

ಬೈಂದೂರು; ಕಳೆದ ಎಂಟು ತಿಂಗಳುಗಳಿಂದ ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ, ಇದೀಗ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಿರ್ಗಮಿಸುತ್ತಿರುವ ಜೆಜ್ವಿತ್ ಧರ್ಮಗುರು ರೆ.ಫಾ. ಜೊಸ್ವಿನ್ ಪಿರೇರಾ ರವರಿಗೆ ಬೈಂದೂರಿನ ಕ್ರೈಸ್ತ ಸಮುದಾಯದ ಪರವಾಗಿ ಬೀಳ್ಕೊಡುಗೆ ಸಮಾರಂಭ ಜರುಗಿತು. ಚರ್ಚಿನ ಧರ್ಮಗುರು ವಂದನೀಯ ರೆ.ಫಾ. ವಿನ್ಸೆಂಟ್ಕುವೆಲ್ಲೊರವರು ಸಹಾಯಕ ಧರ್ಮಗುರುವಿಗೆ ಸನ್ಮಾನಿಸಿ ಮುಂದಿನ ಧಾರ್ಮಿಕ ಸೇವೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚರ್ಚಿನ ಉಪಾಧ್ಯಕ್ಷ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಆಯೋಗದ ಸಂಚಾಲಕಿ ಅನಿತಾ ನಜ್ರೆತ್, ಸಿಸ್ಟರ್ ಆನ್ಸಿ ಪಾವ್ಲ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.





