JANANUDI.COM NETWORK
ಸಮಾರೋಪ ಸಂಭ್ರಮಾಚರಣೆಯು ಇಂದು ಅಕ್ಟೋಬರ್ 7 ರಂದು ರೋಜರಿ ಮಾತಾ ತಾರೀಕಿನ ಹಬ್ಬದಂದು ನೆರವೇರುವುದು. 2019 ಅಕ್ಟೋಬರ್ 7 ರಂದು 450 ವರ್ಷಗಳ ಆಚರಣೆ ಸಂಭ್ರಮತ್ಸೋವ ಆಚರಣೆಗೊಂಡ ಸಂಭ್ರಮ ಇಂದು ಸಮಾರೋಪ ಸಮಾರೋಪದ ಮೂಲಕ ಕೊನೆಗೊಳ್ಳುವುದು. ಕುಂದಾಪುರ ಚರ್ಚಿಗೆ ಒಂದು ಐತಿಹಾಸಿಕ ದಾಖಲೆ ಇದೆ. ಈ ಚರ್ಚ್ ಕುಂದಾಪುರ ಇತಿಹಾಸದ ಜೊತೆ ಮೆಳೈಸಿದೆ. ಈ ಚರ್ಚಿನ ಇತಿಹಾಸ ಕೆದಕಿದರೆ ಕುಂದಾಪುರದ ಇತಿಹಾಸವು ಕಣ್ಣ ಮುಂದೆ ಬರುವುದು. ಹಾಗಾಗಿ ಈ ಲೇಖನವನು ಓದಿ- ಬರ್ನಾಡ್ ಡಿಕೋಸ್ತಾ
ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿ
ಕುಂದಾಪುರದ ರೋಸರಿ ಮಾತೆ ಚರ್ಚ್ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಎರಡನೇ ಹಿರಿಯ ಮತ್ತು ಉಡುಪಿ ಧರ್ಮಪ್ರಾಂತ್ಯದಲ್ಲಿ ಅತೀ ಹಿರಿಯ ಚಾರಿತ್ರಿಕ ಹಿನ್ನೆಲೆಯುಳ್ಳ ಇಗರ್ಜಿ. ಈ ಚರ್ಚಿನ ಇತಿಹಾಸ ಕುಂದಾಪುರ ಚರಿತ್ರೆಯ ಹಲವಾರು ಘಟನೆಗಳ ಜೊತೆ ಮಳೈಸಿದೆ. 1570 ರಲ್ಲಿ ಕುಂದಾಪುರ ಬಂದರಿನ ದಳಪತಿ ಡೊಮ್ ಲೂಯಿಸ್ ಡಿಟೈಡ್ ಫೆಜ್ ಪೆರೆ ಪೋರ್ಟಲೆಜಾ ಇವರ ಶಿಫಾರಸಿನ ಮೇರೆಗೆ, ಆಗಿನ ವೈಸರಾಯ್ ಲೂಯಿಜ್ ಡಿ ಅಥೈಡ್ ಅವರ ಅನುಮತಿಯಂತೆ, ಗೋವಾ ಧರ್ಮ ಪ್ರಾಂತದ ಪ್ರೊವಿನ್ಸಿಯಲ್ ಅಧಿಕ್ರತ ಆದೇಶದಂತೆ 1570 ರಲ್ಲಿ ಪೆÇರ್ಚುಗೀಸರು ಕೋಟೆಬಾಗಿಲಿನ ತಮ್ಮ ಕೋಟೆಯ ಒಳಗಡೆ [Our Lady of Rosary]) ರೋಸರಿ ಮಾತೆಯನ್ನು ಪಾಲಕಿಯನ್ನಾಗಿ ಆರಿಸಿ ಚರ್ಚನ್ನು ನಿರ್ಮಿಸಿದರು. ಕ್ರಮೇಣ ಹಿಂದುಗಳ ಬಾಯಿ ಮಾತಿನಂತೆ ಅದು ರೋಸರಿಯಮ್ಮ ಎಂದು ಖ್ಯಾತವಾಯಿತು. ಇದು ರೋಸರಿ ಮಾತಾ ಚರ್ಚಿನ ಮೊದಲ ಮೈಲುಗಲ್ಲು.
