

ಕೋಲಾರ ಆಗಸ್ಟ್ 2. ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ನಮ್ಮ ರಾಷ್ಟ್ರಧ್ವಜವನ್ನು ಗೌರವಿಸಬೇಕು. ಈ ಮೂಲಕ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹರಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ಲಕ್ಷ್ಮಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ರಾಷ್ಟ್ರಧ್ವಜ ವಿನ್ಯಾಸಕಾರ ತಿಂಗಳಿ ವೆಂಕಟಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿ, ದೇಶಪ್ರೇಮ, ಪ್ರಾಥಮಿಕ ಶಾಲೆಯಿಂದಲೇ ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಆಗಬೇಕು, ವಿದ್ಯಾರ್ಥಿ ದೆಸೆಯಿಂದಲೇ, ರಾಷ್ಟ್ರೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.
ರಾಷ್ಟ್ರ ಲಾಂಛನ, ರಾಷ್ಟ್ರ ಚಿನ್ಹೆ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಬಗ್ಗೆ ಅಭಿಮಾನ, ಕೌರವ ಮೂಡುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಪಿoಗಳಿ ವೆಂಕಟಯ್ಯ ಶಿಕ್ಷಣ ತಜ್ಞರಾಗಿ, ಭಾμÁ ದೊಡ್ಡರಾಗಿ, ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು. ಸತತ ಐದು ವರ್ಷಗಳ ಕಾಲ ವಿವಿಧ ರಾಷ್ಟ್ರಧ್ವಜಗಳ ವಿನ್ಯಾಸಗಳನ್ನು ಅಧ್ಯಯನ ಮಾಡಿ ಭಾರತದ ರಾಷ್ಟ್ರಧ್ವಜ ವಿನ್ಯಾಸ ಮಾಡಿದ ಅವನ ವ್ಯಕ್ತಿ ಎಂದು ಬಣ್ಣಿಸಿದರು.
ಅಷ್ಟಧ್ವಜ,ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ನಮ್ಮ ರಾಷ್ಟ್ರದ ಗೌರವದ ಸಂಕೇತಗಳಾಗಿದೆ ಇದನ್ನು ಬಳಸುವ ವಿಧಿ ವಿಧಾನಗಳ ಬಗ್ಗೆ ಜಿಲ್ಲಾ ಭಾರತ ಸೇವಾದಳ ಘಟಕ ಎಂ ಬಿ ದಾನೇಶ್ ತಿಳಿಸಿಕೊಟ್ಟರು.
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ, ಆರೋಗ್ಯ ಮತ್ತು ಶಿಕ್ಷಣ ಸಾಕ್ಷರತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
