ಕುಂದಾಪುರ, ಅ. 26; ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ‘ರೋಜೇರಿಯನ್’ ಕಲೆ, ಕರಕುಶಲ ವಸ್ತುಗಳು ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು 26/10/2024 ರಂದು ಶಾಲಾ ಜಂಟಿ ಕಾರ್ಯದರ್ಶಿ ಹಾಗು ಹೋಲಿ ರೋಜರಿ ಚರ್ಇನ ಧರ್ಮಗುರುಗಳಾದ ಅ। ವಂ। ಪೌಲ್ ರೇಗೋರವರ ಉದ್ಘಾಟಿಸಿ “ಮಕ್ಕಳು ಚೆನ್ನಾಗಿ ವಸ್ತು ಪ್ರದರ್ಶನವನ್ನು ಮಾಡಿದ್ದಾರೆ, ಹೊಸ ಹೊಸ ಆಲೋಚನೆಗಳಿಂದ ಕೂಡಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಹಿರಿಯ ಅಸೋಶಿಯೆಟ್ ಪಿ.ಡಬ್ಲ್ಯು.ಸಿ. ಶ್ರೀನಿಧಿ ಮಧ್ಯಸ್ಥ ಇವರು ಆಗಮಿಸಿ ವಿದ್ಯಾರ್ಥಿಗಳ ಕ್ರಿಯಾಶೀಲತೆಯಿಂದ ಮಾದರಿಗಳನ್ನು ರಚಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೇಜ್ ಶಾಂತಿ ಡಿ’ಸೋಜಾ ಎ.ಸಿ. ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ವಿನೋದ್ ಕ್ರಾಸ್ತಾ ಹಾಗು ಶ್ರೀಮತಿ ಅಮಿತಾ ಬರೆಟ್ಟೊರವರು ಹಾಗು ಶಾಲಾ ಶೈಕ್ಷಣಿಕ ಮಾರ್ಗದರ್ಶಕಿ ಮಾರ್ಗರೇಟ್ ಪಿಕಾರ್ಡೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅತಿಥಿಗಳು ವಿದ್ಯಾರ್ಥಿಗಳಿಂದ ವಿವಿಧ ವಿಜ್ಞಾನ ಮಾದರಿಗಳ ಕುರಿತು ವಿಶ್ಲೇಷಣೆ ಆಲಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಕಿಯರಾದ ಕುಮಾರಿ ರಮ್ಯಾ, ರೆನಿಷಾ ಡಿ’ಅಲ್ಮೇಡಾ, ರಮ್ಯಾ ಹೆಗ್ಡೆ ಮತ್ತು ಓರನ್ ಡಿ’ಸೋಜಾರು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿನಿ ಕುಮಾರಿ ಸಂಚಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ರೋಹಿನಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಧನ್ಯವಾದ ಅರ್ಪಿಸಿದರು.