ಶ್ರೀನಿವಾಸಪುರ 1 : ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹೆಚ್ಚಿನ ಮೊತ್ತದ ಹಣವನ್ನು ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಶರೀನ್ತಾಜ್ ದಾಳಿ ನಡೆಸಿದರು.
ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿನ ಕೆಲ ಸೈಬರ್ ಕೇಂದ್ರಗಳ ಮೇಲೆ ಶುಕ್ರವಾರ ದಾಳಿ ನಡೆಸಿ ಸೈಬರ್ ಸೆಂಟರ್ನ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಮಾತನಾಡಿದರು.
ಸಾರ್ವಜನಿಕರು ಕೆಲ ಸೈಬರ್ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ತಾಲೂಕು ಕಛೇರಿ ಮುಂಭಾಗ ಕೆಲ ಸೈಬರ್ ಸೆಂಟರ್ಗಳಿ ಬೇಟಿ ಮಾಡಿ ಮಾತನಾಡುತ್ತಾ, ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂದಿಸಿದಂತೆ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಕಾರಣಕ್ಕೂ ಫಲಾನುಭವಿಗಳಿಂದ ಹಣ ವಸೂಲಿ ಮಾಡಬಾರದು’ ಎಂದು ಹೆಚ್ಚರಿಸಿ, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ನಡೆದುಕೊಂಡರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ, ಚಿಂತಾಮಣಿ ಸರ್ಕಲ್ ಬಳಿ ಇರುವ ಉರ್ದು ಶಾಲೆಯಲ್ಲಿ, ಹಾಗೂ ಆಯ್ದ ಬಡವಾಣೆಗಳಲ್ಲಿ ಪುರಸಭೆಯಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಸೈಬರ್ ಕೇಂದ್ರವನ್ನು ತೆರಯಲಾಗಿದ್ದು, ಅಲ್ಲಿ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ನಿರೀಕ್ಷಕ ಜೆ.ಸಿ.ನಾರಾಯಣಸ್ವಾಮಿ , ಆರ್ಐ ಮುನಿರೆಡ್ಡಿ ಜೊತೆ ಇದ್ದರು.