

ಮಂಗಳೂರು, ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯಲ್ಲಿ ಜೂನ್ 17, 2025 ರಂದು ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿ.ಸಿ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಸಿ ಹಾಶಿರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಈದ್-ಉಲ್-ಅಧಾ ದೇವರಲ್ಲಿ ನಂಬಿಕೆಯುಳ್ಳವರು ಹೊಂದಿರುವ ಆಳವಾದ ಪ್ರೀತಿ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ , ಸೃಷ್ಟಿಕರ್ತನೊಬ್ಬನೇ, ನಾವೆಲ್ಲಾ ಅವನ ಮಕ್ಕಳು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಖ್ಯಾತ ಸರ್ಜನ್ ಡಾ. ಇಬ್ರಾಹಿಂ ಖಲೀಲ್ ಅವರು ಹಬ್ಬದ ಮಹತ್ವದ ಬಗ್ಗೆ ಮಾತನಾಡಿದರು.
ಪ್ರಾಂಶುಪಾಲರಾದ ರೆ.ಫಾ.ರೋಹನ್ ಡಿ’ ಅಲ್ಮೇಡಾ ಎಸ್ ಜೆ ಯವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ತ್ಯಾಗ, ಏಕತೆ ಮತ್ತು ಸಹೋದರತ್ವ , ಇತರರ ಬಗ್ಗೆ ಸಹಾನುಭೂತಿಯ ಗುಣ ಬೆಳೆಸಿ ಪ್ರೀತಿಯಿಂದ ಬದುಕಲು ಕಲಿಯುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳಾದ ಜಿತೇಶ್ ಮತ್ತು ರಿಜಾ ಫಾತಿಮಾ ಅವರು ಬಕ್ರೀದ್ ಹಬ್ಬದ ಕುರಿತು ಮಾತನಾಡಿ, ಇದು ನಂಬಿಕೆ, ವಿಧೇಯತೆ ಮತ್ತು ತ್ಯಾಗದ ಮೌಲ್ಯಗಳನ್ನು ಎಲ್ಲರಿಗೂ ನೆನಪಿಸುವ ದಿನ ಎಂದು ಹಬ್ಬದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶ್ರೀಮತಿ ಲಾರೆಲ್ ಡಿ’ಸೋಜಾ ಹಾಗೂ ಶ್ರೀಮತಿ ಅಪರ್ಣಾ ಸುರೇಶ ಉಪಸ್ಥಿತರಿದ್ದರು. ವಿಶೇಷ ಹಾಡು ಮತ್ತು ಆಕರ್ಷಕ ನೃತ್ಯವನ್ನು ಒಳಗೊಂಡ ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

Faith, Festivity, and Fraternity Mark Bakrid Celebration at St Aloysius Gonzaga School
St Aloysius Gonzaga School, Mangaluru, celebrated Bakrid (Eid-ul-Adha) with reverence and joy on 17 June 2025, bringing together everyone in a spirit of unity and gratitude.
For students of Classes VI to XII, the celebration featured a meaningful address by the Chief Guest, Mr. P.C. Hashir, Managing Director of Peeci Group and proud parent of P.C. Tanisha of Class X A. He highlighted Eid-ul-Adha as a symbol of unwavering faith and trust in God. The Principal, Fr Rohan D’Almeida SJ, encouraged students to live by the values of compassion, unity and brotherhood. The programme commenced with an invocation, followed by a warm welcome from Avika Joshi of Class VII B. Students representatives shared the significance of the festival, reflecting on themes of faith, obedience, and sacrifice. A soulful song and a graceful dance added cultural vibrancy to the event. The vote of thanks was delivered by Roshita Sunil of Class VI A.
Meanwhile, students of Classes I to V also celebrated Bakrid on 18 June, with great enthusiasm during the assembly. Their programme was graced by Chief Guest Dr Ibrahim Khaleel, Consultant in Preventive Medicine, Cosmetic Surgeon, Endodontist, and parent of Ifza Khadeeja Haleema of Class II B. He emphasized the message of overcoming evil through steadfast faith in God. The celebrations not only provided a platform for cultural expression but also reinforced values of empathy, tolerance and mutual respect. Classes II B, V C, VI A, VII B conducted the programme. Vice-Principals Ms Laurel D’Souza and Ms Aparna Suresh were present on the occasion. The programme was coordinated by Ms Ashwini Lewis, Ms Precilla Sequeira, Ms Beena Pais, and Ms Rashmi.