1570 ರಲ್ಲಿ ಗೋವಾದಿಂದ ಕುಂದಾಪುರಕ್ಕೆ ಹೆಚ್ಚಿನ ಕ್ರೈಸ್ತರ ಆಗಮನ
ಪೆÇರ್ಚುಗೀಸಿನ ವಾಸ್ಕೋ ಡಾ ಗಾಮಾನು ಮೇ 20,1498 ರಂದು ಭಾರತಕ್ಕೆ ಬಂದ. ಮುಂದೆ 1510 ರಲ್ಲಿ ಪೆÇರ್ಚುಗೀಸರು ಗೋವಾವನ್ನು ವಶಪಡಿಸಿಕೊಂಡರು. 1570 ರಲ್ಲಿ ರೋಜರಿ ಮಾತೆ ಚರ್ಚ್ ಕಟ್ಟಿದ ವರ್ಷವೇ ಬಿಜಾಪುರ ಸುಲ್ತಾನ್ ಆದಿಲ್ ಷಾಯಿ ಗೋವಾದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಾನೆ. ಪೋರ್ಚುಗೀಸರು ತಮ್ಮ ಅಧಿಕಾರ, ವ್ಯಾಪಾರವನ್ನು ನಿಯಂತ್ರಣದಲ್ಲಿಡಲು ಕೆನರಾ ಕರಾವಳಿಯಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಾರೆ. ಗೋವಾದಲ್ಲಿ ಅದಿಲ್ ಷಾಯಿಯ ಆಕ್ರಮಣದಿಂದಾಗಿ ಕುಂದಾಪುರಕ್ಕೆ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಹಾಗೇ ಕ್ರೈಸ್ತರ ಸಂಖ್ಯೆ ಹೆಚ್ಚುತ್ತದೆ (ಆ ಸಮಯದಲ್ಲಿ ಕೇವಲ ಕ್ರೈಸ್ತರು ಮಾತ್ರವಲ್ಲ, ಕೊಂಕಣಿ ಮಾತನಾಡುವ ಎಲ್ಲಾ ಸಮುದಾಯದವರು ಆಗಮಿಸಿರಬೇಕು) ಮೊದಲು ಕೋಟೆಯಲ್ಲಿ ನಿರ್ಮಿಸಿದ ಚರ್ಚಿಗೆ ಕೋಟೆಯ ಅಧಿಕಾರಿಗಳಿಗೆ ಅಲ್ಲಿಯ ನವ್ಕರರಿಗೆ ಮಾತ್ರ ಪ್ರವೇಶವಿತ್ತು, ಅವಿವಾಹಿತ ಪೆÇರ್ಚುಗೀಸರಿಗೂ ಅವಕಾಶ ಇರಲಿಲ್ಲ. ಆದರೆ ಅದೇ ವರ್ಷ ಎಲ್ಲಾ ಕ್ರೈಸ್ತರ ಅನುಕೂಲಕ್ಕಾಗಿ ಕೋಟೆಯ ಪಕ್ಕದಲ್ಲೆ ಹೊರಗಡೆ ಚರ್ಚಿನ ಮತ್ತೊಂದು ಭಾಗವೆಬಂತೆ ಮತ್ತೊಂದು ಇಗರ್ಜಿ ನಿರ್ಮಿಸಿದರು. ಇದು ಕ್ರಮೇಣ ಸಾರ್ವಜನಿಕರ ಚರ್ಚ್ ಆಯಿತು. ಇದು ಕುಂದಾಪುರ ರೋಸರಿ ಚರ್ಚಿನ ಎರಡನೇ ಮೈಲಿಗಲ್ಲು.
ಬಸ್ರೂರು ಅಂದರೆ ಪೋರ್ಚುಗೀಸರಿಗೆ ಬಾರ್ಸೆಲೋರ್
ರಾಜರು ಬಸ್ರೂರಿನಲ್ಲಿ ನೆಲಸಿದ್ದರಿಂದ ಅಂದು ಬಸ್ರೂರನ್ನೇ ಮುಖ್ಯವಾಗಿ ಗಣನೆಗೆ ತೆಗುದುಕೊಳ್ಳುತಿದ್ದರು. ಹಿಂದೆ ಬಸ್ರೂರನ್ನು ಅಬು-ಸರೂರ್ ಎಂದು ಕರೆಯಲಾಗುತಿತ್ತು. ಇಲ್ಲಿ ಉತ್ತಮ ಅಕ್ಕಿ ಬೆಳೆಯುತ್ತಿತ್ತು, ತಾಳೆ ಮರಗಳು ತುಂಬ ಇದ್ದು ಅದರ ಉತ್ಪನ್ನ, ಕಾಳುಮೆಣಸು ಇವುಗಳನ್ನು, ವಿದೇಶದ ಸೌದಿ ಅರೇಬಿಯಾದ ಒರ್ಮಸ್ ಎಡೆನ್‍ನವರು ಕೊಂಡುಕೊಳ್ಳುತಿದ್ದರು. ಆ ಸರಕುಗಳ ಬದಲಿಗೆ ಅವರು ವಿನಿಮಯವಾಗಿ ತಾಮ್ರ, ತೆಂಗಿನಕಾಯಿ, ತೆಂಗಿನೆಣ್ಣೆ, ನೀರು ಬೆಲ್ಲಾ ಕೊಡುತ್ತಿದ್ದರು ಎಂದು ಚರಿತ್ರಾಕಾರರು ಬರೆದಿದ್ದಾರೆ. ಪೆÇರ್ಚುಗೀಸರಿಗೆ ಬಸ್ರೂರನ್ನು ಬಸ್ರೂರು ಎಂದು ಕರೆಯಲು ಕಷ್ಟವಾದದ್ದರಿಂದ ಬಾರ್ಸೆಲೋರ್ ಅಂತಾ ಉಚ್ಚರಿಸುತ್ತಾ ಅವರು ದಾಖಲೆಗಳಲ್ಲಿ ಹಾಗೇ ಬರೆಯುತ್ತಾರೆ, ಹಾಗೇ ಬಸ್ರೂರನ್ನು ಮೇಲ್ ಬಸ್ರೂರು ಮತ್ತು ಕುಂದಾಪುರವನ್ನು ಕೆಳ ಬಸ್ರೂರು ಅಂತಾ ದಾಖಲಿಸಿಕೊಳ್ಳುತ್ತಾರೆ.
