ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು:ಕೆ.ಸಿ.ಮಂಜುನಾಥ್

ಶ್ರೀನಿವಾಸಪುರ 1 : ರೈತರು ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ನಷ್ಟವಾಗುವುದನ್ನ ತಪ್ಪಸಿ ಲಾಭಾದಾಯಕ ಕೃಷಿ ಮಾಡಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ ಕೃಷಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ಇದರೊಂದಿಗೆ ಮುಂದಿನ ಪೀಳಿಗೆಗೆ ಕೃಷಿ ವರ್ಗಾಯಿಸಬೇಕಾದರೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ . ಹಾಗು ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆ, ಜಲಾನಯನ ಕಾರ್ಯಕ್ರಮದ ಬಗ್ಗೆ, ಕಿಸಾನ್ ಯೋಜನೆಯ ಬಗ್ಗೆ ಹಾಗೂ ಸರ್ಕಾರದ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರವಣಾರೆಡ್ಡಿ, ಮುಖಂಡರಾದ ಮುನಿಯಪ್ಪ, ರವಣಪ್ಪ, ಜಯರಾಮರೆಡ್ಡಿ, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪ, ಕೃಷಿ ಮೇಲ್ವಿಚಾರಕ ರಮೇಶ್, ವಲಯ ಮೇಲ್ವಿಚಾರಕ ಡಿ.ಕೆ.ವೆಂಕಟೇಶ್, ಒಕ್ಕೂಟದ ಅಧ್ಯಕ್ಷೆ ವನಜಾಕ್ಷಿ , ನೆಲವಂಕಿ ವಲಯ ಸೇವಾಪ್ರತಿನಿದಿಗಳು, ಪ್ರಗತಿಪರ ರೈತರು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಇದ್ದರು.
18, ಎಸ್‍ವಿಪುರ್ 1 : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಕೆ.ಸಿ.ಮಂಜುನಾಥ್ ಮಾತನಾಡಿದರು.
ಪೋಟು : ದೊಡ್ಡಬಂದಾರ್ಲಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹಾಗು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಅಡಿಯಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಗಾಟಿಸಿದರು
.