ಒಂದುರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶ ಒದಗಿಬರುತ್ತದೆ.
ರಕ್ತದಾನ ಎನ್ನುವುದು ಬಹಳ ಪವಿತ್ರವಾದ ಕಾರ್ಯ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಲೇಬೇಕು.
ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿ, ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ತರನ್ನು ಮತ್ತು ಗಾಯಗೊಂಡವರನ್ನು ಬದುಕಿಸುವುದು ಸಾಧ್ಯವಾಗುತ್ತದೆ. ಅನೇಕ ತುರ್ತುಸಂದರ್ಭಗಳಲ್ಲಿ ಜನರ ಜೀವ ಉಳಿಸಬೇಕಾದರೆ ರಕ್ತಪೂರೈಕೆ ಬೇಕೇ ಬೇಕು. ಇಷ್ಟು ಬೇಡಿಕೆ ಇರುವ ರಕ್ತಕ್ಕೆ ಬದಲಾಗಿ ಏನನ್ನೋ ಕೊಡಲು ಆಗುವುದಿಲ್ಲ.
ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸಲು ಯಾವುದೇ ವಿಜ್ಞಾನಿಯಿಂದ ಸಾಧ್ಯವಾಗಿಲ್ಲ, ಅನಿವಾರ್ಯವಾಗಿ ರಕ್ತದಾನಿಗಳ ಮೇಲೆ ಅವಲಂಬಿಸಬೇಕಾಗಿದೆ. ಸ್ವಯಂ ಸ್ಪೂರ್ತಿಯಿಂದ ರಕ್ತದಾನ ಮಾಡುವ ಪದ್ಧತಿ ಇನ್ನೂ ಚುರುಕುಗೊಳ್ಳಬೇಕಾಗಿದೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾನವೀಯತೆಯ ದೃಷ್ಟಿಯಿಂದ ಬೇರೆಯವರಿಗೆ ರಕ್ತ ನೀಡುವುದೇ ನಿಜವಾದ ರಕ್ತದಾನ ವಾಗಿದೆ.ಅಭಯಹಸ್ತ