ಶ್ರೀನಿವಾಸಪುರ 3 : ಗ್ರಾಮಗಳಲ್ಲಿನ ಪ್ರತಿಯೊಬ್ಬ ನಾಗರೀಕರು ಮರಗಿಡಗಳ ಪ್ರಾಮುಖ್ಯತೆ , ನೀರು, ಸ್ವಚ್ಚತೆ, ನೈರ್ಮಲ್ಯತೆ , ಆರೋಗ್ಯವನ್ನು ಯಾವರೀತಿಯಾಗಿ ಕಾಪಡಿಕೊಳ್ಳುವುದರ ಅರಿತುಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಕುಮ್ಮಗುಂಟೆ ಗ್ರಾಮದಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರದ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಮನೆ ಮನೆಗೂ ನಲ್ಲಿ ಹಾಕುವ ಕಾಮಗಾರಿಗೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಘಟಕಗಳನ್ನು ನಿರ್ಮಿಸಲಾಗುತ್ತಿದೆ .ಗ್ರಾಮೀಣ ಭಾಗದಲ್ಲಿನ ಜನರಿಗಾಗಿ ವಿವಿಧ ಯೋಜನೆಗಳ ಮೂಲಕ ಅನುಕೂಲಗಳನ್ನು ಮಾಡಿಕೊಡುತ್ತಿದ್ದು ಇವುಗಳನ್ನು ಸಮಾಜದ ಕಟ್ಟಡೆಯ ವ್ಯಕ್ತಿಯು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
64 ಲಕ್ಷ ಮೌಲ್ಯದ ಕಾಮಗಾರಿ ಚಾಲನೆ ನೀಡಿದರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಚೌಡರೆಡ್ಡಿ, ಮನು, ಗುತ್ತಿಗೆದಾರ ಪ್ರಸಾದ್, ಇಂಜಿನೀಯರ್ಗಳಾದ ರೇವಂತ್,ಪ್ರಸಾದ್, ಜೆಇ ಶಿವಕುಮಾರ್ , ಗ್ರಾ.ಪಂ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.