ವಕ್ಕಲೇರಿ ಆಗಸ್ಟ್-17, ಮರಳು ಮಿಶ್ರಿತ ನಕಲಿ ಡಿ.ಎ.ಪಿ ಸೌಭಾಗ್ಯ (14:28:0) ರೈತರಿಗೆ ವಿತರಣೆ ಮಾಡಿ ವಂಚನೆ ಮಾಡಿರುವ ಜೈ ಕಿಸಾನ್ ಜಂಕ್ಷನ್ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವಂತೆ ನೊಂದ ರೈತ ಹಾಗೂ ರೈತ ಸಂಘದಿಂದ ಅಂಗಡಿ ಮುಂದೆ ಹೋರಾಟ ಮಾಡಿ ಕೃಷಿ ಅಧಿಕಾರಿ ಸುನಿಲರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ವಕ್ಕಲೇರಿ ಹೋಬಳಿ ಶೆಟ್ಟಿಕೊತ್ತನೂರು ಗ್ರಾಮದ ರೈತ ಮುರಳಿ ತನ್ನ ಬೀನ್ಸ್ ತೋಟಕ್ಕೆ 1 ಮೂಟೆ ಡಿ.ಎ.ಪಿಯನ್ನು ಜೈ ಕಿಸಾನ್ ಪಾರ್ಮಹಬ್ ಅಂಗಡಿಯಲ್ಲಿ 1700 ಹಣ ನೀಡಿ ಖರೀದಿ ಮಾಡಿದ್ದ ಗೊಬ್ಬರ ತೋಟಕ್ಕೆ ಹಾಕುವಾಗ ಅನುಮಾನ ಬಂದು ನೀರಿನಲ್ಲಿ ಹಾಕಿ 10 ನಿಮಿಷ್ಯ ಬಿಟ್ಟರೆ ಸಂಪೂರ್ಣವಾಗಿ ಮರಳು ಮಿಶ್ರಿತವಾಗಿರುವುದು ಕಂಡು ಬಂದು ಗಾಬರಿಯಾಗಿ ಅಂಗಡಿ ಮಾಲೀಕನನ್ನು ಕೇಳಿದರೆ ಸರ್ಕಾರವೇ ರಸಗೊಬ್ಬರ ತಯಾರು ಮಾಡಲು ಶೇಕಡ 80 ರಷ್ಟು ಮರಳು ಮಿಶ್ರಿತ ಮಾಡಲು ಅವಕಾಶ ನೀಡಿದೆ. ಉಳಿದ 20 % ಅಮೋನಿಯಂ ಪಾಸ್ಪೆಟ್ ಮಾತ್ರ ಮಿಶ್ರಣ ಮಾಡಿ ರೈತರಿಗೆ ಮಾರಾಟ ಮಾಡಲು ಸೂಚನೆ ನೀಡಿರುವಾಗ ನೀನು ಯಾವ ಲೆಕ್ಕ ಸರ್ಕಾರವೇ ನಮ್ಮ ಪರವಾಗಿದೆ ಎಂದು ರೈತರ ಮೇಲೆ ದೌರ್ಜನ್ಯ ಮಾಡುತ್ತಾರೆಂದು ರೈತ ಮುರಳಿ ಕಣ್ಣೀರು ಹಾಕಿದರು.