ಕಿ,.ಶ. 1542 ರಲ್ಲೆ ಕುಂದಾಪುರ ಆಸುಪಾಸಿನಲ್ಲಿ ಪೋರ್ಚುಗೀಸರು ಬಂದು, ದಾಳಿ ಮಾಡಿ ಸ್ಥಳಿಯರಿಂದ ವಾರ್ಷಿಕ ಕಪ್ಪ ವಸೂಲಿ ಮಾಡುತಿದ್ದರು. ಬಂದರಿನ ವ್ಯಾಪಾರಿಗಳನ್ನು ಪೋರ್ಚುಗೀಸರು “ಚಾಟಿನ್ಸ್ ಡಿ ಬಾರ್ಸಿಲರ್” (ಬಾರ್ಸೆಲೋರಿನ ಶೆಟ್ಟಿ) ಎಂದು ಕರೆಯುತಿದ್ದರು. 1569 ರಲ್ಲಿ ದೊಡ್ಡ ಸೈನ್ಯದೊಂದಿಗೆ ಪೆÇರ್ಚುಗೀಸರು ಬಾರ್ಸಿಲೋರ್‍ಗೆ ಆಗಮಿಸುತ್ತಾರೆ. ಸ್ಥಳೀಯ ತುಂಡರಸ ತೋಳಾರ್, ಹೊಸಂಗಡಿಯ ಮುಖ್ಯಸ್ಥ ಹೊನ್ನಯ್ಯ ಕಾಂಬ್ಲಿಯನ್ನು ಕರೆಯುತ್ತಾರೆ. ಪೆರ್ಡುರು ಮುಖ್ಯಸ್ಥರ ದೊಡ್ಡ ಸೈನ್ಯವೂ ಸೇರುತ್ತದೆ .ಇವರ ನದುವೆ 3 ಯುದ್ಧಗಳು ನಡೆಯುತ್ತದೆ. ಎಷ್ಟೊ ಸೈನಿಕರು ಹತರಾಗುತ್ತಾರೆ.ಕೊನೆಗೆ ಸ್ಥಳಿಯ ರಾಜರು ಸೋತು ಅವರು ಪೋರ್ಚುಗೀಸರಿಗೆ ಕುಂದಾಪುರದಲ್ಲಿ ತಮ್ಮದೇ ಆದ ಕೋಟೆಯನ್ನು ಕಟ್ಟಲು ಅನುಮತಿ ನೀಡುತ್ತಾರೆ.
1569 ರಲ್ಲೆ ಗೋವಾ ಪ್ರಾಂತದ ಆದೇಶದ ಮೇರೆಗೆ ಜೆಸುವ್ಯಿಟ್ ಕ್ರೈಸ್ತ ಧರ್ಮಗುರುಗಳಾದ ಫಾ|ಸೆಬೆಸ್ಟಿಯಾ ಒ ಗೊನ್ಜಾಲೆಸ್ (ಎಸ್. ಜೆ.) ಮತ್ತು ಫಾ| ಮಾರ್ಟಿನ್ ಸಿಲ್ವಾ (ಎಸ್.ಜೆ.) ಪೋರ್ಚುಗೀಸರ ಧರ್ಮ ಸೇವೆಗೆ ಬಂದಿದ್ದರು. ಹಾಗೇ ಯುದ್ದದ ಘಾಯಾಳುಗಳಿಗೆ ಚಿಕಿತ್ಸೆ ನೀಡುವರಾಗಿದ್ದು ಅದಕ್ಕಾಗಿ ಅವರು ಗುಡಿಸಲಿನಂತಹ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಇದೇ ಸಮಯದಲ್ಲಿ ಫಾ| ಮಾರ್ಟಿನ್ ಸಿಲ್ವಾ ಎಸ್.ಜೆ ಸ್ವತಹ ದಾಳಿಗೆ ಒಳಗಾಗಿ ನಿಧನರಾಗುತ್ತಾರೆ. (ಅವರು ಕುಂದಾಪುರದ ಚರಿತ್ರೆಯಲ್ಲಿ ಯೇಸು ಕ್ರಿಸ್ತರಿಗಾಗಿ ಮಡಿದ ಮೊದಲ ಮಾರ್ಟಿರ್ ಅನ್ನಬಹುದು)
ನಂತರದ ವರ್ಷಗಳಲ್ಲಿ ಚರ್ಚ್ ಪರಿಸರದಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಕಾದಾಟದ ಭಯ ಮತ್ತೊಂದೆಡೆಯಾದರೆ ಡಚ್ಚರು ಪೆÇ್ರಟೆಸ್ಟಂಟ್ ಪಂಗಡದವರಾಗಿದ್ದು ಅವರು ಕ್ಯಾಥೊಲಿಕರ ವಿರೋಧಿಗಳಾಗಿದ್ದರು, ಈ ಭಯದಿಂದ ಚರ್ಚನ್ನು ಮದ್ದುಗುಡ್ಡೆಗೆ (ವೆಸ್ಟ್ ಬ್ಲಾಕ್) ಸ್ಥಳಾಂತರಿಸಲಾಯಿತು. ಇದು ಕುಂದಾಪುರ ರೋಸರಿ ಚರ್ಚಿನ ಮೂರನೇ ಮೈಲಿಗಲ್ಲು. ಇಲ್ಲಿ ಸ್ಥಾಪಿಸಿದ ಚರ್ಚ್ ಅಲ್ಪ ಕಾಲದೆಂದು ಚರಿತ್ರಾಕಾರರು ಹೇಳುತ್ತಾರೆ.
