ಕುಂದಾಪುರ: ಮಹಿಳೆ ಪುರುಷ ಪರಸ್ಪರ ಗೌರವಿಸಿ ಪ್ರೇರಣೆ ನೀಡಿದಾಗ ಮಾತ್ರ ಪ್ರಜಾಪ್ರಭುತ್ವ ದೇಶದಲ್ಲಿ ಸಮಾನತೆ ಸಾಧ್ಯ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ರೇಖಾ ಬನ್ನಾಡಿ ಹೇಳಿದರು .
ಅವರು ಮಾರ್ಚ್ 20ರಂದು ಕಾಲೇಜಿನ ಮಹಿಳಾ ಕುಂದುಕೊರತೆ ಮತ್ತು ಪರಿಹಾರ ವೇದಿಕೆಯು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಪ್ರೇರೇಪಿಸಿ ಮತ್ತು ಗೌರವಿಸಿ” ಎಂಬ ವಿಷಯದ ಕುರಿತು ಮಾತನಾಡಿದರು.
ಸಮಾಜದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಜೊತೆಗೆ ಸೌಲಭ್ಯಗಳು ದೊರೆಯುತ್ತಿವೆ. ನಾವು ಕೆಲವು ಹುದ್ದೆಗಳಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ . ಆದರೆ ಅದೇ ಉನ್ನತ ಹುದ್ದೆ ರಾಜಕೀಯ ಈ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸ್ಥಾನದ ಕುರಿತು ಯೋಚಿಸುವಂತಾಗಿದೆ. ಆದರೂ ಅತ್ಯಾಚಾರ ಗ್ಯಾಂಗ್ ರೇಪ್, ಪ್ರತಿನಿತ್ಯ ಆಗುತ್ತಿದೆ. ಪ್ರೀತಿ ಮತ್ತು ಅನೈತಿಕಯ ಹೆಸರಲ್ಲಿ ಮಹಿಳಾ ಶೋಷಣೆ ಆಗುತ್ತಿದೆ. ಆಗ ನಾವು ಸುರಕ್ಷಿತೆಯ ಬಗ್ಗೆ ಯೋಚಿಸಬೇಕು. ಮಹಿಳೆ ಮತ್ತು ಪುರುಷ ಪರಸ್ಪರ ಗೌರವಿಸಬೇಕಾಗಿದೆ. ನಮ್ಮ ಆಲೋಚನೆಯ ಕ್ರಮ ಬದಲಾಗಬೇಕು. ಪ್ರಗತಿಪರತೆಯ ಜೊತೆ ಪರಸ್ಪರ ಗೌರವ ಮತ್ತು ಪ್ರೇರೆಪಣೆ ಸಿಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು.
ಮಹಿಳಾ ಕುಂದುಕೊರತೆ ಮತ್ತು ಪರಿಹಾರ ವೇದಿಕೆಯ ಸಂಯೋಜಕರಾದ ಪ್ರೊ.ಮೀನಾಕ್ಷಿ ಎನ್.ಎಸ್ ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಸಂಜನಾ ಕಾರ್ಯಕ್ರಮ ನಿರೂಪಿಸಿ, ಸುಶ್ಮಿತಾ ಪರಿಚಯಿಸಿದರು.