ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ರಾಯಲ್ಪಾಡು : ರೈತರು ಕೃಷಿ ಜೊತೆಗೆ ಉಪ ಕಸುಬುಗಳನ್ನು ಕೈಗೊಂಡರೆ ರೈತರು ಆರ್ಥಿಕವಾಗಿ ಸ್ವಾವಲಂಭಿಗಳಾಗಬಹುದು ಎಂದು ಸಂಗಮ್ ಡೈರಿಯ ವ್ಯವಸ್ಥಾಪಕ ವೈ.ಜಿ.ನಾಗರಾಜು ಹೇಳಿದರು .
ತಿಮ್ಮರಾಜಪಲ್ಲಿ ಗ್ರಾಮದ ಸಂಗಮ್ ಡೈರಿವತಿಯಿಂದ ಡೈರಿಯ ಪಲಾನುಭವಿಗಳಿಗೆ ಬೋನಸ್ ಚೆಕ್‌ನ್ನು ವಿತರಿಸಿ ಮಾತನಾಡಿದರು . ರೈತರು ಕೃಷಿ ಚಟುವಟಿಕೆಯೊಂದಿಗೆ ಪಶುಪಾಲನೆ ಕೈಗೊಂಡರೆ ಆದಾಯ ಇಮ್ಮಡಿಯಾಗುತ್ತದೆ . ಈ ನಿಟ್ಟಿನಲ್ಲಿ ಪಶುಪಾಲನೆ ಕಡೆಗೆ ವಿಶೇಷ ಗಮನ ಹರಿಸುವ ಜೊತೆಗೆ ಪಶುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗ , ಜಂತುಹುಳು ರೋಗಗಳಿಗೆ ತಡೆಗಟ್ಟುವ ವಿಧಾನಗಳ ಅರಿತುಕೊಳ್ಳುವುದು ಹಾಗು ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕೆಂದು ತಿಳಿಸಿದರು .
ಸಂಗಮ್ ಡೈರಿ ಅಧ್ಯಕ್ಷ ನರೇಂದ್ರಕುಮಾರ್ ಮಾರ್ಗದರ್ಶನದಂತೆ ೧ ವರ್ಷಕ್ಕೆ ಪ್ರತಿ ಲೀಟರ್‌ಗೂ ೨ ರೂ ದರದಲ್ಲಿ ಬೋನಸ್ ನೀಡಲಾಗುವುದು ಹಾಗೂ ಕೊರೋನದಿಂದ ಬಾಧಿಸುತ್ತಿರುವ ಪಲಾನುಭವಿಗಳಿಗೆ ೧ ತಿಂಗಳ ಹೆಚ್ಚಿನ ಬೋನಸ್ ನೀಡಲಾಗುತ್ತಿದೆ ಅಲ್ಲದೆ ವಾರಕೊಮ್ಮೆ ಹೆಲ್ಲಕ್ಯಾಂಪ್ ಮಾಡಿಸಲಾಗುವುದು ಎಂದರು .
ಶಿಮ್ಮರಾಜಪಲ್ಲಿ , ಅಪ್ಪಿಕೊಂಡದೇಪಲ್ಲಿ , ಕರಿವೀರರೆಡ್ಡಿಪಲ್ಲಿ ಗ್ರಾಮಗಳ ಡೈರಿಯ ಪಲಾನುಭವಿಗಳಿಗೆ ಬೋನಸ್ ಚೆಕ್‌ಗಳನ್ನು ವಿತರಿಸಲಾಯಿತು . ಎನ್.ಆರ್.ಮಧುಸೂದನರೆಡ್ಡಿ , ಟಿ.ವೇಲು , ಶದ್ದೀನ್ , ಲೆಲಿನ್‌ಬಾಬು , ಅನಿಲ್ ಇದ್ದರು . ಸಿಬ್ಬಂದಿಗಳಾದ ಹಾಗು ಇತರರು