ಕುಂದಾಪುರದ ಆಸುಪಾಸು ಭೂಕುಸಿತ ಭಾರಿ ಚಂಡಮಾರುತ
ಸುಮಾರು 17 ನೇ ಶತಮಾನದ ಎರಡನೇ ಅಥವಾ ಮೂರನೇ ದಶಕದಲ್ಲಿ. ಕುಂದಾಪುರ ತಾಲೂಕಿನಲ್ಲಿ ಭೂಕುಸಿತ ಮತ್ತು ಭಾರಿ ಚಂಡಮಾರುತದ ಕಾರಣ ಭೌಗೋಲಿಕ ಬದಲಾವಣೆಗೆ ಕಾರಣವಾದದ್ದು ಅಚ್ಚರಿ ಮತ್ತು ಅನೇಕರಿಗೆ ತಿಳಿಯದ ವಿಚಾರ. ಇದರಿಂದಾಗಿ ಹಳೆಅಳಿವೆ ಮುಂತಾದ ಕಡೆ ಕೆಸರು ಮಣ್ಣಿನಿಂದ ತುಂಬಿ (ಹಾಗಾಗಿ ಹಳೆ ಅಳ್ವೆ ಕುಂದಾಪುರ ಚರ್ಚಿನ ಆಸುಪಾಸು ಅಗೆದರೆ ಕೆಸರುಮಣ್ಣು, ಉಪ್ಪು ನೀರು ಸಿಗುತ್ತದೆ) ಮುಚ್ಚಿ ಹೋಗಿ ಹಡಗುಗಳು ಬರಲು ತೊಂದರೆಯಾಗುತ್ತದೆ. ಮೊದಲು ಹಡಗುಗಳು ಹಳೆ ಅಳ್ವೆಯಿಂದಲೇ ಬರುತಿದ್ದವು. ನಂತರ ಹಡಗುಗಳು ಗಂಗೊಳ್ಳಿ ಅಳಿವೆಯಿಂದ ಬರತೊಡಗಿದವು. ದಿನಗಳೆದಂತೆ ಡಚ್ಚರ ಪ್ರಭಾವ ಜಾಸ್ತಿಯಾಗಿ ಕೆನರಾ ಸೇರಿದಂತೆ ಕರಾವಳಿಯಾದ್ಯಂತ ಮಿಶಿನರಿಗಳು ತಮ್ಮ ಚರ್ಚಿನ ದಾಖಲೆ (ರೆಜಿಸ್ಟರ್‍ಗಳನ್ನು) ಪುಸ್ತಕಗಳೊಂದಿಗೆ ಗೋವಾಕ್ಕೆ ಓಡಿಹೋದರು. ಇದೇ ಕಾರಣದಿಂದ ಕುಂದಾಪುರ ಚರ್ಚಿನ ನಿಜ ಚರಿತ್ರೆ ಮುಚ್ಚಿ ಹೋಯಿತು. ಆದರೆ ಫಾ| ಪ್ರತಾಪ್ ನಾಯಕ್ ಎಸ್.ಜೆ.(ಖ್ಯಾತ ಸಾಹಿತಿ) ಇವರಿಗೆ ಗೋವಾದ ಸಂತ ತೋಮಸ್ ಸ್ಟೀಫನ್ ಸಂಶೋಧನ ಗ್ರಂಥಾಲಯದಲ್ಲಿ ಕುಂದಾಪುರ ಚರ್ಚಿನ ದಾಖಲೆಗಳು ದೊರಕಿ ಪೆÇರ್ಚುಗೀಸ್ ಭಾಷೆಯಲ್ಲಿದ್ದ ದಾಖಲೆಗಳನ್ನು ಭಾಷಾಂತರ ಮಾಡಿದ ನಂತರ ನಿಜ ಚರಿತ್ರೆ ಬೆಳಕಿಗೆ ತಂದರು.
ಧರ್ಮಗುರುಗಳು ಓಡಿ ಹೋದದ್ದರಿಂದ ಕೆನರಾದಲ್ಲಿ ಅಲ್ಲಲ್ಲಿ ಚದುರಿದ ಹೋದ 6000 ಕ್ರೈಸ್ತರಿಗೆ ಫಾ|ಸ್ಪಿನೋಲಾ ಎಸ್.ಜೆ ಒಬ್ಬನೇ ಒಬ್ಬ ಧರ್ಮಗುರುಗಳಿದ್ದು, ಅವರು ಎಲ್ಲೆಲ್ಲಿ ಹಾದು ಹೋದರೊ ಅಲ್ಲಿ ಸಂಸ್ಕಾರಗಳನ್ನು ನೀಡಿದರು. 1663 ರಲ್ಲಿ ಯುರೋಪಿನಲ್ಲಿ ಯುರೋಪ್ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕೆನರಾದಲ್ಲಿ ಸ್ವಲ್ಪ ಶಾಂತಿಯ ವಾತವರಣ ಕಂಡು ಬಂತು.
