ಶ್ರೀನಿವಾಸಪುರ : ನಮ್ಮ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಒಂದು ಅಂಗವಾಗಿದ್ದು, ಕಣ್ಣಿನ ಆರೋಗ್ಯವನ್ನು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.
ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಮಂಗಳವಾರ ಕಾನೂನು ಸೇವ ಪ್ರಾಧಿಕಾರ ಸಹಯೋಗದೊಂದಿಗೆ ಶ್ರೀನಿವಾಸಪುರ ರೋಟರಿ ಕ್ಲಬ್ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರ ಹಾಗು ಯುವದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ನಡೆದ ದಾರಿಯು ಒಳ್ಳೇಯ ದಾರಿಯಾಗಿದ್ದು, ಇಂದಿನ ಪೀಳಿಗೆಯು ಸ್ವಾಮಿ ವಿವೇಕಾನಂದರರ ಆಶಯಗಳನ್ನು ಯುವಕರು ತಮ್ಮ ಜೀವನಕ್ಕೆ ಆಳಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಯರಾಮೇಗೌಡ ಮಾತನಾಡಿ ಸ್ವಾಮಿವಿವೇಕಾನಂದರು ನಮ್ಮ ದೇಶದ ಸಂಸ್ಕøತಿಯನ್ನು ವಿದೇಶಗಳಲ್ಲಿ ನಮ್ಮ ದೇಶದ ಸಂಸ್ಕøತಿ ಆಚಾರ ವಿಚಾರಗಳನ್ನು ಎತ್ತಿ ಹಾಡಿಹೊಗಳಿದ್ದಾರೆ. ಅವರಲ್ಲಿದ್ದ ದೇಶದ ಪ್ರೇಮನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್ , ಸರ್ಕಾರ ಅಭಿಯೋಜಕ ಮುಕುಂದ, ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ, ವಕೀಲರಾದ ಶ್ರೀನಿವಾಸಗೌಡ, ರಾಧಕೃಷ್ಣ, ವಿನಯ್ಕುಮಾರ್, ಸೌಭಾಗ್ಯ, ವೆಂಕಟರಮಣಪ್ಪ, ನಾರಾಯಣಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ರೋಟರಿ ಅಧ್ಯಕ್ಷ ಮಂಜುನಾಥರೆಡ್ಡಿ, ಕಾರ್ಯದರ್ಶಿ ಶಿವಮೂರ್ತಿ, ಪತ್ರಿಕಾ ಕಾರ್ಯದರ್ಶಿ ಕೃಷ್ಣಮೂರ್ತಿ , ವಾಸನ್ ಕಣ್ಣಿನ ಆಸ್ಪತ್ರೆ ಮಾರುಕಟ್ಟೆ ವ್ಯವಸ್ಥಾಪಕ ಚರಣ್ಕುಮಾರ್ ಇದ್ದರು.
10, ಎಸ್ವಿಪುರ್ : ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಕಾನೂನು ಸೇವ ಸಮಿತಿವತಿ ಸಹಯೋಗದಿಂದ ಶ್ರೀನಿವಾಸಪುರ ರೋಟರಿ ಕ್ಲಬ್ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರಕ್ಕೆ ಬಿ.ಕೆ.ಮನು ಚಾಲನೆ ನೀಡಿ ಮಾತನಾಡಿದರು.