ಅರಸು ನರ್ಸಿಂಗ್ ಕಾಲೇಜಿನ ನೈತಿಕ ಸಮಿತಿ ಸಭೆ18 ಸಂಶೋಧನಾ ವರದಿಗಳ ನೈತಿಕ ಅನುಮೋದನೆ

ಕೋಲಾರ:- ನಗರದ ಹೊರವಲಯದ ಶ್ರೀ ದೇವರಾಜ್ ಅರಸು ಕಾಲೇಜ್ ಆಫ್ ನರ್ಸಿಂಗ್ ನೈತಿಕ ಸಮಿತಿ ಸಭೆಯು ಶುಕ್ರವಾರ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನರ್ಸಿಂಗ್ ಕಾಲೇಜಿನ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಪದವಿ ವಿದ್ಯಾರ್ಥಿಗಳು ವಿವಿಧ ವಿಚಾರಗಳಲ್ಲಿ ಸಂಶೋಧನೆ ನಡೆಸಿದ್ದ 18 ಸಂಶೋಧನಾ ವರದಿಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು.
ಎಲ್ಲಾ ಸಂಶೋಧನಾ ವರದಿಗಳು ನೈತಿಕ ಮೌಲ್ಯಗಳನ್ನು ಒಳಗೊಂಡಂತೆ, ಉತ್ತಮ ಗುಣಮಟ್ಟ ಹಾಗೂ ಸಾರ್ವಜನಿಕರಿಗೆ ಉಪಯೋಗಕಾರಿಯಾಗುವಂತದ್ದೆಂದು ಸಮಿತಿಯ ಸದಸ್ಯರುಗಳು ಅಭಿಪ್ರಾಯಪಟ್ಟರು.
ಸಂಶೋಧನಾ ವರದಿಗಳನ್ನು ಮತ್ತಷ್ಟು ಉತ್ತಮಗೊಳಿಸುವ ವಿಚಾರದಲ್ಲಿ ಸಮಿತಿಯ ಸದಸ್ಯರು ಹಲವಾರು ಸಲಹೆಗಳನ್ನು ನೀಡಿದರು.
ಸಮಿತಿಯ ಸಭೆಯಲ್ಲಿ ನಿಮ್ಹಾನ್ಸ್ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರಶಾಂತಿ, ನಂದಿ ಮೆಡಿಕಲ್ ಕಾಲೇಜಿನ ಉಪನ್ಯಾಸಕರಾದ ಡಾ.ಆಶಾ, ಪತ್ರಕರ್ತ ಕೆ.ಎಸ್.ಗಣೇಶ್, ಆನಂದಮಾರ್ಗದ ಚಿನ್ಮಯಾನಂದ ಸ್ವಾಮೀಜಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಲಕ್ಷ್ಮಿ, ಉಪ ಪ್ರಾಂಶುಪಾಲ ಡಾ.ಲಾವಣ್ಯ ಸುಭಾಷಿಣಿ ಹಾಜರಿದ್ದರು.