ಕೆನರ ಧರ್ಮಸಭೆಯಲ್ಲಿ ದೇಶಿಯ ಬದಲಾವಣೆಯ ಯುಗ
ಬಹಳ ವಿಶಾಲವಾಗಿದ್ದ ಗೋವಾ ಧರ್ಮಪ್ರಾಂತ್ಯಕ್ಕೆ ಪೋಪರ ಅನುಮೋದನೆಯೊಂದಿಗೆ ಪೋರ್ಚುಗೀಸ್ ರಾಜನೇ ಬಿಶಪರನ್ನು ನೇಮಕ ಮಾಡುತಿದ್ದನು. ಆದರೆ ನಂತರ ಪೆÇಚುಗೀಸ್ ಅರಸರು ಪೆÇೀಪರು ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಕಾರಣ 1622 ಇಸವಿಯಲ್ಲಿ ಪೋಪ್ ಗ್ರೆಗೊರಿ ‘15’ ಪವಿತ್ರ ಸಭೆಯ ಕ್ರಿಯೆಗಳನ್ನು ನಿಯಂತ್ರಿಸಲು ಪೆÇ್ರಪಾಗಾಂದ ಎಂಬ ವಿಭಾಗ ರಚಿಸಿಸುತ್ತಾರೆ. ಇದಕ್ಕೆ ವಿರೋಧವೆಂಬತ್ತೆ ಪೆÇರ್ಚುಗೀಸರು ಪಾದ್ರೊವಾದೊ ಪಂಗಡ ರಚಿಸಿ ಪೋಪ್‍ರ ಪಂಗಡಕ್ಕೆ ಅಡಚಣೆಗಳುಂಟು ಮಾಡುತ್ತಾರೆ. ಆದರೆ ಪೋಪ್‍ರ ಪಂಗಡ ಶಾಂತಿಯಿಂದ ಯಶಸ್ವಿಯಾಗಿ ತಮ್ಮ ಧರ್ಮ ಕ್ರಿಯೆಗಳನ್ನು ನಿಭಾಯಿಸುತ್ತಾರೆ ಮತ್ತು ಸ್ಥಳೀಯ ಕ್ರೈಸ್ತ ಯುವಕರನು ಯಾಜಕ ದೀಕ್ಷೆಯ ತರಬೇತಿ ನೀಡಿ, ದೀಕ್ಷೆ ಕೊಟ್ಟು ವಿಶ್ವಾಸಿಗಳು ಸ್ಥಳಿಯ ಯಾಜಕರನ್ನು ಸಿದ್ದ ಮಾಡಿ, ಇಲ್ಲಿನ ಕ್ರೈಸ್ತರಿಗೆ ಸ್ಥಳಿಯ ಯಾಜಕರ ಧಾರ್ಮಿಕ ಸೇವೆ ಪಡೆಯುವಂತ ಯುಗ ಆರಂಭಗೊಳಿಸುತ್ತಾರೆ
ಕುಂದಾಪುರದಲ್ಲಿ ಪಾದ್ರೊವಾದೊ ಪಂಗಡದಿಂದ (ಪೆÇರ್ಚುಗೀಸ್) ಫಾ|ಜೋಸೆಫ್ ವಾಜಾರನ್ನು 1681 ರಲ್ಲಿ ಕೆನರಾದ ಪ್ರಧಾನ ಧರ್ಮಗುರುಗಳಾಗಿ 1681 ರಲ್ಲಿ ಕುಂದಾಪುರಕ್ಕೆ ಕಳುಹಿಸಿಕೊಡುತ್ತಾರೆ. ಕುಂದಾಪುರ ಚರ್ಚನ್ನು ಅವರು ದುರಸ್ಥಿ ಮಾಡುತ್ತಾರೆ, ಜೋಸೆಫ್ ವಾಜ್ ಅವರು ಅವರ ಕೋಣೆಯಲ್ಲಿ ಧ್ಯಾನದಲ್ಲಿದ್ದಾಗ ಅವರು ಯಾವ ಆಧಾರವೂ ಇಲ್ಲದೆ ನೆಲದಿಂದ ಗಾಳಿಯಲ್ಲಿ ತೇಲುತಿದ್ದದನ್ನು ಯಾಜಕರೊಬ್ಬರು ಕಣ್ಣಾರೆ ಕಂಡ ಘಟನೆ ಚಾರಿತ್ರಿಕವಾಗಿ ದಾಖಲಾಗಿದ್ದು, ಮುಂದೆ ಅವರು ಶ್ರೀಲಂಕಾಗೆ ತೆರಳಿ ಹೆಚ್ಚಿನ ಅದ್ಬುತಗಳನ್ನು ಮಾಡಿ ಸಂತ ಪದವಿಯನ್ನು ಗಳಿಸುತ್ತಾರೆ. 1714 ರ ಮೊದಲೇ ಡಚ್ಚರ ಕಾಟದಿಂದ ತಪ್ಪಿಸಿಕೊಳ್ಳಲು ಈಗಿದ್ದ ಚರ್ಚ್ ಜಾಗದಲ್ಲಿ ಪೋರ್ಚುಗೀಸರು ಚರ್ಚ್ ಕಟ್ಟಿಸಿರಬೇಕು ಇದು ನಾಲ್ಕನೇ ಮೈಲಿಗಲ್ಲು.
