ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ; ಈ ಭಾಗದ ರೈತರು ಮಾವಿನ ಜೊತೆಗೆ ಗೋಡಂಬಿ ಬೆಳೆಸಿದರೆ ಅಧಿಕ ಇಳುವರಿ ಬರುವುದರ ಜೊತೆಗೆ ಹೆಚ್ಚಿನ ಲಾಭಾಂಶವು ಸಹ ಪಡೆಯಬಹುದು ಆಗಾಗಿ ಗೋಡಂಬಿ ಬೆಳೆಸಲು ರೈತರು ಮುಂದಾಗಿ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್. ಶಂಕರ್ ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ತೋಟಗಾರಿಕಾ ಸಂಶೋದನಾ ಮತ್ತು ವಿಸ್ತರಣಾ ಕೇಂದ್ರ ಹೊಗಳಗೆರೆ ಅಖಿಲ ಭಾರತ ಸಮನ್ವಯ ಗೋಡಂಬಿ ಸಂಶೋಧನಾ ಯೋಜನೆ ಪುತ್ತೂರು ಇವರ ಸಂಯುಕಾಶ್ರಯದಲ್ಲಿ ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಆರ್. ಶಂಕರ್ ಈ ಭಾಗದಲ್ಲಿ ಮಾವಿನ ಬೆಳೆ ಪ್ರಸಿದ್ದಿಯಾಗಿದೆ. ಇಳುವರಿ ಮತ್ತು ಬೆಳೆಯಲ್ಲಿ ರೈತರು ಲಾಭಾಂಶ ಪಡೆಯಲು ಆಗಾದೆ ಇರುವುದರಿಂದ ಗೋಡಂಬಿ ಬೆಳೆಸಿದರೆ ಹೆಚ್ಚು ಲಾಭವನ್ನು ಪಡೆಯಬಹುದು ಇದರ ಜೊತೆಗೆ ಕಡಿಮೆ ನೀರಾವರಿ ಇರುವವರು ಮಿಶ್ರ ಬೇಸಾಯವನ್ನು ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು.
ಈ ಭಾಗದ ರೈತರು ಶ್ರಮ ಜೀವಿಗಳಾಗಿದ್ದು, ಅಂತರ್ ಜಲ ಕಡಿಮೆಯಾಗಿದ್ದರೂ ಇರುವ ಅಲ್ಪ-ಸ್ವಲ್ಪ ನೀರಿನಲ್ಲಿ ಬೆಳೆಗಳನ್ನು ಬೆಳೆಸಿ ತಮ್ಮ ಜೀವನವನ್ನು ಸಾಗಿಸುತ್ತಿರುವುದು ಸಂತೋಷದ ವಿಷಯ ಸರ್ಕಾರ ಕೃಷಿ ತೋಟಗಾರಿಕೆ ಬೆಳೆಗಳು ಬೆಳವಣಿಗೆಗಾಗಿ ಸಂಶೋಧನಾ ಕೇಂದ್ರಗಳು, ಆಧುನಿಕ ಬೇಸಾಯ ಪದ್ದತಿ, ತಂತ್ರಜ್ಞಾನ ಕೃಷಿ ಸಲಕರಣಿಗಳು ಇವುಗಳ ಜೊತೆಗೆ ವಿಜ್ಞಾನಿಗಳ ಮೂಲಕ ತರಬೇತಿ ಕಾರ್ಯಕ್ರಮಗಳು ಆಯೋಜನೆ ಮಾಡಲಾಗುತ್ತದೆ. ಸರ್ಕಾರ ¯ಕ್ಷಾಂತರ ರೂಗಳು ರೈತರಿಗಾಗಿ ವ್ಯಯ ಮಾಡುತ್ತಿದ್ದು, ಈ ಅವಕಾಶವನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದರು.
ಈ ಭಾಗದ ರೈತರಿಗೆ ನೀರಾವರಿ ಸಂಪನ್ಮೂಲಗಳನ್ನು ನಮ್ಮ ಸರ್ಕಾರಗಳು ನೀಡಿದರೆ ಈ ಜಿಲ್ಲೆಯ ಜನ ಚಿನ್ನ ಬೆಳೆದು ನೋಡಿಸುತ್ತಾರೆ ಎಂಬ ವಿಶ್ವಾಸ ಮಾತನ್ನು ವ್ಯಕ್ತಪಡಿಸಿದರು. ಹಾಗೆಯೇ ಮಾವು ಬೆಳೆಗಾರರ ಮನವಿಯಂತೆ ಮಾವು ಸಂಸ್ಕರಣ ಘಟಕ ಜಿಲ್ಲೆಯಲ್ಲಿ ಸ್ಥಾಪಿಸಲು ಪಾಲುದಾರರು ಯಾರಾದೂ ಮುಂದೆ ಬಂದಲ್ಲಿ ಸರ್ಕಾರದಿಂದ 10 ಕೋಟಿ ಸಹಾಯಧನವನ್ನು ಮಂಜೂರು ಮಾಡಿಸಿಕೊಡುತ್ತೇವೆ. ಎಂದರು.
