ಶ್ರೀನಿವಾಸಪುರ : ಮಹಿಳೆಯರಿಗೆ ಸಮಾಜದಲ್ಲಿ ಸಮಾನವಾದ ಅವಕಾಶಗಳು ಬಗ್ಗೆ ಸಂವಿದಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಇರುತ್ತಿದ್ದರು. ಆದರೆ ಇಂದು ಮಹಿಳೆಯರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗುಳ್ಳುವದರ ಮೂಲಕ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿರ್ತುವುದು ಮಹಿಳೆಯರು ಸಮಾನವಾದ ಹಕ್ಕು ಪಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಸಚಿನ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಗಳ ಸಮಿತಿ, ತಾಲೂಕು ಆಡಳಿತ , ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕು ಪಂಚಾಯಿತಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ “ವಿಧಾನ್ ಸೇ ಸಮಾಧಾನ್” ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಯಾವುದೇ ರೀತಿಯಾದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಆಗ ತಮಗೆ ಆಗಿರುವ ಅನ್ಯಾಯವನ್ನು ಎತ್ತಿತೋರಿಸಲು ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತದೆ ಆದ್ದರಿಂದ ನ್ಯಾಯ ಸಿಗಲು ಸಾಕ್ಷಿಗಳನ್ನ ಭದ್ರತೆ ಕಾಪಾಡಿಕೊಳ್ಳಬೇಕು. ಇತ್ತೀಚಿಗೆ ಕೆಲವು ಘಟನೆಗಳು ಕಾನೂನುನ್ನು ಸದ್ಭಳಕೆಗಿಂತ ದುರ್ಭಳಕೆ ಮಾಡಿಕೊಳ್ಳುತ್ತಿದ್ದು, ಅವುಗಳ ತಡೆಗಟ್ಟುವ ಸಲುವಾಗಿ ಎಲ್ಲರೂ ಕೈಜೋಡಿಸಿ ನ್ಯಾಯಬದ್ದವಾದ ಕಾನೂನುನ್ನ ಆಚರಣೆಗೆ ಬರುವಂತೆ ವ್ಯವಹರಿಸಬೇಕು ಎಂದು ಸೂಚಿಸಿದರು.
ಸಂವಿದಾನದಲ್ಲಿ ಕಾನೂನು ಬದಲಾವಣೆಯಾಗಿತ್ತಿದ್ದು, ಈ ಕಾರ್ಯಾಗಾರದಲ್ಲಿ ಪಾಲ್ಗುಂಡಿರುವ ಮಹಿಳೆಯರು ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು, ಲೈಗಿಂಕ ದೌರ್ಜನ್ಯ, ಬಾಲ್ಯ ವಿವಾಹ ಕಾನೂನು ಅಪರಾದ, ವರದಕ್ಷಣೆ ಕಿರುಕಳ ಬಗ್ಗೆ ಮಾಹಿತಿ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಪುರಸಭೆ ಮುಖ್ಯಾಧಿಕಾರಿ ವೈ.ಆರ್. ಸತ್ಯನಾರಾಯಣ, ವಕೀಲರ ಸಂಘದ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಟಿಎಚ್ಒ ಮೊಹಮ್ಮದ್ ಶರೀಫ್, ಸಿಡಿಪಿಒ ನವೀನ್ಕುಮಾರ್, ವಕೀಲರಾದ ಜೆ.ಎನ್.ಶಂಕರಪ್ಪ, ಎನ್.ಶ್ರೀನಿವಾಸಗೌಡ, ಸಿ.ಸೌಭಾಗ್ಯ, ಶಿಕ್ಷಕ ರಾಮಾಂಜನೇಯ, ಆರೋಗ್ಯ ಇಲಾಖೆ ಸಿಬ್ಬಂದಿ ಆಂಜಾಲಮ್ಮ, ಸಿಡಿಪಿಒ ಇಲಾಖೆ ಸಿಬ್ಬಂದಿ ಶರಣಮ್ಮ, ಇಸಿಒ ಸುಬ್ರಮಣಿ ಇದ್ದರು.