ಪೋರ್ಚುಗೀಸರು ಮತ್ತು ಬಸ್ಸಪ್ಪ ನಾಯಕನ ನಡುವೆ ಒಪ್ಪಂದವಾಗಿ. ಬಸಪ್ಪ ನಾಯ್ಕನಿಂದ 1714 ರಲ್ಲಿ ಕ್ಯಾಥೊಲಿಕ್ ಧರ್ಮಗುರುಗಳು ಸಾಕಾಷ್ಟು ಅಧಿಕಾರ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಅದೇ ವೇಳೆ ಚರ್ಚ್ ಇದ್ದ ಭೂಮಿ ಚರ್ಚಿಗಾಗಿ ಇನಾಮ್ ಆಗಿ ಒಪ್ಪಿಕೊಂಡರು ಎಂದು ಚರಿತ್ರಾಕಾರರು ತಿರ್ಮಾನಕ್ಕೆ ಬರುತ್ತಾರೆ. ನಂತರ ಪೋರ್ಚುಗೀಸರು ಪ್ರಸ್ತುತ ಭೂಮಿಯನ್ನು ಚರ್ಚ್ ಆಡಳಿತಕ್ಕೆ ಹಸ್ತಾಂತರಿಸಿದರು ಮತ್ತು ಅಲ್ಲೆ ಪಕ್ಕದಲ್ಲಿ ಪೆÇರ್ಚುಗೀಸ್ ಶೈಲಿಯ ಚರ್ಚನ್ನು ಕ್ರಿ.ಶ 1757 ರಲ್ಲಿ ನಿರ್ಮಿಸಲಾಯಿತು. ಇದು ಚರ್ಚಿನ ಐದನೇ ಮೈಲಿಗಲ್ಲು. ಈಗಿರುವ ಚರ್ಚ್ 1965 ರಲ್ಲಿ ಕಟ್ಟಿದ ಆಧುನಿಕ ಶೈಲಿಯ ಚರ್ಚ್ ಆಗಿದೆ. ಇದು ಚರ್ಚಿನ ಆರನೇ ಮೈಲಿಗಲ್ಲು
1784 ರಲ್ಲಿ ಕೆನರಾದ ಕ್ರಿಶ್ಚಿಯನ್ ಸಮುದಾಯದವರನ್ನು ಸುಮಾರು 60.000 ರಿಂದ 80.000 ಕ್ರೈಸ್ತರನ್ನು ಟಿಪ್ಪು ಸುಲ್ತಾನ್ ಸೆರೆ ಹಿಡಿದು ಕೈದಿಗಳಾನ್ನಾಗಿಸಿದ್ದು ಕ್ರೈಸ್ತರಿಗೆ ಆದ ಒಂದು ದೊಡ್ಡ ಆಘಾತ.ಈ ಘಟನೆ ನಡೆಯದಿದ್ದರೆ ಕೇರಳದಲ್ಲಿರುವಂತೆ, ಇಲ್ಲಿಯೂ ಅಗಾಧ ಪ್ರಮಾಣದಲ್ಲಿ ಕ್ರೈಸ್ತರು ಇರುತಿದ್ದರೆಂದು ಕುಂದಾಪುರ ಚರ್ಚ್ ಚರಿತ್ರೆಯನ್ನು ಪರಿಶೀಲಿಸಿದ ಶ್ರೀಯುತ ರೋಕ್ ಕರ್ವಾಲ್ಲೊ ಹೇಳುತ್ತಾರೆ.
ಈ ಸಮಯದಲ್ಲಿ ಟಿಪು ಕುಂದಾಪುರ ಚರ್ಚಿನ ಛಾವಣಿಯನ್ನು ಹಾಳುಗೆಡವಿದ. ಇಲ್ಲಿನ ವಿಕಾರ್ ವಾರ್ ಇವರನ್ನು ಓಡಿಸಿ ಟಿಪು ಕುಂದಾಪುರ ಇಗರ್ಜಿಯ ಭೂಮಿಯನ್ನು ಖಾದಿರ್ ಆಲಿಗೆ ಮಾರಿದನು. ಮುಂದೆ ಖಾದಿರ್ ಆಲಿ ವಾಗ್ದಾನವನ್ನು ಬದಲಿಸಿ ಚರ್ಚಿಗೆ ಭೂಮಿಯನ್ನು ಹಿಂತಿರುಗಿಸಿದ. ಕ್ರಿ.ಶ 1842 ರಲ್ಲಿ ಬಾರ್ಸೆಲೋರ್ (ಕುಂದಾಪುರ) ಚರ್ಚ್ ಮತ್ತು ಇತರ ಚರ್ಚುಗಳು ತಮ್ಮ ನಿಶ್ಠೆಯನ್ನು ಪೋಪ್ ಸ್ವಾಮಿಗೆ ನೀಡುತ್ತಾರೆ, ಆಮೇಲೆ ಎಲ್ಲ ಉದ್ದೇಶಗಳಿಗಾಗಿ ಬಾರ್ಸೆಲೋರ್ ಧರ್ಮಕೇಂದ್ರವನ್ನು ಕುಂದಾಪುರ ಧರ್ಮಕೇಂದ್ರ ಎಂದು ಕರೆಯಲಾಯಿತು. ಕ್ರಮೇಣ ಬಾರ್ಸೆಲೋರ್ ಎಂಬ ಹೆಸರು ಸಂಪೂರ್ಣವಾಗಿ ಮರೆಯಾಯ್ತು. ಫಾ| ಲಾರೆನ್ಸ್ ಪಾಯ್ಸ್ ಕುಂದಾಪುರದ ವಿಕಾರ್ ಆಗಿ ಬಂದವರು ಹಳೆ ಇಗರ್ಜಿ ಶಿಥಿಲವಾದದ್ದನ್ನು ನೋಡಿ, ಅದನ್ನು ಕೆಡವಿ, ಈಗಿರುವ ಚರ್ಚನ್ನು ಕಟ್ಟಿಸಿದರು. ಅದನ್ನು 1967 ರಲ್ಲಿ ಅಂದಿನ ಬಿಷಪ್ ಅ|ವಂ|ಬಾಸೀಲ್ ಡಿಸೋಜಾ ಉದ್ಘಾಟಿಸಿದರು.