ಮಾವು ಬೆಳೆಗಾರರ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿ ಮಾತನಾಡಿ ಈ ಭಾಗದಲ್ಲಿ ಅತಿ ಹೆಚ್ಚು ಮಾವು ಮತ್ತು ಟಮಾಟೋ ಬೆಳೆಯನ್ನು ಬೆಳೆಯುತ್ತೇವೆ. ಏಷ್ಯಾಖಂಡದಲ್ಲಯೆ ಈ ಎರಡು ಬೆಳೆಯನ್ನು ಬೆಳೆಯುತ್ತೇವೆ. ವಿದೇಶಗಳಿಗೆ ಸಹ ರಫ್ತು ಮಾಡುತ್ತೇವೆ. ನಮ್ಮ ಜನ ಪ್ರತಿನಿದಿಗಳು ಈ ಜಿಲ್ಲೆಯಲ್ಲಿ ಮಾವು ಮತ್ತು ಟಮಾಟೋ ಸಂಸ್ಕರಣ ಘಟಕಗಳು ತೆರೆದರೆ ನಮ್ಮ ರೈತರ ಬದಕು ಅಸನಾಗುತ್ತದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬೇಕು ಹಿಂದಿನ ವರ್ಷ ಅಕಾಲಿಕ ಮಳೆಯಿಂದ ಹೂವು, ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಸಹಾಯಧನಕ್ಕಾಗಿ ಸಲ್ಲಿಸಿರುವ ಅರ್ಜಿಗಳು ಹಾಗೆಯೇ ಬಿದ್ದವೆ. ಸರ್ಕಾರ ಇಲ್ಲಿಯ ತನಕ ಹಣ ಬಿಡುಗಡೆ ಮಾಡದೆರುವುದು ನೋವಿನ ಸಂಗತಿಯಾಗಿದೆ. ಜೊತೆಗೆ ಡ್ರಿಪ್, ಕೃಷಿ ಹೂಂಡಗಳು, ಪ್ಯಾಕ್‍ಹೌಸ್, ನಿಲ್ಲಿಸಿದ್ದಾರೆ. ಎಂದು ಈ ಭಾಗದ ಸಮಸ್ಯೆಗಳನ್ನು ಸಚಿವರಲ್ಲಿ ಮನವಿ ಮಾಡಿದರು.
ಇದೆ ವೇಳೆಯಲ್ಲಿ ಮಾವು ಬೆಳೆಗಾರರ ಸಂಘ ಮತ್ತು ಹೊಗಳಗೆರೆ ಸಂಶೋಧನಾ ಕೇಂದ್ರ ಅಧಿಕಾರಿಗಳಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು
ಇದೇ ಸಮಯದಲ್ಲಿ ಮಾವು ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜ್ ಬಿಜೆಪಿ ಜಿಲ್ಲಾದ್ಯಕ್ಷ ಡಾ|| ವೇಣುಗೋಪಾಲ್, ತಾಲ್ಲೂಕು ಅಧ್ಯಕ್ಷ ಆಶೋಕ್‍ರೆಡ್ಡಿ, ಬಿಜೆಪಿ ರೈತ ಮೋರ್ಚಾಅಧ್ಯಕ್ಷ ಶಾಗೂತ್ತೂರು ಡಾ|| ಆರ್. ನಾರಾಯಣಸ್ವಾಮಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಂ. ಗಾಯಿತ್ರಿ ತೋಟಗಾರಿಕೆಯ ಮಹಾ ವಿದ್ಯಾಲಯ ಟಮಕ ಡಾ|| ಬಿ.ಜಿ. ಪ್ರಕಾಶ್, ತೋಟಗಾರಿಕಾ ಸಂಶೋಧನಾ ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ|| ಆರ್.ಕೆ. ರಾಮಚಂದ್ರ ಹೊಗಳಗೆರೆ, ಡಾ|| ಬಿ. ಆಂಜನೇಯರೆಡ್ಡಿ, ರಾಜೇಂದ್ರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ. ಶ್ರೀನಿವಾಸನ್ ಬೈರಾರೆಡ್ಡಿ, ಹಾಗೂ ರೈತರು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಮತ್ತು ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.