ಸಂಬಂಧಪಟ್ಟ ಕೃಷಿ ಅಧಿಕಾರಿಗೆ ಕರೆ ಮಾಡಿದರೆ ನಾವು ಈಗಾಗಲೇ ರಸಗೊಬ್ಬರಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಗುಣಮಟ್ಟ ಇದೆ ಯಾವುದೇ ಕಾರಣಕ್ಕೂ ಕಂಪನಿಯವರ ತಪ್ಪಿಲ್ಲ ಎಂದು ಕಂಪನಿ ಪರ ಮಾತನಾಡುತ್ತಿದ್ದ ಕೃಷಿ ಅದಿಕಾರಯನ್ನು ತರಾಟೆಗೆ ತೆಗೆದುಕೊಂಡ ರೈತ ತಾವು ಕಟ್ಟುವ ತೆರಿಗೆ ಹಣದಲ್ಲಿ ಸಂಬಳ ಪಡೆದು ರೈತ ಪರ ನಿಲ್ಲದೆ ನಕಲಿ ಕಂಪನಿ ಪರ ನಿಲ್ಲುತ್ತೀಯ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳ ಮಾರಾಟ ಮಾಡುವ ಅಂಗಡಿ ಮತ್ತು ತಯಾರು ಮಾಡುವ ಕಂಪನಿಗಳ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಲು ಕೃಷಿ ಸಚಿವರು ಸೂಚನೆ ನೀಡಿರುವ ಜೊತೆಗೆ ದಂದೆಯನ್ನು ತನಿಖೆ ಮಾಡಲು ಸಿ.ಬಿ.ಐಗೆ ಒಪ್ಪಿಸಿದರೆ ಅಧಿಕಾರಿಗಳೇ ನಕಲಿ ಕಂಪನಿಗಳ ಜೊತೆ ಶಾಮೀಲಾಗಿ ರೈತರ ಮರಣ ಶಾಸನವನ್ನು ಬರೆಯುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಟೆಮೋಟೋ ಮತ್ತಿತರ ಬೆಳೆಗಳಿಗೆ ಬಾದಿಸುತ್ತಿರುವ ಬೀಕರ ರೋಗಗಳಿಗೆ ಮನೆಯಲ್ಲಿರುವ ಒಡವೆ ಅಡ ಇಡುವ ಜೊತೆಗೆ ಖಾಸಗಿ ಸಾಲ ಮಾಡಿ ಖರೀದಿ ಮಾಡಿ ಸಿಂಪಡಣೆ ಮಾಡುವ ಔಷಧಿಗಳಿಂದ ರೋಗ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಕಣ್ಣು ಮುಂದೆಯೇ ಬೆಳೆ ನಾಶವಾದಾಗ ಅಧಿಕಾರಿಗಳ ಗಮನಕ್ಕೆ ತಂದೆ ವಿಜ್ಞಾನಿಗಳ ಕಡೆ ಬೆರಳು ತೋರಿಸಿ ಕಂಪನಿಗಳ ಜೊತೆ ಶಾಮೀಲಾಗುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಕಿಡಿಕಾಡಿದರು.
ರೈತ ಕೊಳ್ಳುವ ಡಿ.ಎ.ಪಿ ಮತ್ತಿತರ ರಸಗೊಬ್ಬರಗಳಲ್ಲಿ 50 ಕೆ.ಜಿ.ಗೆ 38 ಕೆ.ಜಿ ಮರಳು ಮಿಶ್ರಿತ ಮಣ್ಣು ಮಿಶ್ರಣ ಮಾಡುವ ಜೊತೆಗೆ ಕಳಪೆ ಔಷಧಿ ಲೇಪಣ ಮಾಡಿ ರೈತರಿಗೆ ನೀಡುತ್ತಿದ್ದಾರೆ. ಇದರಬಗ್ಗೆ ರೈತರಿಗೆ ಜಾಗೃತಿ ಮೂಡಿದೆ ರಸಗೊಬ್ಬ ರ ಕಂಪನಿಯವರು ಸರ್ಕಾರವನ್ನು ದಿಕ್ಕು ತಪ್ಪಿಸಿ ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ಸಬ್ಸಿಡಿ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಮರಳು ಮಿಶ್ರಿತ ಹೊರೆತು ಪಡಿಸಿ ಹುಂಗೆ ಅಥವಾ ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿದರೆ ಭೂಮಿಯ ಫವತ್ತತೆ ಹೆಚ್ಚುತ್ತದೆ ಯಾಕೆಂದರೆ ಪ್ರಕೃತಿ ದತ್ತವಾಗಿ ದೊರೆಯುವ ಮರಳನ್ನೇ ಗೊಬ್ಬರವೆಂದು ರೈತರನ್ನು ನಂಬಿಸಿ ಖಾಸಗಿ ಸಾಲಕ್ಕೆ ಸಿಲುಕಿಸಿ ಆತ್ಮಹತ್ಯೆಯತ್ತ ರೈತರನ್ನು ತಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ಕೃಷಿ ಅಧಿಕಾರಿ ಸುನಿಲ್ ಮಾತನಾಡಿ ಅಂಗಡಿಯ ಸಂಪೂರ್ಣ ದಾಸ್ತಾನು ಸೀಜ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ರೈತರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಮಾಲೂರು ತಾ.ಅಧ್ಯಕ್ಷ ಯಲ್ಲಣ್ಣ, ರಾಮಪ್ಪ, ಲಕ್ಷ್ಮಣ್, ನಾರಾಯಣಸ್ವಾಮಿ, ಕುವಣ್ಣ, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಇದ್ದರು.