ಚರ್ಚ್ 450 ವರ್ಷಗಳ ಸಂಭ್ರಾಮಾಚರಣೆಯ ಕಾಲ ಘಟ್ಟದಲ್ಲಿ
450 ವರ್ಷಗಳ ಸಂಭ್ರಾಮಾಚರಣೆ ಆಚರಿಸುವ ಈ ಶುಭ ಸಂದರ್ಭದಲ್ಲಿ (2020-21) ನಮ್ಮ ರೋಸರಿ ಮಾತಾ ಇಗರ್ಜಿಯಲ್ಲಿ ಪ್ರಧಾನ ಗುರುಗಳಾಗಿ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಗುರುಗಳಾಗಿ ವಂ|ವಿಜಯ್ ಡಿಸೋಜಾ, ಮತ್ತು ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಸೇವೆ ನೀಡುತ್ತಿದ್ದಾರೆ. ಜೊತೆಗೆ ಉಪಾಧ್ಯಕ್ಷರಾದ ಶ್ರೀ ಲುವಿಸ್ ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಆರ್ಥಿಕ ಸಮಿತಿಯ ಸದಸ್ಯರು, ಹಾಗೂ ಚರ್ಚಿನ ಎಲ್ಲಾ ಭಕ್ತಾಧಿಗಳ ಸಹಕಾರದಿಂದ ಚರ್ಚಿನಲ್ಲಿ ಹತ್ತು ಹಲವಾರು ನವೀಕರಣ ಕಾರ್ಯ ಮಾಡಲ್ಪಟ್ಟು, ನೂತನವಾದ ಕಲಾತ್ಮಕವಾದ ಅಲ್ತಾರನ್ನು, ಪಾಲಾಕಿ ರೋಸರಿ ಮಾತೆಯ ಮತ್ತು ಸಂತ ಜೋಸೆಫ್ ವಾಜ್‍ರ ಮೂರ್ತಿಗಳನ್ನು ಸುಂದರವಾಗಿ ಅಳವಡಿಸಿ, ಚರ್ಚ್ ಎದುರಿಗಿದ್ದ ಆವರಣದಲ್ಲಿ ನಿಧನ ಹೊಂದಿದವರ ಸ್ಮಾರಕ ಹಾಸುಕಲ್ಲನ್ನು ತೆರವುಗೊಳಿಸಿ, ಅವುಗಳನ್ನು ಆವರಣ ಗೋಡೆಗೆ ಅಳವಡಿಸಿ ಆವರಣವನ್ನು ನವೀಕರಿಸಿದ್ದಾರೆ ಹೀಗೆ ಚರ್ಚಿಗೆ ಹೊಸ ರೂಪ, ಹೊಸಕಳೆ ಬಂದಿದೆ.ಇದೇ ವರ್ಷ (1920-21) ಪ್ರಪಂಚದಲ್ಲಿ ಕೊರೊನಾ ಬಂದು ಹಲವಾರು ಕಷ್ಟ ಕಾರ್ಪಣ್ಯಗಳು ಬಂದವು, ಆದರೆ ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಚರ್ಚಿಗೆ ಬರಲು ಆಸ್ಪದ ಇಲ್ಲದೇ ಇದ್ದುದರಿಂದ ಇಗರ್ಜಿಯನ್ನು ನವೀಕರಣ ಮಾಡಲು ರೋಸರಿ ಮಾತೆಯೆ ಆಸ್ಪದ ಕೊಟ್ಟದಂತೂ ನಿಜವಾಗಿದೆ)
ಈ ಧರ್ಮಕೇಂದ್ರ ಬರೆ ದೇವರ ಧ್ಯಾನವನ್ನು ಕಲಿಸುವುದಲ್ಲದೆ, ನೂರಾರು ವರ್ಷಗಳ ಹಿಂದಿನಿಂದಲೂ ವಿದ್ಯಾದಾನ ನೀಡುತ್ತದೆ ಆ ನಿಟ್ಟಿನಲ್ಲಿ ಕನ್ನಡ ಪ್ರಾಥಮಿಕ ಶಾಲೆ,ಕನ್ನಡ ಪ್ರೌಢ ಶಾಲೆ, ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಹಾಗೆ ಸಂತ ಮೇರಿಸ್ ಪಿ.ಯು.ಕಾಲೇಜ್ ಇವುಗಳ ಮುಖಾಂತರ ವಿದ್ಯಾದಾನ ನೀಡಿ ವಿದ್ಯಾ ಕೇಂದ್ರವೂ ಅಗಿದೆ. ಪುಟ್ಟ ಮಕ್ಕಳಿಗೂ ಕಿಂಡರ್ ಗಾರ್ಟನ್ ಶಾಲೆ ಕೂಡ ಇದ್ದು ಸಮಾಜಕ್ಕೆ ಮಹತ್ತರ ದೇಣಿಗೆ ನೀಡಿದೆ. ಒಂದು ಕಾಲದಲ್ಲಿ ಬಹಳ ಪ್ರಸಿದ್ದವಾದ ಕುಂದಾಪುರ ಪ್ರೆಸ್ ಕೂಡ ಇದ್ದು ಅದು ಎಲ್ಲರ ಮನೆ ಮಾತಾಗಿತ್ತು. ಇಷ್ಟಲ್ಲದೆ ಚರ್ಚಿನ ಆಶೆಯಂತೆ ಕಾರ್ಮೆಲ್ ಸಂಸ್ಥೆಯ ಭಗಿನಿಯರು ಕುಂದಾಪುರದಲ್ಲಿ ಸಂತ ಜೋಸೆಫ್ ಕಾನ್ವೆಂಟ್ ಕಟ್ಟಿ, ಬಡ ಮಕ್ಕಳಿಗಾಗಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಅನಾಥಶ್ರಮ ಆರಂಭಿಸಿ ಸಾವಿರಾರು ಮಕ್ಕಳಿಗೆ ಜೀವನದ ಸಫಲತೆಯನ್ನು ನೀಡಿದ್ದಾರೆ. ನಂತರ ಬಡ ಹೆಣ್ಣುಮಕ್ಕಳಿಗಾಗಿ ಕನ್ನಡ ಪ್ರೌಢ ಶಾಲೆ ತೆರೆದು ಶಿಕ್ಷಣ ನೀಡಿದ್ದಾರೆ. ಒಂದೊಮ್ಮೆ ಈ ಶಾಲೆ ಬಹಳ ಹೆಸರು ಗಳಿಸಿತ್ತು.
