ಶ್ರೀನಿವಾಸಪುರ 1 : ರೈತರು ಕಣ್ಣೀರು ಹಾಕಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಾವು ಉದ್ದಾರ ಆಗಲ್ಲ. ರೈತ ಚಟುವಟಿಕೆಗಳನ್ನು ಮಾಡುತ್ತಿರುವ ಇವರಿಗೆ ಸಾಗುವಳಿ ಕೊಟ್ಟಿರುವವರು ಯಾರು ? ಆರ್ಟಿಸಿ ಮಾಡಿಕೊಟ್ಟಿರುವವರು ಯಾರು ? 70 , 80 ವರ್ಷಗಳ ಹಿಂದೆ ಎಸಿ, ತಹಶೀಲ್ದಾರ್ , ಆರ್ಐಗಳು , ಕಾರ್ಯದರ್ಶಿಗಳು ನೀಡಿರುವುದು ಅವರು ಕೊಡದೆ ಇದ್ದರೆ ಅವರು ಏಕೆ ರೈತ ಚಟುವಟಿಕೆಗಳು ಮಾಡಲು ಸಾಧ್ಯ ಎಂದು ಸಂಸದ ಮುನಿಸ್ವಾಮಿ ಪ್ರಶ್ನಿಸಿದರು.
ತಾಲೂಕಿನ ಪಾಳ್ಯ ಗ್ರಾಮದ ರೈತ ಜಮೀನುಗಳಿಗೆ ಶನಿವಾರ ದಿಡೀರ್ ಬೇಟಿ ನೀಡಿ ಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಗೆ ಬೇಟಿ ನೀಡಿ ರೈತರಿಗೆ ಸಾಂತ್ವಾನ ಹೇಳಿ, ದೂರವಾಣಿ ಮೂಲಕ ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಬಡವರ ಜಮೀನು ಹೇಗೆ ವಶಪಡಿಸಿಕೊಂಡಿರಿ ಎಂದು ಪ್ರಶ್ನಿಸುತ್ತಾ ಮಾತನಾಡಿದರು.
ಎಂಎಲ್ಎ, ಎಂಪಿ ಅಧಿಕಾರ ಶಾಶ್ವತ ಅಲ್ಲ. ರೈತರು ಉಳಿದರೇ ದೇಶ ಉಳಿಯುವುದು ನಾವು ಉಳಿಯಲು ಸಾಧ್ಯ. ರೈತರು ನಮ್ಮ ಅನ್ನದಾತರು. ರೈತರ ಆದಾಯ ದ್ವಿಗಣ ಆಗಬೇಕು ಎಂದು ಕೇಂದ್ರ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
. ಅರಣ್ಯ ಇಲಾಖೆಯು ರಾತ್ರೋರಾತ್ರಿ ಬಂದು ಪಾಳ್ಯ ಬಳಿ ರೈತರ ಮೇಲೆ ದೌರ್ಜನ್ಯ ವೆಸಗುತ್ತಿದೆ. ಜೆಸಿಬಿ ವಾಹನಕ್ಕೆ ಅಡ್ಡಬಂದ ರೈತರು ಹಾಗು ರೈತರ ಮಹಿಳೆಯರ ಮೇಲೆ ಜೆಸಿಬಿ ಹತ್ತಿಸುತ್ತೇನೆ ಎಂದು ಬೆದರಸಿ ಫಸಲುನ್ನು ನಾಶಮಾಡುತ್ತಿದ್ದಾರೆ.
ಸರ್ಕಾರವು ಜನರಿಗೆ ಗ್ಯಾರಂಟಿಗಳಲ್ಲಿ 2000 ಕೊಟ್ಟು ಈತರದ ಅನ್ಯಾಯ ಮಾಡುವುದು ಸರಿಯೇ, ಅಲ್ಲಿಯೇ ಇದ್ದ ಮಹಿಳೆಯರು ನಮಗೆ ಸರ್ಕಾರ ನೀಡುವಂತಹ ಗ್ಯಾರಂಟಿಗಳು ಯಾವುದು ಬೇಡ. ನಮ್ಮ ಜಮೀನು ನಮಗೆ ಕೊಡಲಿ ಸಾಕು ಎಂದು ಮಹಿಳೆಯರು ಹೇಳಿದರು.
ಕೋಲಾರ ಜಿಲ್ಲೆಯ ಕಂದಾಯ ಸಚಿವರಾದ ಕೃಷ್ಣಬೈರೇಗೌಡರೇ ರೈತರ ಗೋಳು ನಿಮಗೆ ಕೇಳಿಸುತ್ತಿಲ್ಲವೇ, ನಿಮ್ಮ ತಂದೆಯು ಒಬ್ಬ ರೈತನ ಮಗನೇ, ಕಿವಿ ಕೇಳಿಸುತ್ತಿಲ್ಲವೆ ರೈತರ ಗೋಳು ಕೇಳಿಸುತ್ತಿಲ್ಲವೆ . ಬನ್ನಿ ಇಲ್ಲಿನ ಸಮಸ್ಯೆಯನ್ನು ನೋಡಿ, ಇಲ್ಲಿ ಒಬ್ಬ ಶಾಸಕ ಸೋತಿರಬಹುದು, ಇನ್ನೊಬ್ಬರು ಗೆದ್ದಿರಬಹುದು ಯಾಕೆ ದ್ವೇಷದ ರಾಜಕರಣ ಮಾಡುವುದು ಬೇಡ. ರೈತರ ಬಲಿಕೊಡುತ್ತಿದ್ದು, ಸಚಿವರು ಇಲ್ಲಿ ಬಂದು ರೈತರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ರೈತರ ಪರವಾಗಿ ರೈತರಿಗೆ ಏನು ಅನ್ಯಾಯವಾಗುತ್ತಿದೆ ಅದನ್ನ ತಡೆಯಲು ನಾವೆಲ್ಲರೂ ಸೇರಿ ಪಕ್ಷಾತೀತವಾಗಿ ರೈತರ ಪರವಾಗಿ ಕೆಲಸ ಮಾಡಬೇಕು. ಸರ್ಕಾರವು ಮಧ್ಯೆ ಪ್ರವೇಶಿಸಿ , ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಮುಖಂಡರಾದ ರೋಣೂರು ಚಂದ್ರಶೇಖರ್, ಹೆಬ್ಬಟ್ಟ ಆನಂದ್, ಪಾಳ್ಯ ಗೋಪಾಲರೆಡ್ಡಿ ಹಾಗು ರೈತರು ಇದ್ದರು.
ಬಾಕ್ಸ್ಗೆ : ಕಳೆದ 20 ದಿನಗಳಿಂದಲೂ ಅರಣ್ಯ ಇಲಾಖೆ ಅರಣ್ಯ ಪ್ರದೇಶವನ್ನು ಸುಮಾರು 560 ಎಕರೆ ಒತ್ತುವರಿ ಮಾಡಿಕೊಂಡ ರೈತರ ಜಮೀನನ್ನು ತೆರವು ಮಾಡಲಾಗಿತ್ತು. ಇನ್ನೂ 2500 ಎಕರೆ ಭೂಮಿಯನ್ನು ಪ್ರಭಾವಿ ರೈತರು ಒತ್ತುವರಿ ಮಾಡಿಕೊಂಡಿದ್ದು, ಹಂತ ಹಂತವಾಗಿ ತೆರವು ಮಾಡಲು ಅರಣ್ಯ ಅಧಿಕಾರಿಗಳ ಚಿಂತನೆ.