ಪ್ರಧಾನಿ ಮೋದಿ ಅವರ ಅಶಯದಂತೆ ಸ್ವಚ್ಛ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು:ಡಾ. ಕೆ.ಎನ್.ವೇಣುಗೋಪಾಲ್

ಶ್ರೀನಿವಾಸಪುರ: ಪ್ರಧಾನಿ ಮೋದಿ ಅವರ ಅಶಯದಂತೆ ಸ್ವಚ್ಛ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು ಹೇಳಿದರು.
ಅಮೃತ್ ಸರೋವರ್ ಯೋಜನೆ ಅಡಿಯಲ್ಲಿ ಕೆರೆಗಳ ಅಭಿವೃದ್ಧಿ ಮಾಡಲಾಗುವುದು. ಕೆರೆ ತುಂಬಿದರೆ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಪರಿಸರ ಚೇತರಿಸಿಕೊಳ್ಳುತ್ತದೆ. ಮಳೆ ನೀರು ಸಂಗ್ರಹ ಹಾಗೂ ನೀರು ಶೇಖರಣಾ ಕಾರ್ಯಾಗಾರಗಳ ಮೂಲಕ ಜಲ ಸಂಪತ್ತಿನ ರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಸೆ.25 ರಂದು ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಬಿಜೆಪಿ ರಾಜಕೀಯ ಚುನಾವಣೆಗೆ ಸೀಮಿತ, ಚುನಾವಣೆ ಮುಗಿದ ಮೇಲೆ ದೇಶದ ಅಭಿವೃದ್ಧಿ ಕಡೆ ಗಮನ ನೀಡಲಾಗುವುದು ಎಂದು ಹೇಳಿದರು.
ಮುಖಂಡರಾದ ರೋಣೂರು ಚಂದ್ರಶೇಖರ್, ಡಾ. ನಾಗರಾಜ್, ರೆಡ್ಡಪ್ಪ, ವಿ.ನಿಶಾಂತ್ ಕುಮಾರ್, ಷಫಿ, ನಾರಾಯಣಸ್ವಾಮಿ, ರಾಜು, ನಾರಾಯಣಪ್ಪ, ರಾಮಾಂಜಿ, ರಮೇಶ್, ಎನ್.ಆರ್.ಚಂದ್ರಶೇಖರ್ ಇದ್ದರು.