ಕುಂದಾಪುರ ಚರ್ಚಿನಲ್ಲಿ ಬಹಳಷ್ಟು ಅಚ್ಚರಿಯ ಘಟನೆಗಳು ನಡೆದಿವೆ. ಒಮ್ಮೆ ಪೆÇರ್ಚುಗೀಸರ ನಾವೇ ಅರಬಿ ಸಮುದ್ರದಲ್ಲಿ ಕೆಟ್ಟು ನಿಂತದ್ದು, ಅವರು ಈ ಚರ್ಚಿಗೆ ಬಂದು ಪ್ರಾರ್ಥಿಸಿದಾಗ ನಾವೆ ಸರಿಯಾದದ್ದು, ಗ್ರೊಟ್ಟೊದಲ್ಲಿದ್ದ ಮೇರಿ ಮಾತೆಯ ಕೊರಳಲಿದ್ದ ಚಿನ್ನದ ಸರವನ್ನು ಯುವಕನೊಬ್ಬ ಕದ್ದು, ಅವನ ಮನಶಾಂತಿ ಕೆಟ್ಟು, ಗ್ರೊಟ್ಟೊ ಪಕ್ಕದಲ್ಲಿದ್ದ ಕೆರೆಗೆ ಹಾರಿದ್ದು, ಕೊನೆಗೆ ಅತ ಸರ ಹಿಂತಿರುಗಿಸಿದ್ದು. ಇಂತಹ ಹಲವು ಘಟನೆಗಳು ಇಲ್ಲಿ ನಡೆದಿವೆ. ನೂತನ ಯೋಜನೆ ಆರಂಭಿಸುವಾಗ ರೋಜರಿ ಮಾತೆಗೆ ಪ್ರಾರ್ಥನೆ ಸಲ್ಲಿಸುವುದು, ತಮ್ಮ ಕೆಲಸ ಕಾರ್ಯಕ್ಕೆ ಹೋಗುವರು ನಮಸ್ಕರಿಸಿ ಮುಂದೆ ಸಾಗುವರು, ಮನಸ್ಸಿಗೆ ಸಮಾಧಾನ ಇಲ್ಲದವವರು ಮಾತೆಯ ಮುಂದೆ ಬಂದು ಪ್ರಾರ್ಥಿಸಿದಾಗ ಸಮಾಧಾನ ದೊರೆತವರು ಎಷ್ಟೊ ಮಂದಿ ಇದ್ದಾರೆ. ಹೀಗೆ ನಿರಂತರವಾಗಿ 450 ರ ವರ್ಷಗಳ ವರೆಗೆ ನಮ್ಮೆಲ್ಲರನ್ನು ಕಾಪಾಡಿಕೊಂಡು ದಯಾಮಹಿ ರೋಸರಿ ಮಾತೆ ನಮ್ಮನ್ನು ಸಲಹುತ್ತಾ ಬಂದಿದ್ದಾಳೆ. ಈ ಮಾತೆಯ 450 ವರ್ಷಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾದ ನಾವು ನೀಜವಾಗಿಯು ಭಾಗ್ಯಶಾಲಿಗಳು. ಮಾತೆ ರೋಸರಿ, ನಮ್ಮೆಲ್ಲರನ್ನು ನಿನ್ನ ಕ್ರಪಾಕಟಾಕ್ಷ್ಯಗಳಿಂದ ಸಾಕಿ ಸಲಹಿರಿ. ನಮೋ ನಿನಗೆ ರೋಸರಿ ಮಾತೆ,
(ಈ ಲೇಖನ ಹಲವಾರು ಲೇಖನಗಳ ಆಧಾರದ ಮೇಲೆ ಬರೆಯಲಾಗಿದೆ)
* ಬರ್ನಾಡ್ ಡಿಕೋಸ್ತಾ,ಕುಂದಾಪುರ