮ ಟಮೋಟೋ ಬೆಳೆ ಸಂಪೂರ್ಣ ನಾಶಗೊಳಿಸಿದ್ದಾರೆ.
ಅದೇ ಕರೆಯಂಗಳದಲ್ಲಿ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಸುಮಾರು 25ಎಕರೆ ಜಮೀನಿನಲ್ಲಿರುವ ಬೆಳೆಯನ್ನು ಬಿಟ್ಟು ಶಾಂತಮ್ಮನವರ ಕೇವಲ 10ಗುಂಟೆ ಜಮೀನಿನಲ್ಲಿರುವ ಬೆಳೆಯನ್ನು ನಾಶಗೊಳಿಸಿದ್ದಾರೆ.
ಕೆಳದ ವಾರವಷ್ಟೇ ಜಿಲ್ಲಾಧಿಕಾರಿಗಳು ಅದೇ ಗ್ರಾಮದಲ್ಲಿ ಗ್ರಾಮ ವಾಸ್ತ್ಯ ಮಾಡಿದ್ದರು. ಆಗ ಕೆರೆ ಒತ್ತುವರಿಯ ದೂರಗಳ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಾಗ ಜಿಲ್ಲಾಧಿಕಾರಿಗಳು ನಾಟಿಮಾಡಿರುವ ಬೆಳೆ ಮುಗಿದ ನಂತರ ಒತ್ತುವರಿಯನ್ನು ತೆರವುಗೊಳಿಸಲು ಆದೇಶ ಮಾಡಿದ್ದರು, ಆದರೆ ಯಲ್ದೂರು ಹೋಬಳಿಯ ಕಂದಾಯ ನಿರೀಕ್ಷಕ ವಿನೋದ್ ಮಾತ್ರ ಜಿಲ್ಲಾಧಿಕಾರಿಗಳ ಆದೇಶವನ್ನು ದಿಕ್ಕರಿಸಿ ಬಡವರ ಬೆಳೆಯನ್ನು ನಾಶಗೊಳಿಸಿದ್ದಾನೆ.
ಕೆರೆಯಂಗಳದಲ್ಲಿ ಗ್ರಾಮದ ಬಹುತೇಕ ರೈತರು ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಟಮೋಟೋ ನಾರು ನಾಟಿ ಮಾಡಿದ್ದರು . ನನ್ನ ಜಮೀನು ಕೂಡ ಕೆರೆ ಹೂಂದಿಕೊಂಡೆ ಇರುವುದರಿಂದ 3 ಸಾವಿರ ಟಮೋಟೋ ನಾರು ನಾಟಿ ಮಾಡಿ ನ್ನನ ಜಮೀನಿಗೆ ಹೊಂದಿಕೊಡಿರುವ ಜಮೀನಿನಲ್ಲಿ ಎರಡು ಸಾವಿರ ಟಮೋಟೋ ನಾರು ಮಾತ್ರ ನಾಟಿ ಮಾಡಿದ್ದೆ ಆದರೆ, ನಮ್ಮ ವ್ಯಾಪ್ತಿಗೆ ಸೇರುವ ಕಂದಾಯ ಇಲಾಖೆಯ ನಿರೀಕ್ಷಕ ವಿನೋದ್ ಎಂಬಾತ ಆಗಾಗ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದ, ಇದ್ದಕ್ಕಿದ್ದ ಹಾಗೆ ಶನಿವಾರ ಬೆಳಗ್ಗೆ ಜೆಸಿಬಿ ಮೂಲಕ ನಾವು ಬೆಳೆದಿರುವ ಟಮೋಟೋ ಬೆಳೆ ನಾಶ ಮಾಡಲು ಬಂದಾಗ ಆಗ ನಾನು ಮಹಿಳೆಯಾಗಿ ಆತನ ಕಾಲು ಹಿಡಿದು ಬೇಡಿ ಕೊಂಡೆ ನಾನು ಬೆಳೆಗೆ ಆಳವಡಿಸಿರುವ ಪೈಪುಗಳನ್ನು ಮತ್ತು ಬೆಳೆಗೆ ನಾಟಿ ಮಾಡಿರುವ ಕಡ್ಡಿಗಳನ್ನು ಕಿತ್ತಕೊಳ್ಳುತ್ತೇನೆ ನಂತರ ಬೇಕಾದರೆ ಬೆಳೆ ನಾಶ ಮಾಡಿಕೊಳ್ಳಿ ನನಗೆ ಮೂರು ಗಂಟೆಗಳ ಕಾಲ ವಾದರೂ ಕಾಲಾವಕಾಶ ಮಾಡಿಕೊಡಿ ಎಂದು ಬೇಡಿಕೊಂಡರೂ ಕೇಳದ ನನ್ನ ಬೆಳೆ , ಬೆಳಗೆ ಹಾಕಲಾಗಿದ್ದ ಟಮೋಟೋ ಕಡ್ಡಿಗಳು ಬೆಳೆಗೆ ಆಳವಡಿಸಲಾಗಿದ್ದ ಪೈಪುಗಳನ್ನು ಸಹ ಜೆಸಿಬಿ ಮೂಲಕ ನಾಶಗೊಳಿಸಿದ್ದಾನೆ ಎಂದು ಬೆಳೆ ಕಳೆದುಕೊಂಡ ರೈತ ಮಹಿಳೆ ಕಂದಾಯ ಅಧಿಕಾರಿ ವಿರುದ್ಧ ಆರೋಪಿಸಿದ್ದಾರೆ.
ಸ್ಥಳಕ್ಕೆ ಭಾನುವಾರ ಬೇಟಿ ನೀಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ರೈತ ಮಹಿಳೆಗೆ ಸಾಂತ್ವಾನವನ್ನು ಹೇಳುತ್ತಾ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕನ ದಬ್ಬಾಳಿಕೆಯನ್ನು ಬಡರೈತ ಮಹಿಳೆಯ ಮೇಲೆ ಮಾಡಿರುವುದು ಸರಿಯಲ್ಲ. ದೇಶಕ್ಕೆ ಬೆನ್ನೆಲುಬಾದ ರೈತರ ಮೇಲೆಯೇ ಇಂತಹ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಹೇಳಿ . ಕಂದಾಯ ಇಲಾಖೆಯು ಕೃಷಿ ಪರಿಕರಗಳನ್ನು ನಾಶಪಡಿಸಿದ್ದು , ನಾಶ ಪಡಿಸಿರುವ ಪರಿಕರಗಳನ್ನು ವ್ಯಯಕ್ತಿವಾಗಿ ಕೊಡಿಸುವುದಾಗಿ ಭರವಸೆ ನೀಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೂಲು ಶಿವಾರೆಡ್ಡಿ, ಕಾರ್‍ಬಾಬು, ಜಿ.ಆರ್.ಶ್ರೀನಿವಾಸ್, ಮಂಜು ಇತರರು ಇದ್ದರು.