![](https://jananudi.com/wp-content/uploads/2025/02/Screenshot-946-1.png)
![](https://jananudi.com/wp-content/uploads/2025/02/raithasanngha-photo-bpt.jpg)
ಬಂಗಾರಪೇಟೆ: ಫೆ-6, ಸಹಕಾರ ಬ್ಯಾಂಕ್ಗಳಿಗೆ ನರ್ಬಾಡ್ನಿಂದ ನೀಡುತ್ತಿದ್ದ ಕೃಷಿ ಸಾಲವನ್ನು ಸ್ಥಗಿತಗೊಳಿಸಿರುವ ಆದೇಶವನ್ನು ವಾಪಸ್ಸು ಪಡೆದು ಕೂಲಿಕಾರ್ಮಿಕರಿಗೆ ನರೇಗಾದಲ್ಲಿ 365 ದಿನ ಕೆಲಸ ನೀಡಬೇಕು. ಹಾಗೂ ಖಾಸಗಿ ಮೈಕ್ರೋ ಪೈನಾನ್ಸ್ ಹಾವಳಿಗೆ ಪ್ರಭಲವಾದ ಕಾನೂನು ಜಾರಿ ಮಾಡಬೇಕೆಂದು ರೈತ ಸಂಘದಿಂದ ತಹಶೀಲ್ದಾರ ಸುಜಾತ ರವರಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಆರೋಗ್ಯ, ಶಿಕ್ಷಣ, ದುಡಿಯುವ ಕೈಗೆ ಉದ್ಯೋಗವನ್ನು ನೀಡುವ ಕಾನೂನು ಜಾರಿಯಾಗಲೀ, ಉಚಿತವಾಗಿ ನೀಡುವ ಯಾವುದೇ ಗ್ಯಾರೆಂಟಿಗಳನ್ನು ನೀಡದಂತೆ ಕಾನೂನು ರಚನೆ ಮಾಡುವ ಜೊತೆಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡವರಿಗೆ 10 ಕೆ.ಜಿ. ಪಡಿತರ ಅಕ್ಕಿಯನ್ನು ವಿತರಣೆ ಮಾಡಿ, ಅದನ್ನು ಬಿಟ್ಟು ಮುಕ್ತ ಮಾರುಕಟ್ಟೆಯಲ್ಲಿ ಪಡಿತರ ಅಕ್ಕಿಯನ್ನು ಹರಾಜು ಹಾಕುವುದನ್ನು ನಿಲ್ಲಿಸಬೇಕು. ಮತ್ತು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂದೆಗೆ ಕಡಿವಾಣ ಹಾಕುವ ಕಾನೂನು ಜಾರಿಯಾಗಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳನ್ನು ಒತ್ತಾಯಿಸಿದರು.
ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ಅಧಿಕಾರ ಹಿಡಿದ ನಂತರ ರೈತರನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳಿಗೆ ಆಧ್ಯತೆ ನೀಡುವ ಮುಖಾಂತರ ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡುವ ಜೊತೆಗೆ ಕೃಷಿಯನ್ನೇ ನಂಬಿ ಸ್ವಾಭಿಮಾನದ ಬುದುಕನ್ನು ಕಟ್ಟಿಕೊಳ್ಳುವ ಜೊತೆಗೆ ಇಡೀ ದೇಶಕ್ಕೆ ಅನ್ನಹಾಕುವ ಅನ್ನದಾತನ ಮೇಲೆ ಹಣಕಾಸು ಸಚಿವರು ತಮ್ಮ ಪ್ರತಾಪವನ್ನು ತೋರಿಸುತ್ತಿರುವುದು ಯಾವ ನ್ಯಾಯ ನಬಾಡ್ನಿರ್ಂದ ಸಹಕಾರ ಬ್ಯಾಂಕ್ಗಳಿಗೆ ನೀಡುತ್ತಿದ್ದ, ಸಾಲವನ್ನು ಸ್ಥಗಿತಗೊಳಿಸುವ ಮುಖಾಂತರ ರೈತರ ವಿರೋದಿ ನೀತಿಯನ್ನು ಅನುಸರಿಸುತ್ತಿರುವುದರಿಂದ ರೈತರು ಖಾಸಗಿ ಬ್ಯಾಂಕ್ಗಳಲ್ಲಿ ಸಾಲ ಮಾಡಿ, ಕೃಷಿ ಮೇಲೆ ಬಂಡವಾಳ ಹಾಕಿ ಲಾಭ ಸಿಗದೆ ನಷ್ಟವಾದಾಗ ಸಾಲ ತೀರಿಸಲಾಗದೆ. ಆತ್ಮಹತ್ಯೆಯ ಹಾದಿ ಹಿಡಿಯಲು ಕೇಂದ್ರ ಸರ್ಕಾರದ ರೈತ ವಿರೋಧಿ ಆದೇಶವೆ ಮರಣ ಶಾಸನವಾಗುತ್ತದೆ ಎಂದು ಆರೋಪಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಒಂದು ಕಡೆ ಸಹಕಾರಿ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಿರ್ಲಕ್ಷೆ ಮಾಡಿ ಮತ್ತೊಂದಡೆ ಖಾಸಗಿ ಬಹುರಾಷ್ಟ್ರೀಯ ಪೈನಾನ್ಸ್ ಕಂಪನಿಗಳ ಜೊತೆ ಹಣಕಾಸು ಸಚಿವರು ಶಾಮೀಲಾಗಿ ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ. ಶಿಕ್ಷಣ, ಆರೋಗ್ಯ, ಮತ್ತಿತರ ಸಮಸ್ಯೆಗಳಿಗೆ ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಸಿಗದೆ ಖಾಸಗಿ ಪೈನಾನ್ಸ್ಗಳಲ್ಲಿ ಸಾಲ ಮಾಡಿ ಮೀಟರ್ ಬಡ್ಡಿ ದಂದೆಗೆ ಸಿಲುಕಿ ಸಾಲ ತೀರಿಸಲಾಗದೆ, ಅವಮಾನ ತಾಳಲಾರದೆ ತನ್ನ ಸ್ವಾಬಿಮಾನದ ಬದುಕನ್ನು ಕಳೆದುಕೊಳ್ಳುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ರಕ್ಷಣೆಗೆ ಸರ್ಕಾರ ಕೂಡಲೇ ಪ್ರಭಲವಾದ ಕಾನೂನನ್ನು ಜಾರಿ ಮಾಡಿ, ಬಲವಂತದ ಸಾಲ ವಸೂಲಿ ಮಾಡದಂತೆ ಎಲ್ಲಾ ರಾಜ್ಯಗಳಿಗೂ ಆದೇಶ ನೀಡಿ, ಬಡವರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶ ರೈತ ಕೂಲಿ ಕಾರ್ಮಿಕರ ರಕ್ಷಣೆಗೆ ಕೇಂದ್ರ ಸರ್ಕಾರ ವರ್ಷದ 365 ದಿನ ದುಡಿಯುವ ಕೈಗೆ ಕೆಲಸ ನೀಡಿ ಪ್ರತಿ ಕಾರ್ಮಿಕರಿಗೆ 1000 ಕೂಲಿ ನಿಗದಿ ಮಾಡುವ ಮುಖಾಂತರ ಎಲ್ಲಾ ಪಂಚಾಯಿತಿಗಳಿಗೆ ಕನಿಷ್ಠ 25 ಕೋಟಿ ನರೇಗಾ ಹಣವನ್ನು ಬಿಡುಗಡೆ ಮಾಡಿ, ಬಡವರ ಸ್ವಾಭಿಮಾನದ ಬದುಕನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.
ಮಾನ್ಯರು ಕೂಡಲೇ ನಬಾರ್ಡ್ ಸಾಲ ಯೋಜನೆ ಸ್ಥಗಿತ ಆದೇಶ ವಾಪಸ್ಸು ಪಡೆಯಬೆಕು. ನರೇಗಾದಲ್ಲಿ ದುಡಿಯುವ ಕೈಗೆ ಕೆಲಸ ನಿಡಬೇಕು. ಪಡಿತರ ಅಕ್ಕಿ ಮುಕ್ತ ಮಾರುಕಟ್ಟೆ ರದ್ದು ಮಾಡಬೇಕು. ಮೈಕ್ರೋ ಖಾಸಗಿ ಪೈನಾನ್ಸ್ ಹಾವಳಿಗೆ ಕಾನೂನು ಜಾರಿ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಸುಜಾತ ರವರು.ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಕದರಿನತ್ತ ಅಪೆÇ್ಪೀಜಿರಾವ್, ಲಕ್ಷ??ಣ್, ಚಾಂದ್ಪಾಷ, ಕಿರಣ್, ಬಾಬಾಜಾನ್, ವಿಶ್ವ, ಮುನಿಕೃಷ್ಣ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಪುತ್ತೇರಿರಾಜು, ಶಿವಾರೆಡ್ಡಿ, ಮುಂತಾದವರು ಇದ್ದರು.