ಶ್ರೀನಿವಾಸಪುರ : ಎಲ್ಐಸಿ ಯಿಂದ ಮ್ಯಾಡ್ ಮಿಲಿಯನ್ ಡೇಯನ್ನ ಪ್ರತಿನಿದಿಗಳಿಗಾಗಿ ಹೊಸ ವ್ಯವಹಾರ ಸ್ಪರ್ದೆಯನ್ನು ಏರ್ಪಡಿಸಲಾಗಿ ಜ. 20 ರೊಳಗೆ ದೇಶಾದ್ಯಾಂತ 14 ಲಕ್ಷ ಪಾಲಿಸಿ ಮಾಡಿಸಲು ಗುರಿಯೊಂದಿದೆ, ಶ್ರೀನಿವಾಸಪುರ ಉಪಶಾಖೆಯಿಂದ 500 ಪಾಲಿಸಿ ಮಾಡಿಸಲು ಪ್ರತಿಯೊಬ್ಬ ಪ್ರತಿನಿಧಿಗಳು ಸಂಕಲ್ಪ ಮಾಡಬೇಕು ಎಂದರು. ವಿಶೇಷ ಅಭಿಯಾನದಡಿಯಲ್ಲಿ ಪ್ರತಿ ನಿಧಿ ಮನೆ ಮನೆಗೆ ಬೇಟಿ ನೀಡಿ ಎಲ್ಎಐಸಿ ಬಗ್ಗೆ ಅರಿವು ಮೂಡಿಸಬೇಕು ಎಂದು ಎಲ್ಐಸಿ ಬೆಂಗಳೂರು – 2 ಮಾರುಕಟ್ಟೆ ವ್ಯವಸ್ಥಾಪಕ ಗುರುಕೃಷ್ಣ ಮಾಹಿತಿ ನೀಡಿದರು.
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಉಪಶಾಖೆ ಉಪ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಮಾತನಾಡಿ ಪ್ರತಿನಿಧಿಗಳು ಗ್ರಾಮಗಳಿಗೆ ಭೇಟಿ ನೀಡಿ ಎಲ್ಐಸಿ ಪ್ರಚಾರ ಮಾಡಬೇಕು. ಮುಖ್ಯವಾಗಿ ಮಹಿಳೆಯರಿಗೆ ಅರಿವು ಮೂಡಿಸಿದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಮಹಿಳಾ ಪಾಲಿಸಿದಾರರ ಸಂಖ್ಯೆ ಹೆಚ್ಚಿಸಬೇಕು. ದುರ್ಘಟನೆಗಳು ಹೇಳಿ ಕೇಳಿ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ಎಲ್ಐಸಿ ಪಾಲಿಸಿದಾರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಉಪಶಾಖೆ ಸಹಾಯಕ ಆಡಳಿತ ಅಧಿಕಾರಿ ಟಿ.ರವಿಶಂಕರ್, ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರಯ್ಯ ಆರ್.ಕುಲಕರ್ಣಿ, ಕೆ.ಬಾಲಚಂದ್ರ, ಎನ್.ಶ್ರೀನಿವಾಸ್, ಲಿಖಿತ್ಕುಮಾರ್ ಹಾಗು ಪ್ರತಿನಿಧಗಳು ಇದ್ದರು