ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇಲ್ಲಿನ ಅಂತಿಮ ಪದವಿ ಎಂ.ಬಿ.ಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಕುರಿತು ಶುಭ ಹಾರೈಸಿದರು. ಹಾಗೆಯೇ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಇವರು ಕಲಿತ ಕಾಲೇಜಿಗೆ ಹಾಗು ತಂದೆ ತಾಯಿಗೆ ಗೌರವ ತರುವಂತೆ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ವಿಭಿನ್ನವಾಗಿ ನೆನಪುಗಳನ್ನು ಮೆಲುಕು ಹಾಕುವ ಅಂತಿಮ ವರ್ಷದ ವಿದ್ಯಾರ್ಥಿಗಳ ಡಾಕ್ಯುಮೆಂಟರಿ ವಿಡಿಯೋ ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ವಿಭಾಗ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ, ಪ್ಲೇಸ್ಮೆಂಟ್ ಡೀನ್ ಪ್ರೊ. ಅಮೃತಮಾಲ, ಪ್ರೊ. ತಿಲಕಲಕ್ಷ್ಮಿ, ಪ್ರೊ.ಕಾವ್ಯ,
ಪ್ರೊ. ಪೂರ್ಣಿಮಾ ಹಾಗೂ ಪ್ರೊ. ನೀಲ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಹರಾ, ಗಗನ್,ಲತಾ, ದೇವೇಂದ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಲೋಹಿತ್ ಹಾಗೂ ಪ್ರತೀಕ ಶೆಟ್ಟಿ ವಂದಿಸಿದರು.
Farewell to MITK MBA Students
Farewell function to bid farewell to the graduating MBA students of Moodlakatte Institute of Technology, Kundapura was organised by the first year students of the department.
On this occasion Principal of the College, Dr. Abdul Kareem addressed the students and wished them good luck in their all future endeavours. Brand Building Director, Dr. Ramakrishna Hegde advised the students to get success and bring laurels to the parents and almameter with their commitment and resilience. A documentary video of final year students reliving different memories was screened on the occasion.First year students dedicated a variety entertainment program to the outgoing seniors. Department Head, Dr. Suchita Pujari, Placement Dean, Prof. Amritmala, Prof. Tilakalakshmi, Prof. Kavya, Prof. Purnima and Prof. Neil were present in the program. Students Sahara, Gagan, Latha and Devendra did the Master of Ceremony and Lohith and Prateek Shetty